ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದು ನಿಲ್ಲಿಸಬೇಕು. ನಾಣ್ಣುಡಿ ಇದೆ ಅಂತಾ ಹೇಳಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಇದನ್ನು ನಿಲ್ಲಿಸಿದರೆ ಒಳ್ಳೆಯದು, ಚುಚ್ಚು ಮಾತುಗಳನ್ನಾಡುವಾಗ ವಿವೇಚನೆ ಇರಬೇಕು ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪೋಲಿಸರಿಗೆ ವಾರದ ರಜೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅವರಿಗೆ ಮಾನಸಿಕವಾಗಿ ವಿಶ್ರಾಂತಿ ಸಿಗುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಭತ್ಯೆ ನೀಡುವುದರ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಾಗುವುದು ಎಂದು ಪರಮೇಶ್ವರ್ ಹೇಳಿದರು.
Home Minister G Parameshwar: ಕಮಿಷನರ್ ಕಚೇರಿಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳ ಜೊತೆ ಗೃಹ ಸಚಿವ ಜಿ ಪರಮೇಶ್ವರ್ ಸಭೆ ನಡೆಸಿದರು. ಹೆಣ್ಣುಮಕ್ಕಳ ಸೇಫ್ಟಿ, ಡ್ರಗ್, ರೌಡಿಸಂ, ಮಾಫಿಯಾಗೆ ಬ್ರೇಕ್ ಹಾಕಬೇಕು ಖಡಕ್ ಸೂಚನೆ ನೀಡಿದ್ದಾರೆ.
ʻಇಂದಿನ ಕಾರ್ಯಕ್ರಮದಲ್ಲಿ 8 ಮಂದಿಯ ಪ್ರಮಾಣ ವಚನ ಗೊತ್ತಿಲ್ಲ. ಖಾತೆ ನೀಡುವ ವಿಚಾರ ಮುಖ್ಯ ಮಂತ್ರಿಗಳ ವಿವೇಚನೆ. ನನ್ನ ಇಷ್ಟದ ಖಾತೆ ವಿಚಾರ ನನ್ನದು ಏನೇನೋ ಇದೆ. ಡಿಸಿಎಂ ಹುದ್ದೆ ಕೇಳುವವರು ಸಾಕಷ್ಟು ಜನ ಬರ್ತಾರೆ. ನನಗೆ ಯಾವುದೇ ಬೇಸರ ಇಲ್ಲ, ಅಸಂತೋಷದ ವಿಚಾರ ಇಲ್ಲʼ ಎಂದು ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಹೇಳಿಕೆ
ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ಗೆ ಕಲ್ಲೇಟು. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಪರಮ್ ಡಿಸ್ಚಾರ್ಜ್. ಪರಮೇಶ್ವರ್ ನೋಡಲು ಅಭಿಮಾನಿಗಳ ದೌಡು. ಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಪರಮೇಶ್ವರ್. ತುಮಕೂರಿನ ಹೆಗ್ಗೆರೆ ಬಳಿಯ ಪರಮೇಶ್ವರ್ ನಿವಾಸ.
ಸಿದ್ದರಾಮಯ್ಯ 2 ಕ್ಷೇತ್ರದ ಕ್ಲೈಮ್ಯಾಕ್ಸ್ಗೆ ಇಂದು ತೆರೆ ಬೀಳೋ ಸಾಧ್ಯತೆ ಇದೆ. ಸೆಂಟ್ರಲ್ ವರ್ಕಿಂಗ್ ಕಮಿಟಿ ಪರ್ಮಿಷನ್ ಕೊಟ್ಟರೆ ಮಾತ್ರ 2 ಕಡೆ ಸ್ಪರ್ಧೆ ಮಾಡಲಿದ್ದಾರೆ. ಸಿದ್ದರಾಮಯ್ಯನವರು ಎರಡು ಕಡೆ ನಿಲ್ಲುವಂತಹ ಅನಿವಾರ್ಯತೆ ಏನೂ ಇಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ..
ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರನ್ನಾಗಿ ಎಐಸಿಸಿ ಕಾರ್ಯದರ್ಶಿಗಳಾದ ಮೋಹನ್ ಪ್ರಕಾಶ್ ಅವರನ್ನು ಆಯ್ಕೆ ಮಾಡಿದೆ. ಅಲ್ಲದೆ, ನೀರಜ್ ದಂಗಿ, ಮೊಹಮ್ಮದ್ ಜಾವೇದ್, ಸಪ್ತಗಿರಿ ಉಲಕಾ ಅವರನ್ನು ಕಮಿಟಿಯ ಸದಸ್ಯರನ್ನಾಗಿ ನೇಮಿಸಿದೆ.
ಕಾಂಗ್ರೆಸ್ ದಲಿತ ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದೆ. ಇವರೆಲ್ಲಾ ನಮ್ಮ ಜೊತೆ ಇದ್ದಾಗ ನಾವು ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಅರ್ಥವಾಗಲ್ವಾ ಎಂದು ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಬಿಜೆಪಿ ಅಧಿಕಾರ ಬಂದಾಗಲೆಲ್ಲಾ ಪಠ್ಯ ಪುಸ್ತಕ ಕೇಸರಿಕರಣ ಆಗುತ್ತದೆ. ಅವರ ಸಿದ್ಧಾಂತ ಒಪ್ಪಿ ಪ್ರಚಾರ ಮಾಡಿದವರನ್ನು ಪಠ್ಯ ಪುಸ್ತಕದಲ್ಲಿ ಸೇರಿಸುತ್ತಾರೆ. ಈ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಒಬ್ಬ ನಟ ಅಷ್ಟೇ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಅವರ ಕೈಯಲ್ಲಿ ಯಾವುದೇ ನಿರ್ಧಾರ ಇಲ್ಲ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.