PM Modi hugs Rishi Sunak Video: ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬ್ರಿಟನ್ ಪ್ರಧಾನಿ ಶುಕ್ರವಾರ ದೆಹಲಿಗೆ ಆಗಮಿಸಿದ್ದರು. ಅವರ ಜೊತೆ ಪತ್ನಿ ಅಕ್ಷತಾ ಮೂರ್ತಿ ಕೂಡ ಆಗಮಿಸಿದ್ದಾರೆ.
ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಜಿ-20 ಶೃಂಗಸಭೆ ಸಮೀಪಿಸುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಪಿಟಿಐಗೆ ವಿಶೇಷ ಸಂದರ್ಶನವನ್ನು ನೀಡಿದರು. ಈ ಸಂವಾದದಲ್ಲಿ ಪಿಎಂ ಮೋದಿ ಜಿ-20 ನಲ್ಲಿ ಭಾರತದ ಪಾತ್ರ, ಅದರ ಜಾಗತಿಕ ದೃಷ್ಟಿಕೋನ ಮತ್ತು ವಿವಿಧ ಒತ್ತುವ ವಿಷಯಗಳ ಕುರಿತು ಚರ್ಚಿಸಿದರು.
ವಿವಿಧ ಬಣ್ಣದ ಹಲವು ಸಣ್ಣ ತುಣುಕುಗಳನ್ನು ದಾರದಿಂದ ಹೊಲಿದು ಜೋಡಿಸಿ, ಅದರ ಮೇಲೆ ಕಸೂತಿ ಮಾಡುವ ಲಂಬಾಣಿ ಮಹಿಳೆಯರ ಕಲೆ, ಶ್ರಮ ಸಂಸ್ಕೃತಿಯ ಪ್ರತೀಕ. ಆದಿ ಕಾಲದ ಮಾನವನ ಸುಪ್ತ ಪ್ರಜ್ಞೆಯಲ್ಲಿ ಅರಳಿದ ಕಲೆಗಳು ಇಂದು ತಂತ್ರಜ್ಞಾನದ ಅತ್ಯುನ್ನತ ಮಟ್ಟ ತಲುಪಿವೆ. ತಾಂತ್ರಿಕ ಕಾಲಘಟ್ಟದಲ್ಲೂ ಲಂಬಾಣಿ ಮಹಿಳೆಯರು ಉಳಿಸಿ ಬೆಳಿಸಿಕೊಂಡು ಬಂದ ಕಸೂತಿ ಕಲೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಕ್ಷಣಕ್ಕೆ ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಸಾಕ್ಷಿಯಾಗಿದೆ.
ಭಾರತದ ಜಿ20 ಅಧ್ಯಕ್ಷತೆಯಲ್ಲಿ, ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಮೂರನೇ ಸಭೆ, ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿರುವ ವಿಶ್ವ ಪಾರಂಪರಿಕ ತಾಣ, ಹಂಪಿಯಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ.
Mann Ki Baat : ಜಿ20 ಅಧ್ಯಕ್ಷ ಸ್ಥಾನ ಪಡೆಯುವುದು ಭಾರತಕ್ಕೆ ದೊಡ್ಡ ಅವಕಾಶ. ಪ್ರತಿಯೊಬ್ಬ ದೇಶದವರೂ ಒಂದಲ್ಲ ಒಂದು ರೀತಿಯಲ್ಲಿ ಜಿ20 ಗೆ ಸಂಪರ್ಕ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಜಿ-20 ಲಾಂಛನ ಮತ್ತು ಭಾರತದ ಅಧ್ಯಕ್ಷೀಯ ವೆಬ್ಸೈಟ್ ಅನ್ನು ಬಿಡುಗಡೆ ಮಾಡುವ ಸವಲತ್ತು ನನಗೆ ಸಿಕ್ಕಿತು. ಈ ಲೋಗೋವನ್ನು ಸಾರ್ವಜನಿಕ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಿ20 ಶೃಂಗಸಭೆಯ ಹಿನ್ನಲೆಯಲ್ಲಿ ಬಾಲಿಯ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಬಾರಿಯ G20 ಸಭೆಯ ಅಧ್ಯಕ್ಷತೆಯು ಇಂಡೋನೇಷ್ಯಾದಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ.ಈ ಸಂದರ್ಭದಲ್ಲಿ G20 ಗುಂಪು ಎಂದರೇನು? ಅದು ಬೆಳೆದು ಬಂದ ಬಗೆ ಮತ್ತು ಪ್ರಸ್ತುತ ಅಂತರಾಷ್ಟ್ರೀಯ ವಲಯದಲ್ಲಿ ಅದಕ್ಕಿರುವ ಮಹತ್ವವೇನು? ಎನ್ನುವ ವಿಚಾರಗಳನ್ನು ನಾವು ತಿಳಿಯೋಣ ಬನ್ನಿ..
ಭಾರತವು ಜಿ 20 ದೇಶಗಳನ್ನು ಶಕ್ತಿ ಸ್ಥಾನದಿಂದ ಮುನ್ನಡೆಸುವತ್ತ ಸಾಗುತ್ತಿದೆ ಮತ್ತು ಮುಂದಿನ ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ವಿಶ್ವದ ಮೇಲೆ ಒಂದು ಛಾಪನ್ನು ಮೂಡಿಸಲಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಗುರುವಾರ ಹೇಳಿದ್ದಾರೆ.
G20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನ ಮತ್ತು ಹಣಕಾಸಿನ ಹೆಚ್ಚಿನ ಬೆಂಬಲ ಇದ್ದರೆ ಇಡೀ ಜಗತ್ತು ವೇಗವಾಗಿ ಪ್ರಗತಿ ಸಾಧಿಸಬಹುದು ಎಂದು ಪ್ರತಿಪಾದಿಸಿದರು.
2020 ರಲ್ಲಿ ಜಿ 20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಸೌದಿ ಅರೇಬಿಯಾದಲ್ಲಿ COVID-19ಗೆ ಸಂಬಂಧಿಸಿದ ಜಿ 20 ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಜಾಗತಿಕ ನಾಯಕರಿಗೆ ಮಾನವ ಕೇಂದ್ರಿತ ದೂರ ದೃಷ್ಟಿ ಹೊಂದಲು ಕರೆ ನೀಡಿದರು. ಜಾಗತಿಕ ಸಮೃದ್ಧಿ ಮತ್ತು ಸಹಕಾರದಲ್ಲಿ ಆರ್ಥಿಕತೆಗಿಂತ ಹೆಚ್ಚಾಗಿ ಮಾನವ ಕೇಂದ್ರಿತವಾಗಬೇಕೆಂದು ಪ್ರಧಾನಿ ಮೋದಿ ಹೇಳಿದರು.
ಕೊವೀಡ್ -19 ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ಎದುರಿಸುವ ಕ್ರಮದ ಭಾಗವಾಗಿ, ಜಿ 20 ಶೃಂಗಸಭೆಯ ನಾಯಕರು ಗುರುವಾರ ಜಾಗತಿಕ ಆರ್ಥಿಕತೆಗೆ ಐದು ಟ್ರಿಲಿಯನ್ ಡಾಲರ್ಗಳನ್ನು ನೀಡುವುದಾಗಿ ಘೋಷಿಸಿದರು.ಸಾಂಕ್ರಾಮಿಕ ರೋಗದ ಸಾಮಾಜಿಕ, ಆರ್ಥಿಕ ಮತ್ತು ಆರ್ಥಿಕ ಪರಿಣಾಮಗಳನ್ನು ನಿಗ್ರಹಿಸಲು ಉದ್ದೇಶಿತ ಹಣಕಾಸಿನ ನೀತಿ, ಆರ್ಥಿಕ ಕ್ರಮಗಳು ಮತ್ತು ಖಾತರಿ ಯೋಜನೆಗಳ ಒಂದು ಭಾಗವಾಗಿ ಇದು ಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.