ಉಲ್ಮನ್ ಪಟ್ಟಣವು ಕೇವಲ 120,000 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅವರ ಮನೆ ನಿಂತಿದ್ದ ಒಂದು ಸಣ್ಣ ಸ್ಮರಣಾರ್ಥ ಫಲಕವಿದೆ (ಇದು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಾಶವಾಗಿದೆ). ಐನ್ಸ್ಟೈನ್ ಜನನದ ಸ್ವಲ್ಪ ಸಮಯದ ನಂತರ ಕುಟುಂಬವು ಮ್ಯೂನಿಚ್ಗೆ ಸ್ಥಳಾಂತರಗೊಂಡಿತು ನಂತರ ಇಟಲಿಗೆ ಹೋದಾಗ ಅವರ ತಂದೆ ತನ್ನ ಸ್ವಂತ ವ್ಯವಹಾರವನ್ನು ನಡೆಸುವಲ್ಲಿ ಸಮಸ್ಯೆಗಳನ್ನು ಎದುರಿಸಿದರು.
ಕುಮಾರಸ್ವಾಮಿಯವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಮಂಡ್ಯದಲ್ಲಿ ಹಾಗೂ ನಂತರ ರಾಮನಗರದಲ್ಲಿ ಸೋತಿದ್ದರು. ಆಗ ಅವರು ಅಭಿಮನ್ಯು ಆಗಿರಲಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮರುಪ್ರಶ್ನಿಸಿದರು.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ 8 ನೇ ವಾರ್ಡ್ ನ ದೊಡ್ಡಿಕೇರಿ ಬೀದಿಯಲ್ಲಿ ಸಮರ್ಪಕವಾಗಿ ಕಸ ಸಂಗ್ರಹಣೆ ಮಾಡದ ಹಿನ್ನಲೆ ನಿವಾಸಿಗಳು ತಾವೇ ಕಸ ಸಂಗ್ರಹಣೆ ಮಾಡಿ ಪಟ್ಟಣ ಪಂಚಾಯತಿ ಕಚೇರಿ ಮುಂಭಾಗ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕನ್ನಡದ ವಿಚಾರದಲ್ಲಿ ರಾಜಿಯಾಗದೆ ಕೆಲಸ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕಾರ್ಕಳ ಮಾರುಕಟ್ಟೆಯಲ್ಲಿ ಜೂ. 9ರಂದು ಮೀನಿನ ವ್ಯಾಪಾರಿ ಮಾಲ ಎಂಬವರು ಗ್ರಾಹಕರೋರ್ವರ ಬೇಡಿಕೆಯಂತೆ 6,500 ರೂ. ಮೌಲ್ಯದ ಅಂಜಲ್ ಮೀನನ್ನು ಖರೀದಿಸಿ ಫ್ರಿಜ್ನಲ್ಲಿಟ್ಟಿದ್ದರು.ಮರುದಿನ ಮೀನು ಪಡೆಯಲು ಗ್ರಾಹಕ ಮಾಲ ಅವರಲ್ಲಿ ಬಂದಾಗ ಫ್ರಿಜ್ನಲ್ಲಿಟ್ಟಿದ್ದ ಮೀನು ಕಾಣೆಯಾಗಿತ್ತು. ಯಾರೋ ಕಳ್ಳರು ಫ್ರಿಜ್ನಿಂದ ಮೀನು ಕದ್ದಿರುವ ವಿಚಾರ ತಿಳಿದ ಮಾಲ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರು.
ಒಂದು ವೇಳೆ ನನ್ನ ಕಚೇರಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಸಾಕ್ಷ್ಯಾ ನಾಶಗಳ ಕುರಿತಾಗಿ ನಾನು ಯಾವುದಾದರೂ ವ್ಯಕ್ತಿಗಳ ಜೊತೆ ಸಭೆ ನಡೆಸಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಸಿದ್ಧನಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬಹಿರಂಗ ಸವಾಲು ಹಾಕಿದ್ದಾರೆ.
ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) ರಾಜಕೀಯ ಮೇಲಾಟದ ಕಾರಣ ತಿಲಾಂಜಲಿ ಕೊಟ್ಟು, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ತಿಳಿಸಿದ ಈ ರಾಜ್ಯ ಸರಕಾರ ಇವತ್ತಿನವರೆಗೂ ಯಾವುದೇ ಪ್ರಗತಿಯನ್ನು ಮಾಡದೆ ಇರುವುದು ಒಂದು ಸಾಧನೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ಅವರು ವಿಶ್ಲೇಷಿಸಿದರು.
ರಾಜ್ಯದಲ್ಲಿರುವ ಸ್ಮಶಾನ ಮತ್ತು ಖಬರ್ ಸ್ಥಾನಗಳಿಗೆ ಮೂರು ತಿಂಗಳಲ್ಲಿ ಜಾಗ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.
ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ಪಾಳ್ಯದಲ್ಲಿ ಸಿಕ್ಕಿದೆ. ನೈಸ್ ರಸ್ತೆಯ ಫ್ಲ್ಯಓರ್ ಕೆಳಭಾಗದಲ್ಲಿ ಸರಿಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದ್ದು, ತಡರಾತ್ರಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ದಿನಾಂಕ 14.06.2023 ರಂದು ಬೆಂಗಳೂರು ಕೇಂದ್ರಿಯ ವಿಭಾಗದ ಘಟಕ-04 ರ ವಾಹನ ಸಂಖ್ಯೆ:ಕೆಎ-57 ಎಫ್ 3975, ಬೆಂಗಳೂರು- ತಿರುನಲ್ಲಾರ್ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದ್ದಾಗ, ಆಸನ ಸಂಖ್ಯೆ 17 -18 ರಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕುಳಿತಿದ್ದ ವ್ಯಕ್ತಿ ಆಸನ ಸಂಖ್ಯೆ 29-30 ರಲ್ಲಿ ಕುಳಿತಿದ್ದ ಪ್ರಯಾಣಿಕ ದಂಪತಿಯು ಊಟಕ್ಕಾಗಿ ಕೆಳಗಿಳಿದಿದ್ದಾಗ ರೂ.5 ಲಕ್ಷ ಮೊತ್ತವನ್ನು ಕದ್ದಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.