Love Jihad: ಬಲವಂತದ ಮತಾಂತರದ ಕುರಿತು ಖಾಕಿಪಡೆ ತನಿಖೆ ನಡೆಸಿದೆ. ತಾನು ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ ನೀಡಿದ್ದಾಳೆ.
ನನ್ನ ರಾಜಕೀಯ ಜೀವನದ ಬಗ್ಗೆ ಡಿ.25 ರಂದು ಗೊತ್ತಾಗುತ್ತೆ. ಈಗಾಗಲೇ ನಾನು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದೆನೆ. ಅಂದೇ ಎಲ್ಲವನ್ನ ಹೇಳುತ್ತೇನೆ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಈ ಹಿಂದೆ ಚರ್ಚೆಯಲ್ಲಿದ್ದ ರಾಮ ಜನ್ಮ ಭೂಮಿ ಅಯೋಧ್ಯೆಯಂತೆ ಸದ್ಯ ಚರ್ಚೆಯಲ್ಲಿರೋ ಧಾರ್ಮಿಕ ಸ್ಥಳ ಅಂದ್ರೆ ಅಂಜನಾದ್ರಿ ಬೆಟ್ಟ. ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಂತೆ, ರಾಮನ ಬಂಟ ಹನುಮಂತನ ಜನ್ಮ ಭೂಮಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡುತ್ತೇವೆ ಅಂತಾ ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದೆ. ಅಂಜನಾದ್ರಿ ಅಭಿವೃದ್ಧಿಯ ಜಪದಲ್ಲೇ ಈ ಬಾರಿಯ 2023ರ ವಿಧಾನಸಭೆ ಚುನಾವಣೆ ನಡೆಸಲು ಬಿಜೆಪಿ ಮುಂದಾಗಿದೆ.
ಆಗದು ಎಂದು ಕೈಕಟ್ಟಿ ಕುಳಿತರೇ ಕೆಲಸವೂ ಸಾಗದು ಮುಂದೆ ಎಂದು ಅಣ್ಣಾವ್ರು ಹಾಡಿದ ಸಾಲು ಕೊಪ್ಪಳದ ಯುವಕನೊರ್ವನ ಸಾಧನೆಗೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ
ಚಿಕ್ಕಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡಳ್ಳಿ ಗ್ರಾಮದ ಲೋಕೇಶ್, ಸತತ ಪ್ರಯತ್ನದ ಫಲವಾಗಿ ಅಂಧರ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.
ಇದನ್ನು ಓದಿ: Belagavi : ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವು!
ಇಲ್ಲಿನ ನಗರಸಭೆ ವತಿಯಿಂದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್)ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮೂರು ಹುದ್ದೆಗಳನ್ನು ಸೃಜಿಸಿ ಗೌರವಧನದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಸ್ವ ಸಹಾಯ ಸಂಘಗಳ/ ಒಕ್ಕೂಟದ ಮಹಿಳಾ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅತಿಯಾದ ಚಳಿಗೆ ತತ್ತರಿಸಿ ಬಿಸಿಲು ನಾಡಿನ ಜನ. ಜಮ್ಮು ಕಾಶ್ಮೀರದಂತೆ ಆದ ಕೊಪ್ಪಳ ಜಿಲ್ಲೆ. ನಗರ, ಗ್ರಾಮಾಂತರ ಪ್ರದೇಶ ಆವರಿಸಿದ ಇಬ್ಬನಿಯ ಮಂಜು. ರಸ್ತೆ, ಹೊಲಗದ್ದೆಗಳೇ ಕಾಣದಂತೆ ಆವರಿಸಿದ ಇಬ್ಬನಿ.
ಕೊಪ್ಪಳ ಜಿಲ್ಲಾದ್ಯಂತ ತುಂತುರು ಮಳೆಯಾಗುತ್ತಿದೆ.. ಮಳೆಯಿಂದ ಕೊಪ್ಪಳ ತಾಲೂಕಿನ ಮಹ್ಮದ್ ನಗರ - ಹರ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಗದ್ದೆಯಂತಾಗಿದೆ. ರಸ್ತೆ ಸಮಸ್ಯೆಯಿಂದ ಬೇಸತ್ತಿರುವ ಜನ ರಸ್ತೆಯಲ್ಲೇ ಭತ್ತದ ಸಸಿ ನಾಟಿ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆ ಡಾಂಬರೀಕರಣ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಸದ್ಯ ವಿದ್ಯಾರ್ಥಿ ಪ್ರಥಮ್ಗೆ ಚಿಕಿತ್ಸೆ ನೀಡಲಾಗಿದೆ. ಶಿಕ್ಷಕನ ಕ್ರೂರ ಕೃತ್ಯದಿಂದ ಬಾಲಕ ಪ್ರಥಮ್ ನೋವು ಅನುಭವಿಸುತ್ತಿದ್ದಾನೆ. ಈ ಘಟನೆ ಮಾತ್ರವಲ್ಲದೆ, ತರಗತಿಗೆ ಬರುವ ಹಲವಾರು ವಿದ್ಯಾರ್ಥಿಗಳ ಮೇಲೆ ಲೋಹಿತ್ ಇದೇ ರೀತಿ ಹಲ್ಲೆ ನಡೆಸುತ್ತಾನಂತೆ.
ಮನೆಗೆ ನುಗ್ಗಿದ ಕೋತಿಯೊಂದು 30 ಸಾವಿರ ಮೌಲ್ಯದ ಟಿವಿ ಹಾಳು ಮಾಡಿದ ಘಟನೆ ಕೊಪ್ಪಳ ತಾಲೂಕಿನ ಗಿಣಗೇರಾ ಗ್ರಾಮದಲ್ಲಿ ನಡೆದಿದೆ. ಏಕಾಏಕಿ ಗಿಣಗೇರಾ ಗ್ರಾಮದ ಕೃಷ್ಣ ಮೂರ್ತಿ ಪಾಟೀಲ್ ಎಂಬುವವರ ಮನೆಗೆ ನುಗ್ಗಿದ ಕೋತಿ ಟಿವಿ ಹಾಳು ಮಾಡಿದೆ. ಗಾಜಿನ ವಸ್ತು ಕಂಡ್ರೆ ಈ ಕೋತಿ ವಿಚಿತ್ರವಾಗಿ ಆಡ್ತಿದ್ದು, ಕೋತಿಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಅನುದಾನ ಬಿಡುಗಡೆಗೆ ಸಂಸದ ಸಂಗಣ್ಣ ಕರಡಿಯಿಂದ ಸರ್ಕಾರಕ್ಕೆ ಪತ್ರ...
ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರು ಸಹಿಯುಳ್ಳ ಪತ್ರ ಸರ್ಕಾರಕ್ಕೆ ರವಾನೆ... ಜನ ಪ್ರತಿನಿಧಿಗಳ ಪತ್ರಕ್ಕೆ ಶೀಘ್ರವೇ ಸ್ಪಂದಿಸಿದ ಸರ್ಕಾರ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.