ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ-2023, ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ-2023 ಸೇರಿದಂತೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ನಾಲ್ಕು ವಿವಿಧ ವಿಧೇಯಕಗಳಿಗೆ ವಿಧಾನ ಪರಿಷತ್ನಲ್ಲಿ ಡಿಸೆಂಬರ್ 13ರಂದು ಅಂಗೀಕಾರ ದೊರೆಯಿತು
Technology Corporation Council Hall: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ಕೌನ್ಸಿಲ್ ಸಭಾಂಗಣ 10ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಮುಂದುವರೆದಿದೆ.ಈ ಹಿನ್ನೆಲೆ ಇಂದು ಕಾಮಗಾರಿ ಸ್ಥಳಕ್ಕೆ ಎಂ.ಪಿ.ಡಿ.ಮುಖ್ಯ ಅಭಿಯಂತರಾದ ವಿನಾಯಕ್ ಸುಗ್ಗೂರು, ಸೂಪರಿಡೆಂಟ್ ಇಂಜನಿಯರ್ ಹೇಮಲತಾ, ಸಹಾಯಕ ಅಭಿಯಂತರಾದ ಹರ್ಷರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಧಾನ ಪರಿಷತ್ ಸಭಾಪತಿಯವರಿಗೆ ರಾಜೀನಾಮೆ ಪತ್ರ ನೀಡಿದ್ದೇವೆ. ಆದರೆ ಬಳಿಕ ಸಭಾಪತಿ ಅವರನ್ನು ಭೇಟಿ ಮಾಡಲು ಬಾಕಿ ಉಳಿಸಿ ಕಾಂಗ್ರೆಸ್ ಕಚೇರಿಗೆ ಬಂದಿದ್ದೇನೆ. ಸಿಎಂ ಭೇಟಿ ಮಾಡಿ ಬಿಜೆಪಿ ನಾಯಕರಿಗೂ ಮನವರಿಕೆ ಮಾಡಿಕೊಟ್ಟು ಸರ್ಕಾರಕ್ಕೆ ತರಾಟೆ ತೆಗೆದು ಕೊಂಡಿದ್ದೇನೆ. ಶಿಕ್ಷಕರ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲಿಲ್ಲ ಎಂದು ಎಂಎಲ್ ಸಿ ಪುಟ್ಟಣ್ಣ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಕೋರಿಕೆಯ ಮೇರೆಗೆ 50 ಕೋಟಿ ರೂ. ಅನುದಾನ ನೀಡಿದಂತೆ ಎಲ್ಲ ವಿಧಾನ ಪರಿಷತ್ ಸದಸ್ಯರಿಗೂ 50 ಕೋಟಿ ರೂ. ಅನುದಾನ ನೀಡಬೇಕು ಎಂದು ಮೇಲ್ಮನೆ ಸದಸ್ಯ ಭೋಜೇಗೌಡರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ಕಂಬಳ ಕ್ರೀಡೆಗೆ ನಿರ್ಲಕ್ಷದ ಕುರಿತು ಮಾತನಾಡಿದ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ (BK Hariprasad) ಕುದುರೆ ಹಸುಗೆ ಸಿಕ್ಕ ಮನ್ನಣೆ ಕಪ್ಪು ಬಣ್ಣದ ಕಂಬಳದ ಕೋಣನಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಪ ಸಭಾಪತಿಯಾಗಿದ್ದ ಧರ್ಮೇಗೌಡ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ನವರು ಬಲತ್ಕಾರವಾಗಿ ಸಭಾಪತಿ ಪೀಠದಲ್ಲಿ ಕೂರಿಸಿದ್ದರು. ಅದು ಧರ್ಮೇಗೌಡರಿಗೆ ಅವರಿಗೆ ಇಷ್ಟ ಇರಲಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಡ್ರೈವರ್ ಗೆ 'ಕಾರಿನಲ್ಲೇ ಇರು' ಎಂದು ಹೇಳಿ ಹೋಗಿದ್ದರು. ರೈಲು ಹೋದ ಅರ್ಧ ಗಂಟೆಯಾದರೂ ಅವರು ವಾಪಸ್ ಬರದಿದ್ದಾಗ ಡ್ರೈವರ್ ಹೋಗಿ ನೋಡಿದ್ದಾರೆ. ಆಗ ಧರ್ಮೇಗೌಡ ಶತಾಬ್ದಿ ಎಕ್ಸಪ್ರೆಸ್ ಟ್ರೈನಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.
ಕರ್ನಾಟಕ ವಿಧಾನಪರಿಷತ್ ನ (council) 4 ಕ್ಷೇತ್ರಗಳಿಗೆ ಮತದಾನ (polling )ನಡೆಯುತ್ತಿದೆ. ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ರವರೆಗೆ ಮತದಾನ ನಡೆಯಲಿದೆ.
ಮೇ 21 ರ ಚುನಾವಣೆಗೆ ತನ್ನ ಇಬ್ಬರು ನಾಮನಿರ್ದೇಶಿತರಲ್ಲಿ ಒಬ್ಬರನ್ನು ಒಂಬತ್ತು ಸ್ಥಾನಗಳಿಗೆ ಹಿಂತೆಗೆದುಕೊಳ್ಳುವುದಾಗಿ ಕಾಂಗ್ರೆಸ್ ಭಾನುವಾರ ಹೇಳಿದ್ದರಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅವಿರೋಧವಾಗಿ ವಿಧಾನ ಪರಿಷತ್ತಿಗೆ ಪ್ರವೇಶಿಸಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.