Shivaramegowda: ಮಂಡ್ಯ ರಾಜಕೀಯದಲ್ಲಿ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಸಂಚಲನ ಮೂಡಿಸಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡರು ಮತ್ತೆ ಬಿಜೆಪಿಯತ್ತ ಮುಖ ಮಾಡ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.
ದರಖಾಸ್ತು ಜಮೀನು ಕಬಳಿಕೆ ಉದ್ದೇಶ, ರೈತ ಕುಟುಂಬಕ್ಕೆ ಬಹಿಷ್ಕಾರ.. ಮಂಡ್ಯ ಜಿಲ್ಲೆ ನಾಗಮಂಗಲದ ಎ.ಶಾನುಬೋಗನಹಳ್ಳಿ ಗ್ರಾಮದಲ್ಲಿ ಘಟನೆ..ರೈತ ಕುಟುಂಬದ ಜಮೀನನಲ್ಲಿದ್ದ 70 ತೆಂಗಿನ ಸಸಿಗಳನ್ನು ಕಡಿದು ದೌರ್ಜನ್ಯ..
ಶ್ರೀರಂಗಪಟ್ಟಣದಲ್ಲಿ ಹಲವು ದೇವಸ್ಥಾನ ನಾಶ ವಾಗಿರುವ ಬಗ್ಗೆ ವಿಧಾನ ಪರಿ ಷತ್ ಮಾಜಿ ಸದಸ್ಯ ಗೋ ಮಧುಸೂದನ್ ಆರೋಪ ಮಾಡಿದ್ದಾರೆ. ಜಾಮೀಯಾ ಮಸೀದಿ ವಿವಾದದ ನಡುವೆ ಮತ್ತೊಂದು ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಈ ಸಂಭ್ರಮದ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಅನೇಕ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿದ್ದವು. ಈ ವಿಚಾರ ಸನ್ನಿ ಅವರ ಕಿವಿಗೆ ಬೀಳುತ್ತಿದ್ದಂತೆ ಟ್ವೀಟ್ ಮೂಲಕ ಧನ್ಯವಾದ ಹೇಳಿರುವ ಅವರು, "ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಿಮ್ಮ ಈ ಕೆಲಸಕ್ಕೆ ಗೌರವ ಸೂಚಿಸಲು ನಾನೂ ರಕ್ತದಾನ ಮಾಡುತ್ತೇನೆ. ಧನ್ಯವಾದಗಳು. ನಿಜವಾಗಿಯೂ ನೀವೆಲ್ಲರೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸಿದ್ದೀರಿ" ಎಂದು ಬರೆದುಕೊಂಡಿದ್ದಾರೆ.
ತಾಳಿ ಕಟ್ಟಿಸಿಕೊಂಡು ಬಂದು ಐಶ್ವರ್ಯ ಪರೀಕ್ಷೆಗೆ ಹಾಜರಾಗಿದ್ದಾರೆ. ಮದುವೆ ದಿನವೇ ಪರೀಕ್ಷೆ ಬರೆದು ಎಲ್ಲರಿಗೂ ಈ ವಿದ್ಯಾರ್ಥಿನಿ ಮಾದರಿಯಾಗಿದ್ದಾರೆ. ಪರೀಕ್ಷೆ ದಿನವೇ ಮದುವೆ ನಿಗದಿಯಾದ ಕಾರಣ, ಮದುವೆಯನ್ನು ಬಿಡುವಂತಿರಲಿಲ್ಲ.
ವರುಣನ ರೌದ್ರಾವತಾರಕ್ಕೆ 90ಕ್ಕೂ ಹೆಚ್ಚು ತಂಗಿನಮರ ನೆಲಸಮ. ಕೆ ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮಪಂಚಾಯತಿಯ ವ್ಯಾಪ್ತಿಗೆ ಬರುವ ಅಂಚನಹಳ್ಳಿ ಗ್ರಾಮದಲ್ಲಿ ಘಟನೆ.
ನಿನ್ನೆ ರಾತ್ರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಈ ವೇಳೆ ಮರದ ಬುಡ ಸಹಿತ ಕೆಳಗೆ ಬಿದ್ದು ಹಲವು ಗಿಳಿಗಳು ಮತ್ತು ಮರಿಗಳು ಮೃತಪಟ್ಟರೆ, ಉಳಿದವು ಆಲಿಕಲ್ಲುಗಳ ಪೆಟ್ಟು ತಾಳಲಾರದೆ ಮೃತಪಟ್ಟಿವೆ.
ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ ಇರಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.. ಒಂದು ರಾಷ್ಟ್ರ ಭಾಷೆ ಅನ್ನೋ ಪ್ರಶ್ನೆಯೇ ಬರಲ್ಲ ಎಂದ ಸುಮಲತಾ, ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ಇದು ನಮ್ಮ ಸ್ವಾಭಿಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ ಎಂದು ಸುಮಲತಾ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.