ಮಂಡ್ಯ: ಕಾಲೇಜು ಪ್ರಿನ್ಸಿಪಾಲ್‍ಗೆ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಜೆಡಿಎಸ್ MLA ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಶಾಸಕರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆಗಿದ್ದೇನು..?
ಸೋಮವಾರ(ಜೂ.20) ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಉನ್ನತೀಕರಿಸಿದ ಐಟಿಐ ಕಾಲೇಜಿನ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪ್ರಯೋಗಾಲಯದ ಮಾಹಿತಿ ನೀಡಿಲ್ಲವೆಂದು ಸಿಟ್ಟಿಗೆದ್ದ ಶಾಸಕ ಎಂ.ಶ್ರೀನಿವಾಸ್ ಅವರು ಪ್ರಿನ್ಸಿಪಾಲ್ ಮೇಲೆ ಗರಂ ಆಗಿದ್ದರು. ಮೂಲ ಸೌಕರ್ಯ ಸರಿಯಿಲ್ಲವೆಂಬ ಕಾರಣಕ್ಕೆ ಏಕಾಏಕಿ ಪ್ರಿನ್ಸಿಪಾಲ್ ಆರ್.ನಾಗಾನಂದ್ ಅವರಿಗೆ ಕಪಾಳಮೋಕ್ಷ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ & ರಾಜ್ಯ ಸರ್ಕಾರಗಳಲ್ಲಿ ಖಾಲಿಯಿರುವ 65 ಲಕ್ಷ ಹುದ್ದೆ ತುಂಬಿ: ಕಾಂಗ್ರೆಸ್
ತಮ್ಮ ಸಹದ್ಯೋಗಿಗಳ ಸಮ್ಮುಖದಲ್ಲಿಯೇ ಶಾಸಕರಿಂದ ಕಪಾಳಮೋಕ್ಷ ಮಾಡಿಸಿಕೊಂಡ ಪ್ರಿನ್ಸಿಪಾಲರು ಹೆದರಿದ್ದಾರೆ. ಈ ವೇಳೆ ‘ಇರಲಿ.. ಇರಲಿ.. ಸರ್’ ಎನ್ನುತ್ತಾ ಸುಮ್ಮನೆ ನಿಂತಿದ್ದಾರೆ. ಮಂಡ್ಯದಲ್ಲಿ ಈ ವಿಚಾರ ಗಂಭೀರವಾಗಿ ಚರ್ಚೆ ಆಗ್ತಿದ್ದು, ಶಾಸಕರ ವರ್ತನೆ ಬಗ್ಗೆ ಅನೇಕರು ಟೀಕಿಸಿದ್ದಾರೆ.
ನನ್ನ ಮೇಲೆ ಏಕೆ ಹಲ್ಲೆ ಮಾಡಿದ್ರೋ ಗೊತ್ತಿಲ್ಲ!
#Karnataka: A JD(S) MLA Srinivas slapped a college principal who was not able to provide clear answer about the ongoing development work for a computer lab.
The incident, which happened on Monday, has created a huge outrage among the public. pic.twitter.com/WFnwK280Sg
— IANS (@ians_india) June 21, 2022
ಇನ್ನು ಘಟನೆ ಬಗ್ಗೆ ಮಾತನಾಡಿರುವ ಕಾಲೇಜಿನ ಪ್ರಿನ್ಸಿಪಾಲ್ ನಾಗಾನಂದ್, ‘ಶಾಸಕರು ನನ್ನ ಮೇಲೆ ಏಕೆ ಹಲ್ಲೆ ಮಾಡಿದ್ರೋ ಗೊತ್ತಿಲ್ಲ’ವೆಂದು ಹೇಳಿದ್ದಾರೆ. ‘ಪ್ರೋಟೊಕಾಲ್ ಪ್ರಕಾರ ಶಾಸಕರನ್ನು ಕರೆದಿದ್ದೇವು, ಅವರು ಬಂದಿದ್ದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ನಾನು ಯಾವುದೇ ತಪ್ಪು ಮಾಡದೇ ಹೊಡೆಸಿಕೊಂಡೆ. ಯಾಕಾದ್ರೂ ಈ ಕೆಲಸಕ್ಕೆ ಸೇರಿಕೊಂಡೆ ಅಂತಾ ಅನ್ನಿಸುತ್ತಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: NDRF ನಿಯಮ ತಿದ್ದುಪಡಿ ಮಾಡಿ ಸಮರ್ಪಕ ಪರಿಹಾರ ನೀಡಿ: ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ
‘ನಾನು ಆ ವಿಚಾರದ ಬಗ್ಗೆ ಈಗ ಮಾತನಾಡಲು ಹೊಗಲ್ಲ. ನಾನು ಎಲ್ಲಾ ಮಾಹಿತಿಯನ್ನು ಶಾಸಕರಿಗೆ ಕೊಟ್ಟಿದ್ದೇನೆ. ಅವರು ಯಾವ ವಿಚಾರಕ್ಕೆ ಕೋಪಗೊಂಡಿದ್ದು ಗೊತ್ತಿಲ್ಲ. ಶಾಸಕರಿಗೂ ನನಗೂ ಯಾವುದೇ ವಯಕ್ತಿಕ ದ್ವೇಷ ಇಲ್ಲ. ಈ ಬಗ್ಗೆ ನಾನು ಯಾವುದೇ ದೂರು ಕೊಡಲು ಹೊಗಲ್ಲ. ದೇವರು ನಂಬಿ ಬದುಕುವವನು ನಾನು. ನಾನು ಯಾರಿಗೂ ತೊಂದರೆ ಮಾಡಿಲ್ಲ.. ಎಲ್ಲದಕ್ಕೂ ದೇವರೇ ದಾರಿ ತೋರಿಸ್ತಾನೆ’ ಎಂದು ಶಾಸಕರ ವಿರುದ್ಧ ಪ್ರಾಂಶುಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.