Traffic Rules: ವಾಹನ ಚಾಲನೆ ಮಾಡುವವರು ಮಾತ್ರವಲ್ಲ ಪ್ರತಿಯೊಬ್ಬರೂ ಸಹ ಟ್ರಾಫಿಕ್ ನಿಯಮಗಳನ್ನು ತಿಳಿದಿರುವುದು ಬಹಳ ಮುಖ್ಯ. ಸಂಚಾರ ನಿಯಮಕ್ಕೆ ಸಂಬಂಧಿಸಿದಂತೆ ನಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಸಹ ಅತ್ಯಗತ್ಯ. ಅಂತಹದರಲ್ಲೇ ಒಂದು ನಿಮ್ಮ ವಾಹನದ ಕೀ ತೆಗೆಯುವ ಅಧಿಕಾರ ಟ್ರಾಫಿಕ್ ಪೊಲೀಸರಿಗಿದೆಯೇ? ಅಂತಹ ಕೆಲವು ಪ್ರಮುಖ ನಿಯಮಗಳನ್ನು ತಿಳಿಯೋಣ...
New Tyre Design Rule 2022 - ಒಂದು ವೇಳೆ ನೀವೂ ಕೂಡ ವಾಹನದ ಮಾಲೀಕರಾಗಿದ್ದರೆ, ಈ ಸುದ್ದಿ ನಿಮಗಾಗಿ ಮತ್ತು ಇದನ್ನು ನೀವು ತಪ್ಪದೆ ಓದಲೇಬೇಕು, ಅಕ್ಟೋಬರ್ 1, 2022 ರಿಂದ ನಿಮ್ಮ ವಾಹನಗಳ ಟೈರ್ ವಿನ್ಯಾಸ ಬದಲಾಗಲಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯಿದೆಯಲ್ಲಿ (ಎಂವಿಎ) ಹಲವು ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಟೈರ್ ವಿನ್ಯಾಸ ಕೂಡ ಶಾಮೀಲಾಗಿದೆ. ಅಕ್ಟೋಬರ್ 1 ರಿಂದ ಹೊಸ ವಿನ್ಯಾಸದ ಟೈರ್ ಗಳು ದೇಶದಲ್ಲಿ ಬರಲು ಪ್ರಾರಂಭಿಸಲಿವೆ.
ಇದಕ್ಕೂ ಮೊದಲು ಎಲ್ಲಾ ಬಗೆಯ ಕ್ಷಮತಾ ಪತ್ರ, ಪರ್ಮಿಟ್ ಗಳು, ಲೈಸನ್ಸ್, ನೋಂದಣಿ ಮತ್ತು ಇನ್ನಿತರೆ ಸಂಬಂಧಿಸಿದ ದಾಖಲೆಗಳನ್ನು 2020ರ ಡಿಸೆಂಬರ್ 31ರವರೆಗೆ ಸಿಂಧು ಎಂದು ಪರಿಗಣಿಸಲು ಸೂಚನೆ ನೀಡಲಾಗಿತ್ತು.
ಅಕ್ಟೋಬರ್ 1ರಿಂದ ನಿಮ್ಮ ಜೀವನದಲ್ಲಿ 9 ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ಈ ಹೊಸ ತಿಂಗಳಿನಿಂದ ಹಬ್ಬದ ಋತುಮಾನವು ಪ್ರಾರಂಭವಾಗಲಿದೆ. ಇದರೊಂದಿಗೆ ಈ ಅವಧಿಯಲ್ಲಿ ಅನ್ಲಾಕ್ 5.0 ಅನ್ನು ಸರ್ಕಾರ ಪ್ರಕಟಿಸುತ್ತದೆ.
ದೇಶದಲ್ಲಿ ಕಾರು ಅಥವಾ ಬೈಕು ಚಾಲನೆ ಮಾಡುವಾಗ, ಹೆಚ್ಚಿನ ಜನರು ನಕಲಿ ದಾಖಲೆಗಳನ್ನು ತೋರಿಸುವುದರ ಮೂಲಕ ಟ್ರಾಫಿಕ್ ಪೊಲೀಸರನ್ನು ತಪ್ಪಿಸಬಹುದು ಎಂದು ತಿಳಿದಿದ್ದಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡ ಹೌದು. ಏಕೆಂದರೆ ಹೆಚ್ಚಿನ ರಾಜ್ಯಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ದಾಖಲೆಗಳನ್ನು ತಕ್ಷಣ ಪರಿಶೀಲಿಸುವ ಸೌಲಭ್ಯವಿಲ್ಲ. ಆದರೆ ಇನ್ಮುಂದೆ ಹಾಗೆ ಆಗುವುದಿಲ್ಲ.
ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿಯ ಟ್ರಕ್ ಮಾಲೀಕರಿಗೆ ಗುರುವಾರ 2,00,500 ರೂ. ದಂಡ ವಿಧಿಸಲಾಗಿದೆ. ದೆಹಲಿ ಟ್ರಾಫಿಕ್ ಪೊಲೀಸರು ಟ್ರಕ್ ಮಾಲೀಕರಿಗೆ ಈ ದಂಡವನ್ನು ವಿಧಿಸಿದ್ದು, ಅದನ್ನು ಅವರು ರೋಹಿಣಿ ನ್ಯಾಯಾಲಯದಲ್ಲಿ ಪಾವತಿಸಬೇಕಾಗಿದೆ. ಇದಕ್ಕೂ ಮುನ್ನ ಎಲ್ಲಾ ಮಾನ್ಯ ದಾಖಲೆಗಳನ್ನು ಹಾಜರುಪಡಿಸಿದರೆ ದಂಡವನ್ನು ಕಡಿಮೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.