ಬಿಜೆಪಿಯ ಕೋಮುವಾದ ಹಾಗೂ ವಿಭಜನಾತ್ಮಕ ರಾಜಕಾರಣ, ಸುಳ್ಳುಗಳಿಂದ ದಿಕ್ಕು ತಪ್ಪಿಸುವ ಪ್ರಾಪಗಾಂಡಕ್ಕೆ ಯಾವ ಮಿತಿಯೂ ಇಲ್ಲದಂತಾಗಿದೆ. ಸುಳ್ಳು ಹಾಗೂ ದ್ವೇಷದಿಂದ ಕೂಡಿದ ಪೋಸ್ಟನ್ನು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗದ ನಿರ್ದೇಶನವು ಬಂಡತನದ ಬಿಜೆಪಿಗೆ ಕಾಪಾಳಮೋಕ್ಷಕ್ಕೆ ಸಮನಾದ ಅವಮಾನವಾಗಿದೆ! ಎಂದು ಕಾಂಗ್ರೆಸ್ ಟೀಕಿಸಿದೆ.
ಬಡವರಿಗೆ, ಸಾಮಾಜಿಕ ನ್ಯಾಯ ಅನುಷ್ಠಾನಕ್ಕಾಗಿ ಈ ಯೋಜನೆ
ಈ ಯೋಜನೆ ಕಡ್ಡಾಯ ಜಾರಿಗೆ ತರುವಂತೆ ಮೋದಿಗೆ MTB ಮನವಿ
ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ಹಣ ಬಡವರಿಗೆ ಹಂಚಿಕೆ
ಚುನಾವಣೆಯಲ್ಲಿ BJP ಗೆದ್ದರೆ ಯೋಜನೆ ಜಾರಿಗೆ ತರಲು ಚಿಂತನೆ
ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಗೆದ್ದ ಶಾಸಕರ ಹಾಗೂ ಸೋತ ಅಭ್ಯರ್ಥಿಗಳ ಸಭೆ ನಡೆದಿದ್ದು, ಸೋತ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂ ಟಿ ಬಿ ನಾಗರಾಜ್ ಮಾಜಿ ಸಚಿವ ಸುಧಾಕರ್ ಹಾಗೂ ಪಕ್ಷದ ವಿರುದ್ಧ ಕೆಂಡ ಕಾರಿದ್ದಾರೆ.
ಸಿದ್ದರಾಮಯ್ಯ ಅವರ ಕುರಿತು ಕೆ. ಸುಧಾಕರ್ ಅವರು ತಮ್ಮ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿದ್ದು, ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಸುಧಾಕರ್ ರವರು ಈ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ಅವರು ಗರಂ ಆಗಿದ್ದಾರೆ.
ಸತತ ಯೋಗಾಭ್ಯಾಸದಿಂದ ಒತ್ತಡ ರಹಿತ ಆರೋಗ್ಯಯುತ ಜೀವನ ನಿರ್ವಹಿಸಬಹುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಯೋಗಾಸನಗಳಿಂದ ಏಕಾಗ್ರತೆ ಸಾಧ್ಯವಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಸಿಎಂ ಕಚೇರಿಯಲ್ಲಿ ಲಂಚ ಪಡೆಯುವ ಮತ್ತು ನೀಡುವ ಬಗ್ಗೆ ಬೋರ್ಡ್ ಹಾಕಿಲಿ ಎಂದು ಟೀಕಿಸಿದೆ.
ED, IT ಇಲಾಖೆಗಳು ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಗಳು. ವಿರೋಧ ಪಕ್ಷದವರು ಉದ್ದೇಶಪೂರ್ವಕವಾಗಿ ತಮ್ಮ ಮೇಲೆ ವಿಚಾರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.. ನನ್ನ ಮೇಲೂ ಈ ಹಿಂದೆ ಮೂರು ಬಾರಿ ಆದಾಯ ತೆರಿಗೆ ಅಧಿಕಾರಿಗಳು ರೇಡ್ ಮಾಡಿದ್ದಾರೆ.. ಇದೆಲ್ಲ ED, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸಹಜ ಪ್ರಕ್ರಿಯೆ ಅಷ್ಟೇ ಎಂದಿದ್ದಾರೆ.
ಮಾಲೂರು ಕ್ಷೇತ್ರದ ಮಾಜಿ ಶಾಸಕ ಮಂಜುನಾಥಗೌಡ ಬಿಜೆಪಿ ಸೇರ್ಪಡೆಗೆ ನನ್ನ ವಿರೋಧವಿದೆ ಅಂತ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಸ್ಥಳೀಯವಾಗಿ ಕಾರ್ಯಕರ್ತರಲ್ಲಿ ಸಹ ಗೊಂದಲವಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ನಮ್ಮ ವಿರೋಧವಾಗಿ ಕೆಲಸ ಮಾಡಿದ್ದಾರೆ. ಮೂಲ ಬಿಜೆಪಿಗರನ್ನು ಗಣನೆಗೆ ತೆಗೆದುಕೊಳ್ಳದೆ ಪಕ್ಷ ಸೇರ್ಪಡೆ ಮಾಡಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು
ಕಾಂಗ್ರೆಸ್ ಪಾರ್ಟಿ ಬಿಟ್ಟು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.. ನನ್ನ ಜೀವನದಲ್ಲಿ ಮಾಡಿದ ತಪ್ಪು ಕಾಂಗ್ರೆಸ್ ಪಕ್ಷ ಬಿಟ್ಟಿದ್ದು. ನನ್ನಿಂದ ಸಾರ್ವಜನಿಕರಿಗೆ ಒಳ್ಳೆಯಾದಾಗಿದೆ. ಜನರಿಗೋಸ್ಕರ ಒಳ್ಳೆಯದು ಮಾಡಬೇಕು ಅಂತ ರಾಜಕೀಯಕ್ಕೆ ಬಂದಿದ್ದೇನೆ ಅಂತಾ ಬಾಗೇಪಲ್ಲಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.