ಮುಡಾ ಹಗರಣದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಕಾಂಗ್ರೆಸ್ ಪ್ರಭಾವಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ನಡೆ ಹೆಜ್ಜೆ ಹೆಜ್ಜೆಗೂ ಕುತೂಹಲಕ್ಕೆ ಕಾರಣವಾಗಿದೆ.
Next CM of Karnataka: ತುಮಕೂರು ನಗರದಲ್ಲಿ ನಡೆಯುತ್ತಿದ್ದ DSS ಸಭೆಯಲ್ಲಿ ʼಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿʼ ಎಂಬ ಘೋಷಣೆ ಕೇಳಿಬಂದಿದೆ. ಸತೀಶ್ ಜಾರಕಿಹೊಳಿಯವರ ಸಮ್ಮುಖದಲ್ಲೇ ಈ ಘೋಷಣೆ ಹೊರಬಿದ್ದಿದೆ.
ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ, ಲಿಂಗಾಯತ ಸಮುದಾಯ ನಾಯಕರೊಬ್ಬರಿಗೆ ಸಿಎಂ ಸ್ಥಾನ ಸಿಕ್ಕಿಲ್ಲ. ಸಚಿವ ಸಂಪುಟ ರಚನೆಯಲ್ಲಿ ಹೈ ಕಮಾಂಡ್ ಇದನ್ನ ಪರಿಗಣಿಸಿ ಹೆಚ್ಚಿನ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂದು ಶಾಮನೂರ್ ಶಿವಶಂಕರಪ್ಪ ಒತ್ತಾಯ
ದೆಹಲಿ ಅಂಗಳದ ರಾಜಕೀಯ ಕಗ್ಗಂಟಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆಯೆಳೆದಿದ್ದು ಸಿದ್ದರಾಮಯ್ಯ ಸಿಎಂ ಹಾಗೂ ಡಿಕೆಶಿ ಡಿಸಿಎಂ ಆಗಿ ಆಯ್ಕೆ ಆಗಿದ್ದಾರೆ. ಈ ಬೆನ್ನಲ್ಲೇ ನಾನು ಕೂಡ ಡಿಸಿಎಂ ಆಕಾಂಕ್ಷಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಟ ಫೈನಲ್ ಹಿನ್ನಲೆ
ಸಿದ್ದರಾಮಯ್ಯ ನಿವಾಸದ ಬಳಿ ರಾಜಾಜಿಸುತ್ತಿರುವ ಫ್ಲೆಕ್ಸ್ಗಳು
ನಿನ್ನೆಯಿಂದಲೂ ಸಿದ್ದು ಮನೆ ಬಳಿ ಜಮಾವಣೆ ಆಗಿರುವ ಫ್ಯಾನ್ಸ್
ಇಂದು ಸಹ ಅಪಾರ ಬೆಂಬಲಿಗರು ಅಭಿಮಾನಿಗಳ ಸೇರುವ ಸಾಧ್ಯತೆ
ನಿನ್ನೆ ಸಿಹಿ ಹಂಚಿಕೆ, ಪಟಾಕಿ,ಕ್ಷೀರಾಭಿಷೇಕ ಮಾಡಿರುವ ಫ್ಯಾನ್ಸ್
ಹೈಕಮಾಂಡ್ ಹೆಣೆದ ಸೂತ್ರದ ಲೆಕ್ಕಾಚಾರಕ್ಕೆ ಸಿದ್ದು ಬೇಸರ
ಮೊದಲ ಹಂತದ ಸಿಎಂ ಆದ್ರು ಸಿದ್ದರಾಮಯ್ಯಗೆ ಬೇಸರ
ಸಿದ್ದರಾಮಯ್ಯಗೆ ಎರಡು ವರ್ಷಗಳ ಅವಧಿಗೆ ಮಾತ್ರ ಸಿಎಂ
2 ವರ್ಷ ಆದಮೇಲೆ ಡಿಕೆ ಶಿವಕುಮಾರ್ ಗೆ ಬಿಟ್ಟುಕೊಡಬೇಕು
ನಂತರ 3 ವರ್ಷ ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಬೇಸರ
ರಾಜ್ಯದಲ್ಲಿ ಸದ್ಯಕ್ಕೆ ಡಿಕೆಶಿ ಒಬ್ಬರಿಗೆ ಮಾತ್ರ ಡಿಸಿಎಂ ಹುದ್ದೆ
ಬೇರೆ ಸಮುದಾಯದ ನಾಯಕರಿಗೆ ಡಿಸಿಎಂ ಹುದ್ದೆ ಇಲ್ಲ.. ಇಲ್ಲ
ಲಿಂಗಾಯತ , ದಲಿತ , ಮುಸ್ಲಿಂ ಸಮುದಾಯಕ್ಕೆ ಬೇಡಿಕೆ ಇತ್ತು
ಆದರೆ ಡಿಕೆಶಿ ಹೊರತುಪಡಿಸಿ ಬೇರೆಯವರಿಗೆ ಡಿಸಿಎಂ ಹುದ್ದೆ ಇಲ್ಲ
ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಒಂದೇ ಡಿಸಿಎಂ ಹುದ್ದೆ ಸೃಷ್ಟಿ
ಇದೇ 20 ರಂದು ಸಿದ್ದರಾಮಯ್ಯ ಸಿಎಂ ಆಗಿ ಪಟ್ಟಾಭಿಷೇಕ - ಅದೇ ದಿನ ಡಿಕೆಶಿಗೂ ಡಿಸಿಎಂ ಪಟ್ಟ ಕಟ್ಟಲು ಪ್ಲ್ಯಾನ್.. ಸರ್ಕಾರದಲ್ಲಿ ಇಬ್ಬರಿಗೂ ಅಧಿಕಾರ ಸಮಪಾಲು ನೀಡಿದ ಕಾಂಗ್ರೆಸ್
ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅಧಿಕೃತ ಘೋಷಣೆ
ಕೆಪಿಸಿಸಿ ಅಧ್ಯಕ್ಷರಿಂದ ನಿನ್ನೆ ತಡರಾತ್ರಿ ರಾಜ್ಯಪಾಲರಿಗೆ ಪತ್ರ
ಇ ಮೇಲ್ ಮೂಲಕ ಸರ್ಕಾರ ರಚಿಸೋ ಬಗ್ಗೆ ಪ್ರಸ್ತಾಪ..!
ಕಾಂಗ್ರೆಸ್ ಪಕ್ಷದಲ್ಲಿ 135 ಜನ ಶಾಸಕರನ್ನ ಹೊಂದಿದೆ
ಜೊತೆಗೆ ಕೆಲ ಇಂಡಿಪೆಂಡೆಂಟ್ ಶಾಸಕರು ಬೆಂಬಲ ಸೂಚಿಸಿದ್ದಾರೆ
ಈ ಹಿನ್ನಲೆ ಸರ್ಕಾರ ರಚಿಸಲು ಅವಕಾಶ ಕೋರಿ ಮೇಲ್ ರವಾನೆ
ದೆಹಲಿಯಲ್ಲೇ ಸಿಎಂ ಕುರ್ಚಿ ಕದನ ಜೋರು.. ಸಿಎಂ ಯಾರು..? ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕಾಂಗ್ರೆಸ್ ಕುರ್ಚಿ ಫೈಟ್..! ಇಂದು ಕರ್ನಾಟಕ ಸಿಎಂ ಯಾರು ಎಂದು ಘೋಷಣೆ ಸಾಧ್ಯತೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಸಿಎಂ ಕುರ್ಚಿಗಾಗಿ ಫೈಟ್. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ಮೇಲೆ ಸಭೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಮತ್ತು ರಾಜ್ಯದ ಅಭಿವೃದ್ಧಿ ಮಾಡಲಿ. ಅವರಿಗೆ ಇಲ್ಲಿಯವರೆಗೂ ಮುಖ್ಯಮಂತ್ರಿ ಆಯ್ಕೆ ಮಾಡಲು ಅಗುತ್ತಿಲ್ಲ. ಬೇಗ ಮುಖ್ಯಮಂತ್ರಿ ಆಯ್ಕೆಯನ್ನು ಮಾಡಲಿ ಎಂದರು.
ಕಾಂಗ್ರೆಸ್ ಪಕ್ಷ ನನಗೆ ದೇವರು, ದೇವಾಲಯ -
ದೇವರು-ತಾಯಿಗೆ ಮಕ್ಕಳಿಗೆ ಏನು ಕೊಡಬೇಕೆಂದು ಗೊತ್ತಿದೆ;ಡಿಕೆಶಿ
- ದೆಹಲಿಗೆ ತೆರಳುವ ಮುನ್ನ ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿಕೆ
ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಹಂಗಾಮಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಇಂದು ಡಾ. ಕೆ. ಸುಧಾಕರ್ ಭೇಟಿ ಮಾಡಿದ್ದೀನಿ. ನಮ್ಮ ಜೊತೆ ಕೆಲಸ ಮಾಡಿದವರು ಅಲ್ಪ ಪ್ರಮಾಣದಲ್ಲಿ ಸೋತಿದ್ದಾರೆ. ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ವಿ. ಸೋಮಣ್ಣ ಅವರನ್ನೂ ಭೇಟಿ ಮಾಡುತ್ತೇನೆ ಎಂದರು.
ಕಾಂಗ್ರೆಸ್ನಲ್ಲಿ ಮುಂದುವರೆದ ಸಿಎಂ ಕುರ್ಚಿ ಕಿತ್ತಾಟ. ಇಂದು ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ-ಡಿಕೆಶಿ. ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ಹೋಗುವ ಸಾಧ್ಯತೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ. ಲೋಕಸಭೆ ಚುನಾವಣೆ ಹಿನ್ನೆಲೆ ಎಚ್ಚರಿಕೆಯ ಹೆಜ್ಜೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.