Prahlada Joshi: ಅಕ್ಕಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷುಲ್ಲಕ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ದೇಶದಲ್ಲಿ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟರೆ ಹಿಂದೂಗಳು ಸುರಕ್ಷತೆಯಿಂದ ಇರಲು ಸಾಧ್ಯವಿದೆಯೇ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಮುಖಗಳು. ಇವರು ಸತ್ಯ ಹರೀಶ್ಚಂದ್ರರಾಗಿದ್ದಾರೆ ದೇಶದ ಜನ ನಿಮ್ಮನ್ನೇಕೆ ಮೂಲೆಗುಂಪು ಮಾಡುತ್ತಿದ್ದರು? ಎಂದು ಜೋಶಿ ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ (Union Parliamentary Minister Prahlada Joshi) , ಮಲ್ಲಿಕಾರ್ಜುನ್ ಖರ್ಗೆ ಅವರು ಮಾತನಾಡುವಾಗ ಸ್ವಲ್ಪ ಗಮನ ವಹಿಸುವುದು ಒಳಿತು ಎಂದು ತಿರುಗೇಟು ನೀಡಿದರು.
2004ರಿಂದ 2014ರವರೆಗೆ ದೇಶದ ಎಲ್ಲಾ ಬ್ಯಾಂಕ್’ಗಳು ನಷ್ಟದಲ್ಲಿದ್ದವು. ಆದರೆ ನಂತರದ ಹತ್ತು ವರ್ಷದಲ್ಲಿ ಎಲ್ಲಾ ಬ್ಯಾಂಕ್ ಗಳು ಲಾಭದಲ್ಲಿವೆ. ನಮ್ಮ ಎಸ್’ಬಿಐ ಈಗ ರಿಲಯನ್ಸ್ ಇಂಡಸ್ಟ್ರೀಸ್’ಗಿಂತ ದುಪ್ಪಟ್ಟು ಲಾಭದಲ್ಲಿ ಇದೆ. 85 ಸಾವಿರ ಕೋಟಿ ನಷ್ಟದಲ್ಲಿದ್ದ ಬ್ಯಾಂಕ್ ಈಗ 1.4 ಲಕ್ಷ ಕೋಟಿ ಲಾಭದ ದಾಖಲೆಯಲ್ಲಿದೆ ಎಂದು ಜೋಶಿ ಹೇಳಿದರು.
Prahlada Joshi: ವಿಶ್ವದರ್ಜೆ ಮಟ್ಟದಲ್ಲಿ ನಿರ್ಮಿಸಲು ಇಂದು ಚಾಲನೆ ನೀಡಿರುವ ವಾಣಿಜ್ಯ ನಗರಿ ಹುಬ್ಬಳಿ ವಿಮಾನ ನಿಲ್ದಾಣ ಕಾಮಗಾರಿ ಇನ್ನೆರೆಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
Prahlad Joshi: ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರರು. ಕರ್ನಾಟಕದ ಜನತೆಗೂ ಅವರೆಂದರೆ ಒಂದು ರೀತಿ ಶಕ್ತಿ, ಸ್ಫೂರ್ತಿ ಎಂದ ಸಚಿವರು, ತಮ್ಮ ಕ್ಷೇತ್ರದಲ್ಲಿ ಚುನಾವಣೆ ವೇಳೆ ಪ್ರತಿ ಬಾರಿಯೂ ಬಂದು ಸಭೆ, ಸಮಾವೇಶ ಮಾಡಿ ನನಗೆ ಅಭೂತಪೂರ್ವ ಗೆಲುವು ದಕ್ಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿ; ಇಪ್ಪತ್ತು ವರ್ಷದಲ್ಲಿ ಸಂಸದ, ಸಚಿವನಾಗಿ ಯಾವತ್ತೂ ತಲೆ ತಗ್ಗಿಸುವ ಕೆಲಸ ಮಾಡಿಲ್ಲ. ಕಲ್ಲಿದ್ದಲಿನಂತಹ ಖಾತೆ ನಿರ್ವಹಿಸುತ್ತಿದ್ದರೂ ಕೈ ಕಪ್ಪು ಮಾಡಿಕೊಂಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಪ್ರಗತಿಯ ನೋಟ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಹ್ಲಾದ ಜೋಶಿ ಕೆಲಸ ಮಾಡಿಲ್ಲ ಎಂದು ಹೇಳುವ ಧೈರ್ಯ ನಮ್ಮ ವಿರೋಧಿ ಗಳಿಗು ಇಲ್ಲ. ಹಾಗೇ ಕೆಲಸ ಮಾಡಿದ್ದೇನೆ. 1984ರ ನಂತರ ಯಾರೂ ಸಂಸದೀಯ ವ್ಯವಹಾರಗಳ ಖಾತೆ 5 ವರ್ಷ ಪೂರೈಸಿರಲಿಲ್ಲ. ತಾವದನ್ನು ಪೂರೈಸಿದ್ದಾಗಿ ಸಂತಸ ಹಂಚಿಕೊಂಡರು.
ಕರ್ನಾಟಕ ವಿಧಾನ ಸೌಧದೊಳಗೆ ರಾಜ್ಯಸಭಾ ಚನಾವಣೆ ಫಲಿತಾಂಶದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರನ್ನು ಸರ್ಕಾರ ಒದ್ದು ಒಳಗೆ ಹಾಕಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.