Weight loss surgery: ವೈದ್ಯರು ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಹೇಮಚಂದ್ರನ್ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಶಸ್ತ್ರಚಿಕಿತ್ಸೆಗೆ 8 ಲಕ್ಷ ರೂ. ಖರ್ಚು ಮಾಡಿದರೂ ಆತ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾನೆ.
Cotton Candy Banned: ಪುದುಚೇರಿ ಸರ್ಕಾರವು ಹತ್ತಿ ಮಿಠಾಯಿ ತಯಾರಿಕೆಯಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆಯನ್ನು ಅಧಿಕಾರಿಗಳು ಪತ್ತೆಹಚ್ಚಿದ ನಂತರ ಮಾರಾಟವನ್ನು ನಿಷೇಧಿಸಲಾಗಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ತೀವ್ರವಾದ ಅತಿಸಾರ ಪ್ರಕರಣಗಳ ಹೆಚ್ಚಳದ ಮಧ್ಯೆ ಭಾನುವಾರ ಪುದುಚೇರಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಕಾರೈಕಲ್ ಪ್ರದೇಶದಲ್ಲಿ 'ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ' ಘೋಷಿಸಿತು.
ನಿರಂತರ ಮಳೆಯ ಹಿನ್ನೆಲೆಯಲ್ಲಿ ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ನವೆಂಬರ್ 29 ಮತ್ತು 30 ರಂದು ಕೇಂದ್ರಾಡಳಿತ ಪ್ರದೇಶದ ಸರ್ಕಾರವು ರಜೆ ಘೋಷಿಸಿದೆ.
ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ, ಈಗ ಮದ್ಯಪಾನ ಮಾಡುವವರಿಗೆ ಬಿಗ್ ಶಾಕ್ ಇದೆ. ಈಗ ಮದ್ಯಪಾನದ ಪ್ರತಿಯೊಂದು ಬಾಟಲಿ ಮೇಲೆ ಶೇ. 20 ರಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ, ಎಲ್ಲಾ ರೀತಿಯ ಮದ್ಯದ ಬೆಲೆಯನ್ನು ಶೇ. 20 ರಷ್ಟು ಹೆಚ್ಚಿಸಲಾಗಿದೆ. ನಿನ್ನೆ ತನಕ 200 ರೂ.ಗಳ ಮೌಲ್ಯದ ಮಧ್ಯದ ಬೆಲೆ ಈಗ 240 ರೂ. ಆಗಿದೆ. ಪುದುಚೇರಿಯಲ್ಲಿ ಜುಲೈ 15 ರಿಂದ ಜಾರಿಗೆ ಬಂದಿವೆ. ಪುದುಚೇರಿಯ ಅಬಕಾರಿ ಇಲಾಖೆಯಿಂದ ಬೆಲೆ ಹೆಚ್ಚಿಸಲು ಪ್ರಕಟಣೆ ಹೊರಡಿಸಲಾಗಿದೆ.
ಕಳೆದ ವಾರ ಮುಖ್ಯಮಂತ್ರಿಯೊಂದಿಗೆ ಆಪ್ತರಾಗಿರುವ ಶಾಸಕ ಎ ಜಾನ್ ಕುಮಾರ್ ಕೂಡ ಶಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರ ನಂತರ, 7 ಕಾಂಗ್ರೆಸ್-ಡಿಎಂಕೆ ಶಾಸಕರು ಈವರೆಗೆ ರಾಜೀನಾಮೆ ನೀಡಿದ್ದಾರೆ ಮತ್ತು ಒಬ್ಬ ಶಾಸಕರ ಅನರ್ಹತೆಯ ನಂತರ, ಕೇವಲ 25 ಸದಸ್ಯರು ಮಾತ್ರ ವಿಧಾನಸಭೆಯಲ್ಲಿ ಉಳಿದಿದ್ದಾರೆ.
ಮುಂದಿನ 3 ದಿನಗಳವರೆಗೆ ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಮಂಗಳವಾರ (ಜನವರಿ 12, 2021) ಭಾರತ ಹವಾಮಾನ ಇಲಾಖೆಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರವು ತಿಳಿಸಿದೆ.
ಪುದುಚೇರಿ ದಾಟಿದ ನಂತರ, ನಿವಾರ್ ಚಂಡಮಾರುತದ ವೇಗ ಕಡಿಮೆಯಾಗಿದೆ. ಆದರೆ ಈ ಮಧ್ಯೆ ಮಳೆ ಮತ್ತು ಬಿರುಗಾಳಿಯು ತಮಿಳುನಾಡು ಮತ್ತು ಪುದುಚೇರಿಯ ಅನೇಕ ಜಿಲ್ಲೆಗಳಲ್ಲಿ ಭಾರಿ ಹಾನಿಯನ್ನುಂಟುಮಾಡಿದೆ.
ಕಿರಣ್ ಬೇಡಿ ಮಂಗಳವಾರ ಮುನ್ಸಿಪಲ್ ಕಾರ್ಪೋರೇಶನ್ ಕೆಲಸಗಾರರು ಹಾಗೂ ಸ್ವಚ್ಚತಾ ಕರ್ಮಿಗಳ ಜೊತೆಗೆ ಪೊಂಗಲ್ ಹಬ್ಬ ಆಚರಿಸಿದ್ದಾರೆ. ಈ ವೇಳೆ ಅವರು ಡಾನ್ಸ್ ಮಾಡುತ್ತಿದ್ದ ಓರ್ವ ಅಜ್ಜಿಯ ವಿಡಿಯೋವನ್ನು ಚಿತ್ರೀಕರಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಪ್ರದೇಶದಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 2 ರಂದು ನಿಗದಿಯಾಗಿದ್ದ ಮದ್ರಾಸ್ ವಿಶ್ವವಿದ್ಯಾಲಯ ಮತ್ತು ಅನ್ನಾ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಚುನಾಯಿತ ಸರ್ಕಾರದ ನಿರ್ಧಾರಗಳನ್ನು ನಿರಂತರವಾಗಿ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದೆ ಎಂಬ ಆರೋಪದ ಮೇಲೆ ಶೀಘ್ರದಲ್ಲೇ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ಶೀಘ್ರದಲ್ಲೇ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಪುದುಚೇರಿಯ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ವಿ ನಾರಾಯಣಸಾಮಿ ಹೇಳಿದ್ದಾರೆ.
ಕಳೆದ ಬುಧವಾರದಿಂದ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ಧರಣಿ ಸತ್ಯಾಗ್ರಹಕ್ಕೆ ಕುಳಿತಿರುವ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿಯವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲ ವ್ಯಕ್ತಪಡಿಸಲು ಇಂದು ಪುದುಚೆರಿಗೆ ಪ್ರಯಾಣ ಬೆಳೆಸಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.