Circular Ticket: ದೂರದ ಪ್ರಯಾಣಕ್ಕಾಗಿ ರೈಲಿನಲ್ಲಿ ದೃಢೀಕೃತ ಟಿಕೆಟ್ಗೆ ಭಾರೀ ಪೈಪೋಟಿ ಇರುತ್ತದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣಕ್ಕಾಗಿ ಹಲವು ಸೌಕರ್ಯಗಳನ್ನು ಒದಗಿಸುವ ರೈಲ್ವೆ ವಿಶೇಷ ಟಿಕೆಟ್ ಅನ್ನು ಕೂಡ ಒದಗಿಸುತ್ತದೆ. ಈ ಒಂದು ಟಿಕೆಟ್ ಪಡೆದರೆ ಸತತ 56ದಿನಗಳವರೆಗೆ ರೈಲಿನಲ್ಲಿ ಪ್ರಯಾಣಿಸಬಹುದು.
Vande Bharat Train : ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ ರಾಮ್ ಲಲ್ಲಾ ದರ್ಶನಕ್ಕಾಗಿ ಅಯೋಧ್ಯೆ ಧಾಮಕ್ಕೆ ಪ್ರಯಾಣಿಸಲು ಬಯಸುವ ಮಧ್ಯಪ್ರದೇಶದ ಯಾತ್ರಾರ್ಥಿಗಳು ಮತ್ತು ಸಾರ್ವಜನಿಕರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿಯನ್ನು ನೀಡಿದೆ
ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಭಾರೀ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹಿರಿಯ ನಾಗರಿಕರಿಗೆ ರೈಲ್ವೆ ನೀಡಿರುವ ವಿನಾಯಿತಿ ಕುರಿತು ವಿಶೇಷ ಅಪ್ಡೇಟ್ ಹೊರಬಿದ್ದಿದೆ. ರೈಲು ಟಿಕೆಟ್ನಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗಿದ್ದ ವಿನಾಯಿತಿಯನ್ನು ಮತ್ತೊಮ್ಮೆ ಜಾರಿಗೊಳಿಸಲಾಗುತ್ತಿದೆ. ಈ ಮೊದಲು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮತ್ತು 58 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ರೈಲ್ವೆ ಇಲಾಖೆ ವತಿಯಿಂದ ರೈಲು ಟಿಕೆಟ್ ದರಗಳಲ್ಲಿ ಭಾರೀ ರಿಯಾಯಿತಿಯ ಲಾಭವನ್ನು ಪಡೆಯುತ್ತಿದ್ದರು. ಅದನ್ನು ಮತ್ತೆ ಪ್ರಾರಂಭಿಸುವ ಸಾಧ್ಯತೆ ನಿಚ್ಚಳವಾಗತೊಡಗಿದೆ.
Railway Department: ಆರ್-ವ್ಯಾಲೆಟ್ ರಿಚಾರ್ಜ್ ಮೇಲೆ 100ಕ್ಕೆ ಶೇ. 3 ರಷ್ಟು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೋನಸ್ ನೀಡುತ್ತದೆ. ಪ್ರಯಾಣಿಕರು UTS ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣದ ಸಾಮಾನ್ಯ ಬುಕ್ಕಿಂಗ್ ಟಿಕೆಟ್, ತ್ವರಿತ ಬುಕ್ಕಿಂಗ್ ಟಿಕೆಟ್, ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ಕಿಂಗ್, ಸೀಜನ್ ಟಿಕೆಟ್ ಬುಕ್ಕಿಂಗ್, ಕ್ಯೂ-ಆರ್ ಬುಕ್ಕಿಂಗ್ ಜೊತೆಗೆ ಟಿಕೆಟ್ ರದ್ದು ಗೊಳಿಸುವುದು, ಟಿಕೆಟ್ ನ ಸದ್ಯದ ಮಾಹಿತಿ ತಿಳಿಯುವುದು ಸೇರಿದಂತೆ ಇನ್ನೀತರ ಮಾಹಿತಿಯನ್ನು ಈ UTS ಆಪ್ ಒಳಗೊಂಡಿರುತ್ತದೆ.
Indian Railways Fare : ನೀವು ಆಗಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ನಿಮಗೆ ಕೇಂದ್ರದಿಂದ ಬಿಗ್ ನ್ಯೂಸ್ ಒಂದು ಹೊರಬಿದ್ದಿದೆ. ಹೌದು, ಇಂದು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮುಂಬರುವ ದಿನಗಳಲ್ಲಿ ರೈಲು ಪ್ರಯಾಣ ದರವನ್ನು ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
Indian Railways Latest Rule: ಭಾರತೀಯ ರೈಲ್ವೆ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಕನ್ಫರ್ಮ್ ಆಗದ ಅಥವಾ ಆರ್ ಎಸಿ ಟಿಕೆಟ್ ಅನ್ನು ಕನ್ಫರ್ಮ್ ಮಾಡಿಸಿಕೊಡಲು TTಯ ಹಿಂದೆ ಓಡಬೇಕಾಗಿಲ್ಲ. ಟಿಟಿ ಕೈಯಲ್ಲಿ ಹಿಡಿದಿರುವ ಟರ್ಮಿನಲ್ ಸಾಧನದ ಸಹಾಯದಿಂದ ಅದಾಗಿಯೇ ಟಿಕೆಟ್ ಕನ್ಫರ್ಮ್ ಆಗಲಿದೆ.
Railway Ticket in Post Office: ಭಾರತೀಯ ರೇಲ್ವೆ ತನ್ನ ಪ್ರಯಾಣಿಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿದೆ. ಹೌದು, ಇನ್ಮುಂದೆ ಹಳ್ಳಿಯಲ್ಲಿ ವಾಸಿಸುವ ಮತ್ತು ನಿಲ್ದಾಣದಿಂದ ತುಂಬಾ ದೂರ ವಾಸಿಸುವ ಜನರು ರೇಲ್ವೆ ಟಿಕೆಟ್ ಕಾಯ್ದಿರಿಸಲು ರೈಲು ನಿಲ್ದಾಣ ಅಥವಾ ಏಜೆಂಟರ ಬಳಿ ಭೇಟಿ ನೀಡುವ ಅವಶ್ಯಕತೆ ಇಲ್ಲ. ಹಾಗಾದರೆ ರೇಲ್ವೆ ಇಲಾಖೆಯ ಈ ಮಹತ್ವದ ನಿರ್ಧಾರದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ
Railway Tickets: ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್ಗಳಲ್ಲಿ ಉದ್ದನೆಯ ಸರತಿ ಸಾಲುಗಳಲ್ಲಿ ನಿಂತು ಟಿಕೆಟ್ ಕೊಳ್ಳುವುದೇ ದೊಡ್ಡ ಕೆಲಸ. ಆದರೆ ಇದೀಗ ರೈಲ್ವೆಯು ಉತ್ತಮ ಸೇವೆಯನ್ನು ಪ್ರಾರಂಭಿಸಿದೆ, ಇದರಿಂದ ನೀವು ಟಿಕೆಟ್ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
IRCTC: ಭಾರತೀಯ ರೈಲ್ವೇ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈಗ ಪ್ರಯಾಣಿಕರು QR CODE ಮತ್ತು UPI ಪಾವತಿ ಮೂಲಕ ರೈಲು ಟಿಕೆಟ್ಗಳನ್ನು ಖರೀದಿಸಲು ಅವಕಾಶ ಒದಗಿಸಿದೆ.
ಭಾರತದಲ್ಲಿ ಪ್ರತಿದಿನ ಕೋಟಿಗಟ್ಟಲೆ ಜನ ರೈಲಿನಲ್ಲಿ ಪ್ರಯಾಣಿಸುತ್ತಾರೆ, ಆದ್ದರಿಂದ ರೈಲ್ವೆಗೆ ಸಂಬಂಧಿಸಿದ ನವೀಕರಣಗಳ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ. ನಾವು ರೈಲ್ವೆಗೆ ಸಂಬಂಧಿಸಿದ ನಿಯಮಗಳ ಬದಲಾವಣೆಯ ಬಗ್ಗೆ ಹೇಳಲಿದ್ದೇವೆ.
Indian Railways: ಈ ಮೊದಲು, ಮೀಸಲಾತಿ ನಮೂನೆಯಲ್ಲಿ ವಿಳಾಸದ ಸ್ಥಳದಲ್ಲಿ ಪ್ರದೇಶದ ಹೆಸರನ್ನು ಮಾತ್ರ ಬರೆಯುವ ಮೂಲಕ ಟಿಕೆಟ್ ಬುಕಿಂಗ್ ಮಾಡಬಹುದಾಗಿತ್ತು. ಆದರೆ ಈಗ ಸಂಪೂರ್ಣ ವಿಳಾಸ ಮತ್ತು ಪಿನ್ ಕೋಡ್ ಅನ್ನು ನೀಡಬೇಕಾಗಿದೆ.
ರೈಲ್ವೆ ವಿಧಿಸಿರುವ ಕೆಲವೊಂದು ಕೋಟಾಗಳಡಿ ಟಿಕೆಟ್ ಕನ್ಫರ್ಮ್ ಮಾಡಬಹುದು. ರೈಲ್ವೆ ವಿಧಿಸಿರುವ ಕೋಟಾ ಮೂಲಕ ಟಿಕೆಟ್ ಖಚಿತಪಡಿಸಬಹುದು. ಆದರೆ ನೆನಪಿರಲಿ ಕೋಟಾದಡಿ ಟಿಕೆಟ್ ಬುಕ್ ಮಾಡುವಾಗ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ನಿಮ್ಮಲ್ಲಿ ಕಾಯ್ದಿರಿಸಿದ ಟಿಕೆಟ್ ಇಲ್ಲದೆ ಹೋದರೆ, ಪ್ಲಾಟ್ಫಾರ್ಮ್ ಟಿಕೆಟ್ನೊಂದಿಗೆ ರೈಲು ಹತ್ತಬಹುದು. ನಂತರ ಟಿಟಿಇ ಬಳಿ ಹೋಗಿ ಪ್ಲಾಟ್ ಫಾರ್ಮ್ ಟಿಕೆಟ್ ತೋರಿಸಿ ಟಿಕೆಟ್ ಪಡೆದುಕೊಳ್ಖಬಹುದು. ಈ ನಿಯಮವನ್ನು ರೈಲ್ವೆ ಜಾರಿಗೆ ತಂದಿದೆ.
Indian Railways train Latest News: ನೀವು ರೈಲು ಪ್ರಯಾಣಕ್ಕೆ ಯೋಜಿಸುತ್ತಿದ್ದರೆ ನಿಮ್ಮ ರೈಲು ರದ್ದಾಗಿದೆಯೇ ಎಂದು ಪರಿಶೀಲಿಸಿ. ಕರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ ಭಾರತೀಯ ರೈಲ್ವೆ ಅನೇಕ ರೈಲುಗಳನ್ನು ರದ್ದುಗೊಳಿಸಿದೆ.
ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಮೊಬೈಲ್ ಫೋನ್ಗಳಿಂದ ಸ್ಕ್ಯಾನ್ ಮಾಡಬಹುದಾದ ಮತ್ತು ಕ್ಯೂಆರ್ ಕೋಡ್ ಆಧಾರಿತ ಸಂಪರ್ಕರಹಿತ ಟಿಕೆಟ್ಗಳನ್ನು ನೀಡಲು ಭಾರತೀಯ ರೈಲ್ವೆ ಯೋಜನೆ ರೂಪಿಸುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್, ಪ್ರಸ್ತುತ ಶೇ.85 ರಷ್ಟು ರೈಲು ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕಾಯ್ದಿರಿಸಲಾಗುತ್ತಿದೆ. ಹೀಗಾಗಿ ಇನ್ಮುಂದೆ ಕೌಂಟರ್ನಿಂದ ಟಿಕೆಟ್ ಖರೀದಿಸುವವರಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.