ರಸ್ತೆ ದುರಸ್ಥಿ, ಶಾಲೆ, ಅಂಗನವಾಡಿಗಳ ದುರಸ್ಥಿಗಾಗಿ ಪ್ರಕೃತಿ ವಿಕೋಪ ನಿಧಿಯಡಿ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗುತ್ತಿದ್ದು ಎಲ್ಲೆಲ್ಲಿ ರಸ್ತೆ ಗುಂಡಿ ಬಿದ್ದಿವೆ, ಅಂತಹ ಕಡೆ ಒಂದು ಅಡಿ ಆಳ ತೆಗೆದು ಅದಕ್ಕೆ ಜಲ್ಲಿಕಲ್ಲುಗಳು ಮತ್ತು ಸಿಮೆಂಟ್ ವೆಟ್ ಮಿಕ್ಸಿಂಗ್ ಹಾಕಿ ತಾತ್ಕಾಲಿಕವಾಗಿ ಸರಿಪಡಿಸಬೇಕು. ಶಾಲಾ, ಅಂಗನವಾಡಿಗಳಿದ್ದಲ್ಲಿ ಸೋರದಂತೆ ಹೊದಿಕೆ ಹಾಕಲು ಕ್ರಮ ವಹಿಸಲು ಸೂಚಿಸಿ ತುರ್ತು ಕಾಮಗಾರಿಗಳನ್ನು ಕೈಗೊಂಡು ಮುಂದಿನ 15 ದಿನಗಳಲ್ಲಿ ಬಿಲ್ ಪಾವತಿಸಲು ಸೂಚನೆ ನೀಡಿದರು.
ನೈಋತ್ಯ ಮುಂಗಾರು ಶನಿವಾರ ಮಧ್ಯ ಅರೇಬಿಯನ್ ಸಮುದ್ರ, ದಕ್ಷಿಣ ಮಹಾರಾಷ್ಟ್ರ, ತೆಲಂಗಾಣ ಮತ್ತು ದಕ್ಷಿಣ ಛತ್ತೀಸ್ಗಢದ ಕೆಲವು ಭಾಗಗಳು, ದಕ್ಷಿಣ ಒಡಿಶಾ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಿಗೆ ಮುನ್ನಡೆದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಹಿನ್ನೆಲೆ ಬೋರೆದೊಡ್ಡಿ ಗ್ರಾಮದ ಸಮೀಪದ ಜಡೆತಡಿ ಹಳ್ಳ, ಲೊಕ್ಕನಹಳ್ಳಿ ಸಮೀಪದ ಹಳ್ಳಗಳು ತುಂಬಿ ಹರಿಯುತ್ತಿದೆ. ಇದರಿಂದ ಲೊಕ್ಕನಹಳ್ಳಿ ಗ್ರಾಮದಿಂದ ಒಡೆಯರಪಾಳ್ಯ ಪಿ ಜಿ ಪಾಳ್ಯ ತಮಿಳುನಾಡಿಗೆ ಹೋಗುತ್ತಿದ್ದ ವಾಹನಗಳು ಹಾಗೂ ಒಡೆಯರಪಾಳ್ಯ ಮಾರ್ಗವಾಗಿ ಲೊಕ್ಕನಹಳ್ಳಿ ಕೊಳ್ಳೇಗಾಲ, ಹನೂರು ಪಟ್ಟಣ ವ್ಯಾಪ್ತಿಗೆ ಬರುತ್ತಿದ್ದ ಹಲವಾರು ದ್ವಿಚಕ್ರ ವಾಹನ, ಬಸ್, ಸರಕು ಸಾಗಣೆ ವಾಹನಗಳು ನಿಂತಲ್ಲಿ ನಿಂತಿದ್ದು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತವಾಗಿದೆ.
ಮುಂದಿನ ಏಳು ದಿನಗಳ ಕಾಲ ರಾಜ್ಯದೆಲ್ಲೆಡೆ ಭಾರಿ ಮಳೆಯಾಗಲಿದೆ ಜೊತೆಗೆ ಮುಂದಿನ 5 ದಿನಗಳವರೆಗೆ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರದ ಡಾ. ರಾಜವೇಲ್ ಮಾಣಿಕ್ಕಂ ತಿಳಿಸಿದ್ದಾರೆ.
ತಡರಾತ್ರಿ ಮಂಡ್ಯ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟಿಸಿದ್ದು ಮಂಡ್ಯದ ಗುತ್ತಲು ರಸ್ತೆ ಭಾರೀ ಮಳೆಗೆ ಜಲಾವೃತವಾಗಿದೆ.. ಮಂಡ್ಯ-ಕೆ.ಎಂ.ದೊಡ್ಡಿ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕಾಲುವೆಯಂತಾದ ರಸ್ತೆಯಲ್ಲಿ ಜನ ಕಷ್ಟ ಪಟ್ಟು ಸಂಚಾರ ಮಾಡ್ತಿದ್ದಾರೆ.
ಬೆಂಗಳೂರಿನಲ್ಲಿ ಮತ್ತೆ ಧಾರಾಕಾರ ಮಳೆಯಾಗಿದ್ದು ಸಂಜೆ ಸುರಿದ ಮಳೆಗೆ ಸುಲ್ತಾನ್ ಪೇಟೆ ರಸ್ತೆ ಜಲಾವೃತವಾಗಿದೆ. ಚಿಕ್ಕಪೇಟೆಯಿಂದ ಕಾಟನ್ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೂರು ಅಡಿಯಷ್ಟು ನೀರು ನಿಂತಿದೆ..
ಸಿಲಿಕಾನ್ ಸಿಟಿಯನ್ನು ಬಿಟ್ಟೂ ಬಿಡದೆ ಕಾಡ್ತಿದೆ ರಣಚಂಡಿ ಮಳೆ! ಧಾರಾಕಾರ ಮಳೆಗೆ ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದು ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.