ದೇಶದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾದ ಸಾನಿಯಾ ಮಿರ್ಜಾ ಟೆನಿಸ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇಂದು ದುಬೈನಲ್ಲಿ ನಡೆಯಲಿರುವ ಟೆನ್ನಿಸ್ ಪಂದ್ಯಾವಳಿ ಬಳಿಕ ವೃತ್ತಿ ಜೀವನಕ್ಕೆ ವಿದಾಯ ಹಾಡಲಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಟೆನಿಸ್ ಆಡಲು ಪ್ರಾರಂಭಿಸಿದ್ದ ಸಾನಿಯಾ, ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದಿದ್ದಾರೆ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಯಶಸ್ಸು ಮತ್ತು ಸಾಧನೆಗಳ ಹಾದಿ ಇಲ್ಲಿದೆ .
Sania Mirza emotional goodbye: ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಮೊದಲ ಸೆಟ್ನಲ್ಲಿ ಕಠಿಣ ಹೋರಾಟ ನೀಡಿದರೂ ಸೋಲನುಭವಿಸಿತು. ಭಾರತದ ಜೋಡಿ ಮೊದಲ ಸೆಟ್ನಲ್ಲಿ ಬ್ರೆಜಿಲ್ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್ ಜೋಡಿ ವಿರುದ್ಧ ಮೊದಲ ಸೆಟ್ನಲ್ಲಿ 6-7 ಅಂತರದಿಂದ ಸೋಲನುಭವಿಸಬೇಕಾಯಿತು. ಆ ಬಳಿಕ ನಡೆದ ಎರಡನೇ ಸೆಟ್ನಲ್ಲಿ 6-2 ಅಂತರದಿಂದ ಸೋಲು ಕಾಣುವ ಮೂಲಕ ಪಂದ್ಯ ಕೊನೆಗೊಂಡಿತು.
Sania Mirza Retires: ಭಾರತೀಯ ಟೆನಿಸ್ ದಂತಕಥೆ ಸಾನಿಯಾ ಮಿರ್ಜಾ ಇಂದು ಮೆಲ್ಬೋರ್ನ್ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ 2023 ಮಿಶ್ರ ಡಬಲ್ಸ್ ಫೈನಲ್ ಆಟವಾಡಿ ತಮ್ಮ ಟೆನ್ನಿಸ್ ಪಂದ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ ಈ ಪಂದ್ಯಾಟದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಸೋಲು ಕಂಡಿದೆ. ಮಾಜಿ ವಿಶ್ವ ನಂ. 1 ಡಬಲ್ಸ್ ತಾರೆ ತನ್ನ ಹೆಸರಿಗೆ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಸೇರ್ಪಡೆಗೊಳಿಸಿದ್ದಾರೆ. ಈ ಚಿತ್ರಗಳ ಸಂಗ್ರಹದಲ್ಲಿ, ನಾವು ಸಾನಿಯಾ ಮಿರ್ಜಾ ಅವರ ಟಾಪ್ ಸಾಧನೆಗಳನ್ನು ನೋಡೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.