ಈಗ 10% ಬದಲಿಗೆ 14% NPS ನಲ್ಲಿ ಕೊಡುಗೆ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಉದ್ಯೋಗಿಯ ಸಂಬಳ ಮತ್ತು ತೆರಿಗೆ ಕಡಿತದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿದೆ ನೋಡಿ..
Budget 2022 Stock Market: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ (Union Budget 2022) ಮಂಡಿಸಿದರು. ಬಜೆಟ್ ದಿನದ ಬೆಳಗ್ಗೆಯಿಂದಲೇ ಷೇರುಪೇಟೆ ಉತ್ತಮ ಆರಂಭ ಕಂಡಿತ್ತು. ಬೆಳಗ್ಗಿನ ಅವಧಿಯಲ್ಲಿ ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕಗಳ ಜಿಗಿತದೊಂದಿಗೆ ಆರಂಭವಾಗಿತ್ತು.
ವಸತಿ ಯೋಜನೆಗಳಿಗೆ 2023 ರ FY-2023 ರಲ್ಲಿ ವಸತಿ ಯೋಜನೆಯಡಿ 48,000 ಕೋಟಿ ರೂ. ನಿಗದಿಪಡಿಸಲಾಗಿದೆ ಮತ್ತು 3.8 ಕೋಟಿ ಕುಟುಂಬಗಳಿಗೆ ಟ್ಯಾಪ್ ವಾಟರ್ಗಾಗಿ 60,000 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು. "ನಲ್ ಸೇ ಜಲ್" ನ ಪ್ರಸ್ತುತ ಕವರೇಜ್ 8.7 ಕೋಟಿ ರೂ., ಮುಂದಿನ 2 ವರ್ಷಗಳಲ್ಲಿ 3.8 ಕೋಟಿ ಸೇರಿಸಲಾಗುವುದು" ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ಈ ಬಾರಿ ‘Ease of doing business 2.0’ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ದೇಶದ ಆರ್ಥಿಕ ಪ್ರಗತಿಗೆ ದಿಕ್ಸೂಚಿ ಆಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಮೆಚ್ಚುಗೆ ವ್ಯಕ್ತಪಡಿಸಿದರು.
Nirmala Sitharaman On Budget 2022: ಬಜೆಟ್ ಮಂಡನೆಯ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರೆ. ಈ ಸಂದರ್ಭದಲ್ಲಿ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ತೆರಿಗೆ ಸಂಗ್ರಹದ ಹೊರೆಯಿಂದ ದೇಶದ ಜನರು ಹೈರಾಣಾಗಿದ್ದಾರೆ, ಆದರೆ ಪ್ರಧಾನಿ ಮೋದಿಯವರ ಸರ್ಕಾರಕ್ಕೆ ಹೀಗೆ ತೆರಿಗೆ ಸಂಗ್ರಹಿಸುವುದೇ ದೊಡ್ಡ ಸಾಧನೆ! ಅಂತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Budget 2022: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಆಡಳಿತದಲ್ಲಿ ಆಧುನಿಕತೆ ತರುವ ಬಜೆಟ್ ಆಗಿದೆ. ಆರ್ಥಿಕತೆ ಸುಧಾರಣೆ ಮಾಡುವ ಬಜೆಟ್ ಇದಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
“ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್” ಎಂದು ಪ್ರಸಕ್ತ ಸಾಲಿನ ಕೇಂದ್ರ ಮುಂಗಡ ಪತ್ರದ ಬಗ್ಗೆ ಅವರು ಒಂದು ಸಾಲಿನಲ್ಲಿ ವ್ಯಾಖ್ಯಾನ ಮಾಡಿದರು.
Budget 2022: ವಿತ್ತ ಸಚಿವ ಸೀತಾರಾಮನ್ (FM Nirmala Sitharaman) ಇಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಇಂದಿನ ಬಜೆಟ್ನಲ್ಲಿ ಅವರು ಹಲವು ಮಹತ್ವದ ಘೋಷಣೆಗಳನ್ನು ಘೋಷಿಸಿದ್ದಾರೆ. . ಬಜೆಟ್ ಮಂಡನೆ ನಂತರ ಕೆಲವು ಸರಕುಗಳು ದುಬಾರಿಯಾಗಲಿದ್ದು, ಕೆಲವು ಸರಕುಗಳು ಅಗ್ಗವಾಗಲಿವೆ. ಹಾಗಾದರೆ ಬನ್ನಿ ಯಾವ ಸರಕುಗಳು ದುಬಾರಿಯಾಗಲಿವೆ ಹಾಗೂ ಯಾವ ಸರಕುಗಳು ಅಗ್ಗವಾಗಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Budget 2022 For Education - ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಅವರು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳನ್ನು ಮುಚ್ಚಿರುವುದರಿಂದ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
Budget 2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವರ್ಷ 2022-23ರ ಸಾಮಾನ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ತಮ್ಮ ಬಜೆಟ್ ಭಾಷಣದಲ್ಲಿ ರೈಲ್ವೆ ಇಲಾಖೆಗೆ (Indian Railways) ಬಹುದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ಕುರಿತು ಘೋಷಣೆ ಮಾಡಿರುವ ಅವರು ಮುಂದಿನ 3 ವರ್ಷಗಳಲ್ಲಿ 400 ಹೊಸ ವಂದೇ ಭಾರತ್ ರೈಲುಗಳನ್ನು (Vande Bharat Trains) ಓಡಿಸಲಾಗುವುದು ಎಂದು ಹೇಳಿದ್ದಾರೆ.
Budget 2022-23 - ಪ್ರತಿ ವರ್ಷ ಮಂಡನೆಯಾಗುವ ಬಜೆಟ್ ಅನ್ನು ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತದೆ. ಇಂತಹುದೇ ಒಂದು ಬಜೆಟ್ ಮಂಡನೆಯಾಗಿದ್ದು, ಆ ವರ್ಷ ಮಂಡನೆಯಾದ ಬಜೆಟ್ ಅನ್ನು 'Black Budget' ಅಂದರೆ 'ಕರಾಳ ಬಜೆಟ್' ಎಂದು ಕರೆಯಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.