ಕನ್ನಡ ಚಲನ ಚಿತ್ರರಂಗದ ದಿಗ್ಗಜ ಅಂಬರೀಶ್ ಅವರ ನಿಧನ ನಿಜಕ್ಕೂ ಚಲನಚಿತ್ರರಂಗಕ್ಕೆ ತುಂಬಲಾರದ ನಷ್ಟ.ಅವರ ನಿಧನದ ವೇಳೆ ರಾಜ್ಯದ ಜನರು ತೋರಿಸಿದ ಪ್ರೀತಿ ಮತ್ತು ಅಭಿಮಾನಕ್ಕೆ ಶರಣು ಹೇಳಿರುವ ಅಂಬರೀಶ್ ಪತ್ನಿ ಸುಮಲತಾ ಈಗ ಎಲ್ಲರಿಗೂ ತಮ್ಮ ಫೇಸ್ ಬುಕ್ ಪೋಸ್ಟ್ ಮೂಲಕ ಕೃತಜ್ಞತೆಯನ್ನು ತಿಳಿಸಿದ್ದಾರೆ. ಆ ಫೇಸ್ ಬುಕ್ ಪೋಸ್ಟ್ ನ ಯಥಾವತ್ ರೂಪ ಇಲ್ಲಿದೆ.
ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗದ ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು.ಇಂತಹ ಮಹಾನ್ ನಿರ್ದೇಶನ ಜನ್ಮದಿನವಿಂದು.ಈ ಹಿನ್ನಲೆಯಲ್ಲಿ ನಾವು ಅವರು ಬೆಳೆದು ಬಂದ ಹಾದಿಯನ್ನು ಗಮನಿಸಬೇಕಾಗಿದೆ.ಪುಟ್ಟಣ್ಣ ಕಣಗಾಲ್ ನಿರ್ದೇಶಕರಾಗಿ ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನು ಸಹ ನಿರ್ದೇಶಿಸಿ ಅವರು ಸೈ ಅನಿಸಿಕೊಂಡಿದ್ದಾರೆ.ವಿಶೇಷವೆಂದರೆ ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಇವರು ಕನ್ನಡ ಚಲನಚಿತ್ರರಂಗಕ್ಕೆ ಹೊಸ ಆಯಾಮ ನೀಡಿದವರು.
ನಾಳೆ ಬೆಳಗ್ಗೆ ಹಾಲು ತುಪ್ಪ ಬಿಡುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ನಾಳೆಯೇ ಅಂಬರೀಶ್ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಬಿಡಲಿದ್ದೇವೆ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದರು.
ರೆಬೆಲ್ಅಂ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಡ್ರಾಮಾ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ಅಂಬರೀಶ್ ಅವರ ಚಿತ್ರಗಳನ್ನು ಯೋಗರಾಜ್ ಭಟ್ರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಚಿತೆಯ ಮೇಲೆ ಅಂಬಿ ಪಾರ್ಥಿವ ಶರೀರವನ್ನು ಮಲಗಿಸಿ, ಪತ್ನಿ ಸುಮಲತಾ ಮತ್ತು ಸಾಂಪ್ರದಾಯಿಕವಾಗಿ ಕುಟುಂಬಸ್ಥರು ಶಾಸ್ತ್ರ ನೆರವೇರಿಸಿದ ಬಳಿಕ ಪುತ್ರ ಅಭಿಷೇಕ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಹೌದು,ಕರ್ನಾಟಕದ ಪಾಲಿಗೆ ನವಂಬರ್ ತಿಂಗಳು ಶಾಪವೆಂದೇ ಹೇಳಬಹುದು.ಇದಕ್ಕೆ ಕಾರಣವಿಷ್ಟೇ ಕೇವಲ ಈ ತಿಂಗಳೊಂದರಲ್ಲಿಯೇ ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಮೂವರು ಕನ್ನಡಿಗರು ಕೊನೆಯುಸಿರೆಳೆದಿದ್ದಾರೆ.
ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಎಂದೇ ಹೆಸರಾದ ಮಂಡ್ಯದ ಗಂಡು ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಚಿತ್ರರಂಗ ಮತ್ತು ರಾಜಕೀಯ ರಂಗದ ನೂರಾರು ಗಣ್ಯರು ಅಂಬರೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.