BharatCaller Launched: TrueCallerಗೆ ಪೈಪೋಟಿ ನೀಡಲು ಬಂದಿದೆ ದೇಸಿ ಆಪ್ BharatCaller

BharatCaller Launched - ಕರೋನಾ ಬಳಿಕ  ಹಲವು ಸ್ಥಳೀಯ ಆಪ್‌ಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಟ್ವಿಟರ್‌ನ ಸ್ಥಳೀಯ ಆವೃತ್ತಿಯಾಗಲಿ ಅಥವಾ PUBG ನ ಸ್ಥಳೀಯ ಅಪ್ಲಿಕೇಶನ್ ಬ್ಯಾಟಲ್‌ಗ್ರೌಂಡ್ ಇಂಡಿಯಾ ಆಗಿರಲಿ, ಈ ಆಪ್ ಗಳು ವಿದೇಶಿ ಅಪ್ಲಿಕೇಶನ್‌ಗಳಿಗೆ ಉತ್ತಮ ಸ್ಪರ್ಧೆಯನ್ನು ನೀಡುತ್ತಿವೆ, ಇದೇ ಸರಣಿಯಲ್ಲಿ ಇದೀಗ ಸ್ಥಳೀಯ ಅಪ್ಲಿಕೇಶನ್ BharatCaller ಭಾರತದಲ್ಲಿ ಕಾಲರ್ ಐಡಿ ಆಪ್Truecaller ನೊಂದಿಗೆ ಪೈಪೋಟಿಗೆ ಇಳಿದಿದೆ. 

Written by - Nitin Tabib | Last Updated : Aug 27, 2021, 12:02 PM IST
  • ಟ್ರೂ ಕಾಲರ್ ಗೆ ಪೈಪೋಟಿ ನೀಡಲು ಬಂತು ಭಾರತ್ ಕಾಲರ್ ಆಪ್
  • ಭಾರತ್ ಕಾಲರ್ ಆಪ್ ಸಂಪೂರ್ಣ ಸ್ವದೇಶಿ ಆಪ್ ಆಗಿದೆ.
  • ಇದು ಬಳದೆದಾರರ ದತ್ತಾಂಶಗಳನ್ನು ಕೇವಲ ಎನ್ಕ್ರಿಪ್ಟ್ ರೂಪದಲ್ಲಿ ತನ್ನ ಸರ್ವರ್ ನಲ್ಲಿ ಸಂಗ್ರಹಿಸುತ್ತದೆ
BharatCaller Launched: TrueCallerಗೆ ಪೈಪೋಟಿ ನೀಡಲು ಬಂದಿದೆ ದೇಸಿ ಆಪ್ BharatCaller title=
BharatCaller Launched (File Photo)

BharatCaller Launched - ಕರೋನಾ ಬಳಿಕ  ಹಲವು ಸ್ಥಳೀಯ ಆಪ್‌ಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಟ್ವಿಟರ್‌ನ ಸ್ಥಳೀಯ ಆವೃತ್ತಿಯಾಗಲಿ ಅಥವಾ PUBG ನ ಸ್ಥಳೀಯ ಅಪ್ಲಿಕೇಶನ್ ಬ್ಯಾಟಲ್‌ಗ್ರೌಂಡ್ ಇಂಡಿಯಾ ಆಗಿರಲಿ, ಈ ಆಪ್ ಗಳು ವಿದೇಶಿ ಅಪ್ಲಿಕೇಶನ್‌ಗಳಿಗೆ ಉತ್ತಮ ಸ್ಪರ್ಧೆಯನ್ನು ನೀಡುತ್ತಿವೆ, ಇದೇ ಸರಣಿಯಲ್ಲಿ ಇದೀಗ ಸ್ಥಳೀಯ ಅಪ್ಲಿಕೇಶನ್ BharatCaller ಭಾರತದಲ್ಲಿ ಕಾಲರ್ ಐಡಿ ಆಪ್Truecaller ನೊಂದಿಗೆ ಪೈಪೋಟಿಗೆ ಇಳಿದಿದೆ. ಈ ಕುರಿತು ಹೇಳಿಕೆ ನೀಡಿರುವ ಆಪ್ ತಯಾರಕರು, ತಮ್ಮ ಆಪ್ ಕೆಲ ಸಂಗತಿಗಳಲ್ಲಿ ಟ್ರೂಕಾಲರ್ ಗಿಂದಲೂ ಉತ್ತಮವಾಗಿದೆ ಎಂದು ಹೇಳಿದ್ದು, ಭಾರತೀಯರಿಗೆ ಇದು ಟ್ರೂಕಾಲರ್ ಗಿಂತಲೂ ಉತ್ತಮ ಅನುಭವ ನೀಡಲಿದೆ ಎಂದಿದ್ದಾರೆ. ಈ ಆಪ್ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ

ಏನಿದು Caller ID App?
ನಿಮ್ಮ ಫೋನ್ ಸಂಖ್ಯೆಗೆ ಯಾರಾದರು ಅಪರಿಚಿತ ಕರೆಯನ್ನು ಮಾಡಿದರೆ, ಕಾಲರ್ ಐಡಿ ಅಪ್ಲಿಕೇಶನ್ ಅದನ್ನು ನಿಮಗೆ ತಿಳಿಸುತ್ತದೆ. ಅಂದರೆ, ಕರೆ ಮಾಡಿದವರ ಹೆಸರೇನು ಎಂದು ನಿಮಗೆ ಸುಲಭವಾಗಿ ತಿಳಿಯುತ್ತದೆ. ನೀವು ಕೂಡ ಆತನ ಇಮೇಲ್ ಐಡಿ, ಫೇಸ್ಬುಕ್ ಐಡಿ ನೋಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಫೋನ್‌ನಲ್ಲಿ ಯಾವುದೇ ಸಂಖ್ಯೆ ಸೇವ್ ಆಗಿರದಿದ್ದರೆ, ಈ  ಮಾಹಿತಿಯು ನಿಮಗೆ ತುಂಬಾ ಉಪಯುಕ್ತ ಸಾಬೀತಾಗುತ್ತದೆ. ಅಂದರೆ, ಕರೆ ಸ್ವೀಕರಿಸದೆಯೇ, ಫೋನ್ ಯಾವ  ಬ್ಯಾಂಕ್, ಕ್ರೆಡಿಟ್ ಕಾರ್ಡ್ ಅಥವಾ ಬೇರೆಯವರಿಂದ ಬಂದಿದೆಯೇ ಎಂದು ನಿಮಗೆ ತಿಳಿಯುತ್ತದೆ. ಈ ಆಪ್ ಮೂಲಕ ವಂಚನೆ ಕರೆಗಳನ್ನು ಕೂಡ ನಿರ್ಬಂಧಿಸಬಹುದು. ಇದರೊಂದಿಗೆ, ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ವಿಮಾ ಕಂಪನಿಗಳು ಸೇರಿದಂತೆ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಕರೆಗಳಿಂದ ನಿಮಗೆ ತೊಂದರೆಯಾಗುತ್ತಿದ್ದರೆ ಅವುಗಳನ್ನು ನೀವು ಸುಲಭವಾಗಿ ನಿರ್ಬಂಧಿಸಬಹುದು.

ಇದನ್ನೂ ಓದಿ-Smartphone: ಸ್ಮಾರ್ಟ್‌ಫೋನ್‌ನಲ್ಲಿ ಬೆಂಕಿಗೆ ಕಾರಣವಾಗುವ ಈ 10 ತಪ್ಪುಗಳ ಬಗ್ಗೆ ಇರಲಿ ಎಚ್ಚರ

BharatCaller App ವಿಶೇಷತೆ ಏನು?
ಭಾರತ್ ಕಾಲರ್ ಆಪ್ ಇತರೆ ಕಾಲರ್ ಐಡಿ ಆಪ್ ಗಳಿಗಿಂತ ಭಿನ್ನವಾಗಿದ್ದು, ಬಳಕೆದಾರರ ಕಾಂಟ್ಯಾಕ್ಟ್ಸ್ ಹಾಗೂ ಕಾಲ್ ಲಾಗ್ಸ್ ಗಳನ್ನು ತನ್ನ ಸರ್ವರ್ ನಲ್ಲಿ ಸೇವ್ ಮಾಡುವುದಿಲ್ಲ. ಅಲ್ಲದೆ, ಕಂಪನಿಯ ಯಾವುದೇ ಉದ್ಯೋಗಿಗಳು ಬಳಕೆದಾರರ ಫೋನ್ ಸಂಖ್ಯೆಗಳ ಡೇಟಾಬೇಸ್ ಅನ್ನು ಹೊಂದಿಲ್ಲ ಅಥವಾ ಅಂತಹ ಯಾವುದೇ ಡೇಟಾವನ್ನು ಅವರು ಪ್ರವೇಶಿಸುವುದಿಲ್ಲ. ಈ ಆಪ್‌ನ ಎಲ್ಲಾ ದತ್ತಾಂಶವನ್ನು ಎನ್‌ಕ್ರಿಪ್ಟ್ ರೂಪದಲ್ಲಿ ಸಂಗ್ರಹಿಸುತ್ತದೆ ಮತ್ತು ಇದರ ಸರ್ವರ್ ಅನ್ನು ಭಾರತದ (Swadeshi App)ಹೊರಗೆ ಇರುವವರು ಯಾರು ಬಳಸುವಂತಿಲ್ಲ. ಹೀಗಾಗಿ ಭಾರತ್ ಕಾಲರ್ ಆಪ್ ಸಂಪೂರ್ಣ ಸುರಕ್ಷಿತ, ಭಾರತೀಯ ಮತ್ತು ಬಳಕೆದಾರ ಸ್ನೇಹಿಯಾಗಿದೆ. ಭಾರತ್ ಕಾಲರ್ ಅನ್ನು ಇಂಗ್ಲಿಷ್, ಹಿಂದಿ, ತಮಿಳು, ಗುಜರಾತಿ, ಬಾಂಗ್ಲಾ, ಮರಾಠಿ ಮುಂತಾದ ಹಲವು ಭಾರತೀಯ ಭಾಷೆಗಳಲ್ಲಿ ಆರಂಭಿಸಲಾಗಿದೆ. ಈ ಕಾರಣದಿಂದಾಗಿ, ಯಾರು ಬೇಕಾದರೂ ಸುಲಭವಾಗಿ ತಮ್ಮ ಆಯ್ಕೆಯ ಭಾಷೆಯನ್ನು ಆರಿಸುವ ಮೂಲಕ ಈ ಆಪ್ ಅನ್ನು ಬಳಸಬಹುದು. ಪ್ರಸ್ತುತ ಇದು  AO ಆಂಡ್ರಾಯ್ಡ್ ಮತ್ತುiOS ಬಳಕೆದಾರರಿಗೆ ಲಭ್ಯವಿದೆ. ಇದು ಉಚಿತ ಆಪ್ ಆಗಿದೆ. ಈ ಆಪ್ ಅನ್ನು ಇದುವರೆಗೆ 6000ಕ್ಕೂ  ಬಾರಿ ಡೌನ್ಲೋಡ್ ಮಾಡಲಾಗಿದೆ.

ಇದನ್ನೂ ಓದಿ-Phone Battery: ನೀವೂ ಕೂಡ ನಿಮ್ಮ ಫೋನನ್ನು ಪದೇ ಪದೇ ಚಾರ್ಜ್ ಮಾಡುತ್ತೀರಾ? ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ

BharatCaller App ಒಡೆತನ ಯಾರ ಬಳಿ ಇದೆ?
ಸಂಪೂರ್ಣ ಭಾರತೀಯ (Swadeshi App) ಮೂಲದ ಕಿಕ್ ಹೆಡ್ ಸಾಫ್ಟ್ವೇರ್ (Kickhead Softwares) ಪ್ರೈ.ಲಿ. ಕಂಪನಿ BharatCaller App ಅನ್ನು ಅಭಿವೃದ್ಧಿಗೊಳಿಸಿದೆ. IIM ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿರುವ ಪ್ರಜ್ವಲ್ ಸಿನ್ಹಾ ಈ ಕಂಪನಿಯ ಸಂಸ್ಥಾಪಕರಾಗಿದ್ದಾರೆ, ಕುಣಾಲ್ ಪಸರೀಚಾ ಇದರ ಸಹ ಸಂಸ್ಥಾಪಕರಾಗಿದ್ದಾರೆ. ಕಂಪನಿಯ ಮುಖ್ಯ ಕಚೇರಿ ಉತ್ತರ ಪ್ರದೇಶದ ನೊಯಿಡಾನಲ್ಲಿದೆ.

ಇದನ್ನೂ ಓದಿ-ಸ್ಮಾರ್ಟ್ ಪೋನ್ ಆಯ್ತು, ಇನ್ಮುಂದೆ ಬರಲಿದೆ Apple Car! ಭವಿಷ್ಯ ನುಡಿದ ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News