Cheapest Recharge Plan:ಕೇವಲ 1 ರೂಪಾಯಿ ನೀಡಿ 56 GB 4G Internet ಹಾಗೂ 28 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಕೊಡುಗೆ!

Cheapest Recharge Plan: ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಇತ್ತೀಚೆಗಷ್ಟೇ ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ. ಇದರ ಅಡಿ ನೀವು ಕೇವಲ 1 ರೂಪಾಯಿ ಹೆಚ್ಚುವರಿ ಪಾವತಿಸಿ ಆಯ್ದ ಪ್ಲಾನ್ ಗಳ ವ್ಯಾಲಿಡಿಟಿಯನ್ನು 28 ದಿನಗಳವರೆಗೆ ವಿಸ್ತರಿಸಬಹುದು. ಜೊತೆಗೆ ನಿಮಗೆ 56GB 4G ಇಂಟರ್ನೆಟ್ ಕೂಡ ಉಚಿತ ಸಿಗಲಿದೆ.

Written by - Nitin Tabib | Last Updated : Apr 25, 2021, 09:50 PM IST
  • ಕೇವಲ ಒಂದು ರೂಪಾಯಿ ನೀಡಿ 56 ಜಿಬಿ ಡೇಟಾ, 28 ದಿನಗಳ ಹೆಚ್ಚುವರಿ ವ್ಯಾಲಿಡಿಟಿ.
  • ರಿಲಯನ್ಸ್ ಜಿಯೋ ಕಂಪನಿಯ ಮಾಸ್ಟರ್ ಸ್ಟ್ರೋಕ್ ಪ್ಲಾನ್
  • ಏನಿದು ಪ್ಲಾನ್ ತಿಳಿದುಕೊಳ್ಳೋಣ ಬನ್ನಿ.
Cheapest Recharge Plan:ಕೇವಲ 1 ರೂಪಾಯಿ ನೀಡಿ 56 GB 4G Internet ಹಾಗೂ 28 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಕೊಡುಗೆ! title=
Cheapest Recharge Plan (File Photo)

ನವದೆಹಲಿ: Cheapest Recharge Plan - ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಇತ್ತೀಚೆಗಷ್ಟೇ ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ. ಇದರ ಅಡಿ ನೀವು ಕೇವಲ 1 ರೂಪಾಯಿ ಹೆಚ್ಚುವರಿ ಪಾವತಿಸಿ ಆಯ್ದ ಪ್ಲಾನ್ ಗಳ ವ್ಯಾಲಿಡಿಟಿಯನ್ನು 28 ದಿನಗಳವರೆಗೆ ವಿಸ್ತರಿಸಬಹುದು. ಜೊತೆಗೆ ನಿಮಗೆ 56GB 4G ಇಂಟರ್ನೆಟ್ ಕೂಡ ಉಚಿತ ಸಿಗಲಿದೆ.

1 ರೂ. ಮಾಸ್ಟರ್ ಸ್ಟ್ರೋಕ್ 
ಹೌದು ನಾವು ನಿಮಗೆ ಹೇಳುತ್ತಿರುವುದು ರಿಲಯನ್ಸ್ ಜಿಯೋ 598 ರೂ. ಹಾಗೂ 599 ರೂ. ಪ್ರಿಪೇಯ್ಡ್ ಪ್ಲಾನ್ ಗಳ ಕುರಿತು. ಈ ಎರಡೂ ರಿಚಾರ್ಜ್ ಪ್ಲಾನ್ (Recharge Plan) ಗಳಲ್ಲಿ ಕೇವಲ ಒಂದು ರೂ. ಅಂತರವಿದೆ. ಮೊದಲ ನೋಟದಲ್ಲಿ ಕೇವಲ ಒಂದು ರೂಪಾಯಿ ಹೆಚ್ಚುವರಿ ನೀಡಿ ಯಾವುದೇ ವಿಶೇಷ ಲಾಭವಾಗುವುದಿಲ್ಲ ಏನಿಡಬಹುದು. ಆದರೆ, ಈ ಒಂದು ರೂಪಾಯಿ ಅಂತರ ಜಿಯೋ ಮಾಸ್ಟರ್ ಸ್ಟ್ರೋಕ್ ಆಗಿದೆ.

ಇದನ್ನೂ ಓದಿ-Powerful Fiber Broadband Plan: 500Mbps ಸ್ಪೀಡ್ ಹೊಂದಿರುವ ಪವರ್ ಫುಲ್ ಫೈಬರ್ ಬ್ರಾಡ್ ಬ್ಯಾಂಡ್ ಪ್ಲಾನ್ ಇದು, ಬೆಲೆಯೂ ಜಾಸ್ತಿ ಇಲ್ಲ

ಜಿಯೋ 598 ಪ್ಲಾನ್ 
ಜಿಯೋ ಕಂಪನಿಯ ರೂ.598 ಪ್ಲಾನ್ ವ್ಯಾಲಿಡಿಟಿ ಕೇವಲ 56 ದಿನಗಳಾಗಿದೆ. ಈ ಪ್ಲಾನ್ ಅನ್ನು ಸಕ್ರೀಯಗೊಳಿಸುವ ಗ್ರಾಹಕರಿಗೆ ನಿತ್ಯ 2ಜಿಬಿ 4ಜಿ ಡೇಟಾ, ಅನಿಯಮಿತ ಲೋಕಲ್ ಹಾಗೂ ಎಸ್ಟಿಡಿ ಕರೆ ಸೌಲಭ್ಯದ ಜೊತೆಗೆ 100 ಉಚಿತ sms ಲಾಭ ಕೂಡ ಸಿಗುತ್ತದೆ . ಇದರ ಜೊತೆಗೆ ಯಾವುದೇ ವಿಶೇಷ ಚಾರ್ಜ್ ಇಲ್ಲದೆ Jio Apps ಚಂದಾದಾರಿಕೆ ಹಾಗೂ ಒಂದು ವರ್ಷದ ಅವಧಿಗೆ Disney+HotStar ಚಂದಾದಾರಿಕೆ ಕೂಡ  ಉಚಿತ ಸಿಗಲಿದೆ.

ಇದನ್ನೂ ಓದಿ-Cheapest Prepaid Plans With 84 Days Validity: ಎಲ್ಲಕ್ಕಿಂತ ಅಗ್ಗದ 84 ದಿನಗಳ ರಿಚಾರ್ಜ್ ಪ್ಲಾನ್, ರೂ.329 ರಲ್ಲಿ ಉಚಿತ ಕಾಲಿಂಗ್ ಹಾಗೂ ಡೇಟಾ

ಜಿಯೋ ರೂ.599 ಪ್ಲಾನ್ 
ಇನ್ನೊಂದೆಡೆ ಜಿಯೋ ಕಂಪನಿಯ ರೂ.599 ರೂ. ಪ್ಲಾನ್ ಕುರಿತು ಹೇಳುವುದಾದರೆ, ಇದರಲ್ಲಿ ಗ್ರಾಹಕರಿಗೆ ನಿತ್ಯ 2 ಜಿಬಿ ಹೈ ಸ್ಪೀಡ್ 4 G ಇಂಟರ್ನೆಟ್, ಅನಿಯಮಿತ ಲೋಕಲ್ ಹಾಗೂ ಎಸ್ಟಿಡಿ ಕರೆ ಜೊತೆಗೆ ನಿತ್ಯ 100 ಉಚಿತ 100 ಉಚಿತ sms ಲಾಭ ಕೂಡ ಸಿಗಲಿದೆ. ಆದರೆ ಈ ಪ್ಲಾನ್ ವ್ಯಾಲಿಡಿಟಿ 84 ದಿನಗಳದ್ದಾಗಿದೆ. ಇದಲ್ಲದೆ ಜಿಯೋ ಆಪ್ ಗಳ ಉಚಿತ ಚಂದಾದಾರಿಕೆ ಕೂಡ ಗ್ರಾಹಕರಿಗೆ ಸಿಗಲಿದೆ. ಈ ಎರಡೂ ಪ್ಲಾನ್ ಗಳ ಅಂತರ ಸ್ಪಷ್ಟವಾಗಿದೆ. ಈ ಪ್ಲಾನ್ ಅಡಿ ನೀವು ಕೇವಲ ಒಂದು ರೂಪಾಯಿ ಹೆಚ್ಚುವರಿ ಪಾವತಿಸಿ 28 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಹಾಗೂ 56 GB ಹೆಚ್ಚುವರಿ ಇಂಟರ್ನೆಟ್ ಲಾಭ ಕೂಡ ಪಡೆಯಬಹುದು. 

ಇದನ್ನೂ ಓದಿ-Vi Cheapest Recharge Plan: ಮತ್ತೆ ಮಾರುಕಟ್ಟೆ ಪ್ರವೇಶಿಸಿದ ಅತ್ಯಂತ ಅಗ್ಗದ ಹಾಗೂ ಪಾಪ್ಯುಲರ್ ರಿಚಾರ್ಜ್ ಪ್ಲಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News