ಟಿವಿಯನ್ನೇ ಕಂಪ್ಯೂಟರ್ ಆಗಿ ಪರಿವರ್ತಿಸಿಕೊಳ್ಳುವ ಸುಲಭ ವಿಧಾನ!ಇದು ಹೊಸ ಟೆಕ್ನಾಲಜಿ ಪರಿಚಯ

ಸ್ಮಾರ್ಟ್ ಟಿವಿ ಇಲ್ಲ ಎಂದಾದರೆ JioFiber ಅಥವಾ JioAirFiber ನೊಂದಿಗೆ ಬರುವ ಸೆಟ್-ಟಾಪ್ ಬಾಕ್ಸ್ ಸಹಾಯದಿಂದ ಕೂಡಾ ಸಾಮಾನ್ಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಬಹುದು.

Written by - Ranjitha R K | Last Updated : Oct 18, 2024, 12:35 PM IST
  • ಸ್ಮಾರ್ಟ್ ಟಿವಿಯನ್ನು ಸುಲಭವಾಗಿ ಕಂಪ್ಯೂಟರ್ ಆಗಿ ಪರಿವರ್ತಿಸಬಹುದು.
  • ಈ ತಂತ್ರಜ್ಞಾನದ ಹೆಸರು ಜಿಯೋ ಕ್ಲೌಡ್ ಪಿಸಿ.
  • ಇದನ್ನು ಬಳಸುವುದು ಕೂಡಾ ತುಂಬಾ ಸುಲಭ
ಟಿವಿಯನ್ನೇ ಕಂಪ್ಯೂಟರ್ ಆಗಿ ಪರಿವರ್ತಿಸಿಕೊಳ್ಳುವ ಸುಲಭ ವಿಧಾನ!ಇದು ಹೊಸ ಟೆಕ್ನಾಲಜಿ ಪರಿಚಯ title=

ಇಂಡಿಯಾ ಮೊಬೈಲ್ ಕಾಂಗ್ರೆಸ್ 2024 ರಲ್ಲಿ (India Mobile Congress 2024) ರಿಲಯನ್ಸ್ ಜಿಯೋ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಈ ತಂತ್ರಜ್ಞನಾದ ಪ್ರಕಾರ ಮನೆಯಲ್ಲಿನ ಸ್ಮಾರ್ಟ್ ಟಿವಿಯನ್ನು ಸುಲಭವಾಗಿ ಕಂಪ್ಯೂಟರ್ ಆಗಿ ಪರಿವರ್ತಿಸಬಹುದು. ಈ ತಂತ್ರಜ್ಞಾನದ ಹೆಸರು ಜಿಯೋ ಕ್ಲೌಡ್ ಪಿಸಿ. ಇದರ ಸಹಾಯದಿಂದ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಬಹುದು.

ಇದಕ್ಕಾಗಿ ನಿಮಗೆ ಇಂಟರ್ನೆಟ್ ಸಂಪರ್ಕ, ಸ್ಮಾರ್ಟ್ ಟಿವಿ, ಕೀಬೋರ್ಡ್, ಮೌಸ್ ಮತ್ತು ಜಿಯೋ ಕ್ಲೌಡ್ ಪಿಸಿ ಅಪ್ಲಿಕೇಶನ್ ಅಗತ್ಯವಿದೆ.ಒಂದು ವೇಳೆ ನಿಮ್ಮ ಬಳಿ  ಸ್ಮಾರ್ಟ್ ಟಿವಿ ಇಲ್ಲ ಎಂದಾದರೆ JioFiber ಅಥವಾ JioAirFiber ನೊಂದಿಗೆ ಬರುವ ಸೆಟ್-ಟಾಪ್ ಬಾಕ್ಸ್ ಸಹಾಯದಿಂದ ಕೂಡಾ ಸಾಮಾನ್ಯ ಟಿವಿಯನ್ನು ಕಂಪ್ಯೂಟರ್ ಆಗಿ ಪರಿವರ್ತಿಸಬಹುದು.

ಇದನ್ನೂ ಓದಿ : ಮನೆಯಲ್ಲಿ ರಾಶಿರಾಶಿ ಹಳೆಯ ಸೀರೆ-ಬಟ್ಟೆಗಳಿದ್ಯಾ? ಹಾಗಾದ್ರೆ ಈ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಿ ಸಾವಿರ ಸಾವಿರ ರೂಪಾಯಿ ಪಡೆಯಿರಿ! ಬಟ್ಟೆ ಮಾರುವ ಸೈಟ್ ಇಲ್ಲಿದೆ

ಏನಿದು ಜಿಯೋ ಕ್ಲೌಡ್ ಪಿಸಿ ?:
ಜಿಯೋ ಕ್ಲೌಡ್ ಪಿಸಿ ಎನ್ನುವುದು ಯಾವುದೇ ಟಿವಿಯನ್ನು ಕ್ಲೌಡ್ ಕಂಪ್ಯೂಟಿಂಗ್‌ಗೆ ಇಂಟರ್ನೆಟ್ ಮೂಲಕ ಸಂಪರ್ಕಿಸುವ ತಂತ್ರಜ್ಞಾನವಾಗಿದೆ.ಇದು ಬಳಸುವುದಕ್ಕೂ  ತುಂಬಾ ಸುಲಭ.ಬಳಕೆದಾರರು ಸರಳವಾಗಿ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬೇಕು. ಕ್ಲೌಡ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ಡೇಟಾ ಟಿವಿ ಪರದೆಯಲ್ಲಿ ಗೋಚರಿಸುತ್ತದೆ.ಈಗ ಇಮೇಲ್‌ಗಳನ್ನು ಕಳುಹಿಸುವುದು, ಸಂದೇಶ ಕಳುಹಿಸುವುದು, ಸೋಶಿಯಲ್ ನೆಟ್‌ವರ್ಕಿಂಗ್, ಇಂಟರ್ನೆಟ್ ಸರ್ಫಿಂಗ್, ಶಾಲಾ ಪ್ರಾಜೆಕ್ಟ್‌ಗಳು ಮತ್ತು  ಆಫೀಸ್ ಪ್ರೆಸೆಂಟೆಶನ್ ನಂಥಹ ಎಲ್ಲಾ ಕಾರ್ಯಗಳನ್ನು ಸ್ಮಾರ್ಟ್ ಟಿವಿಯಲ್ಲಿ ಮಾಡಬಹುದು.

ಸರಳವಾಗಿ ಹೇಳುವುದಾದರೆ, ಎಲ್ಲಾ ಮಾಹಿತಿಯನ್ನು ಕ್ಲೌಡ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಟಿವಿ ಮೂಲಕ ಸರ್ವರ್‌ಗಳು, ಸ್ಟೋರೇಜ್,  ಡೇಟಾಬೇಸ್‌ಗಳು, ನೆಟ್‌ವರ್ಕಿಂಗ್,ಸಾಫ್ಟ್‌ವೇರ್ ಮತ್ತು ವಿಶ್ಲೇಷಣೆಗಳಂತಹ ಸೇವೆಗಳನ್ನು  ಅಕ್ಸೆಸ್ ಮಾಡಬಹುದು. 

ಮಧ್ಯಮ ವರ್ಗದ ಜನರಿಗೆ ಉತ್ತಮ :
ಭಾರತದ ಮಧ್ಯಮ ವರ್ಗದ ಕುಟುಂಬಗಳಿಗೆ ಕಂಪ್ಯೂಟರ್ ಖರೀದಿಸಲು ಕೆಲವೊಮ್ಮೆ ಕಷ್ಟವಾಗುತ್ತದೆ.ಆಗ ಜಿಯೋ ಕ್ಲೌಡ್ ಪಿಸಿ ಈ ಸಮಸ್ಯೆಗೆ ಪರಿಹಾರವಾಗಿದೆ.ಕ್ಲೌಡ್ ಕಂಪ್ಯೂಟಿಂಗ್‌ನ ಸಾಮರ್ಥ್ಯವು ಅಗತ್ಯಕ್ಕೆ ಅನುಗುಣವಾಗಿ ಬದಲಾಗಬಹುದು.   ಸಾಮಾನ್ಯ ಕಂಪ್ಯೂಟರ್‌ಗಿಂತ ಡೇಟಾ ರಿಕವರಿ ಹೆಚ್ಚು ಸುಲಭವಾಗಿರುತ್ತದೆ. ಈ ತಂತ್ರಜ್ಞಾನವು ಮೊಬೈಲ್ ಸಾಧನಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇದನ್ನು ಸ್ಮಾರ್ಟ್ ಟಿವಿ ಮತ್ತು ಮೊಬೈಲ್‌ನಲ್ಲಿ ಬಳಸಬಹುದು.

ಇದನ್ನೂ ಓದಿ : ಇದ್ದಕ್ಕಿದ್ದಂತೆ 10 ಸಾವಿರ ರೂಪಾಯಿ ಅಗ್ಗವಾದ iPhone 16! ಬುಕ್ ಮಾಡಿದ ಹತ್ತು ನಿಮಿಷದಲ್ಲಿ ಮನೆ ಬಾಗಿಲಿಗೆ ಡೆಲಿವೆರಿ

ಮಾರುಕಟ್ಟೆಗೆ ಯಾವಾಗ ಕಾಲಿಡುತ್ತದೆ ? :
ರಿಲಯನ್ಸ್ ಜಿಯೋ ಈ ಅಪ್ಲಿಕೇಶನ್‌ನ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಆದರೆ ಲವೇ ತಿಂಗಳುಗಳಲ್ಲಿ ಈ ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಈ ಹೊಸ ತಂತ್ರಜ್ಞಾನದ ಆಗಮನದಿಂದ, ಕಂಪ್ಯೂಟರ್ ಪ್ರಪಂಚದ ಅಕ್ಸೆಸ್ ಎಲ್ಲರಿಗೂ ಸುಲಭವಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News