Affordable AC: ಗುಜರಾತ್ ಮೂಲದ ಟ್ಯೂಪಿಕ್ ಎಂಬ ಕಂಪನಿಯು ಸೂಪರ್ ಫೀಚರ್ ಉಳ್ಳ ಹವಾನಿಯಂತ್ರಣವನ್ನು ಅಭಿವೃದ್ಧಿಪಡಿಸಿದೆ. ಇದು ಕೇವಲ 400W ವಿದ್ಯುತ್ ಅನ್ನು ಬಳಸುತ್ತದೆ. ಈ ಎಸಿಯ ವಿಶೇಷತೆ ಏನೆಂದರೆ, ಇದು ಕೂಲರ್ ನಂತೆ ಕೆಲಸ ಮಾಡುತ್ತದೆ. ಆದರೆ ಅದಕ್ಕಿಂತ ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ. ಟ್ಯೂಪಿಕ್ ಎಸಿ 13 ಕೆಜಿ ತೂಗುತ್ತದೆ ಮತ್ತು ಕಾಂಪ್ಯಾಕ್ಟ್ ಗಾತ್ರದಲ್ಲಿ ಬರುತ್ತದೆ. ಆದ್ದರಿಂದ ನೀವು ಅದನ್ನು ಸುಲಭವಾಗಿ ಜೋಡಿಸಬಹುದು. ಇನ್ನು Tupik Dual AC ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಇದನ್ನೂ ಓದಿ: ಮಧುಮೇಹಕ್ಕೆ 'ಬೀನ್ಸ್' ಸೂಪರ್‌ಫುಡ್..! ಹೇಗೆ ಗೊತ್ತಾ.. ತಪ್ಪದೇ ತಿಳಿಯಿರಿ
ಈ ಎಸಿ ನಿಜವಾಗಿಯೂ ಒಂದು ಮಿರಾಕಲ್ ಎನ್ನಬಹುದು. ಏಕೆಂದರೆ ಬೇಸಿಗೆ, ಮಳೆ, ಚಳಿ… ವಾತಾವರಣಕ್ಕೆ ತಕ್ಕಂತೆ ಕೆಲಸ ಮಾಡುತ್ತದೆ. ಚಳಿಗಾಲದಲ್ಲಿ ಬೆಚ್ಚಗಿನ ಅನುಭವ ನೀಡಿದರೆ, ಬೇಸಿಗೆಯಲ್ಲಿ 3 ನಿಮಿಷಗಳಲ್ಲಿ ತಂಪಾದ ಗಾಳಿಯನ್ನು ಒದಗಿಸಲು ಪ್ರಾರಂಭಿಸುತ್ತದೆ. ಈ ಏರ್ ಕಂಡಿಷನರ್ ಮೂಲಕ ನೀವು 9 ರಿಂದ 13 ಡಿಗ್ರಿ ಸೆಲ್ಸಿಯಸ್ ತಂಪಾದ ತಾಪಮಾನವನ್ನು ಪಡೆಯುತ್ತೀರಿ. ಈ ವೈಶಿಷ್ಟ್ಯಗಳು ಇತರ ಎಸಿಗಳಲ್ಲಿ ಲಭ್ಯವಿಲ್ಲ. ಇದರಿಂದಾಗಿ ಈ ಎಸಿ ಹೆಚ್ಚು ಜನಪ್ರಿಯವಾಗಿದೆ. ಈ ಎಸಿಯನ್ನು ಫಿಟ್ ಮಾಡಲು ನೀವು ಅತ್ಯಲ್ಪ ಮೊತ್ತವನ್ನು ಮಾತ್ರ ಖರ್ಚು ಮಾಡಬೇಕಾಗುತ್ತದೆ.
ಇದು ವಿದ್ಯುತ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದನ್ನು ಚಲಾಯಿಸಲು ನಿಮಗೆ ಯಾವುದೇ ನೀರು, ಗ್ಯಾಸ್, ಬ್ಯಾಟರಿ ಅಗತ್ಯವಿಲ್ಲ. ಜನರೇಟರ್, ಯುಪಿಎಸ್, ಬ್ಯಾಟರಿ, ಸೌರಶಕ್ತಿಯಿಂದಲೂ ನೀವು ಅದನ್ನು ಸುಲಭವಾಗಿ ಚಲಾಯಿಸಬಹುದು. ಅಲ್ಲದೆ, ಇದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದರಿಂದಾಗಿ ಈ ಎಸಿ ತುಂಬಾ ಉಪಯುಕ್ತವಾಗಿದೆ. ಈ ಎಸಿಯಲ್ಲಿ ಅನೇಕ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ. ಇದು ನಿಮಗೆ ಆರಾಮದಾಯಕ ಹವಾನಿಯಂತ್ರಣ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: Share Market Update: ಸತತ ಎರಡನೇ ದಿನ 234 ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್
ಈ ಎಸಿ ನಿಮಗೆ ಎರಡು ಮಾದರಿಗಳಲ್ಲಿ ಲಭ್ಯವಿದೆ. ಮೊದಲ ಮಾದರಿಯನ್ನು ಒಂದೇ ಬೆಡ್ ರೂಂಗೆ ವಿನ್ಯಾಸಗೊಳಿಸಲಾಗಿದೆ. ಆದರೆ ಎರಡನೇ ಮಾದರಿಯನ್ನು ಡಬಲ್ ಬೆಡ್’ಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಎರಡೂ ಮಾದರಿಗಳ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಸಿಂಗಲ್ ಬೆಡ್ ಗೆ 17,990 ರೂ., ಡಬಲ್ ಬೆಡ್ ಗೆ 19,990 ರೂ. ಕಂಪನಿಯು ಈ AC ಯಲ್ಲಿ ಒಂದು ವರ್ಷದ ವಾರಂಟಿಯನ್ನು ನೀಡುತ್ತಿದೆ. ಆದ್ದರಿಂದ ನೀವು ಉತ್ತಮ ಗುಣಮಟ್ಟದ ಉತ್ಪನ್ನವನ್ನು ಪಡೆಯುತ್ತಿರುವಿರಿ. ನೀವು ಅದನ್ನು ಕೇವಲ ರೂ.5,000 ಮಾಸಿಕ EMI ನಲ್ಲಿ ಆಫರ್ ಗಳ ಮೂಲಕ ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ