ನವದೆಹಲಿ: ಶಿಯೋಮಿ, ರಿಯಲ್‌ಮಿ ಮತ್ತು ಸ್ಯಾಮ್‌ಸಂಗ್‌ನಂತೆಯೇ ಒನ್‌ಪ್ಲಸ್ ಕೂಡ ಭಾರತದಲ್ಲಿ 20 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಉತ್ತಮ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳನ್ನು ಹೊರತಂದಿರುವ ಚೀನಾದ ಕಂಪನಿಯು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್(Affordable Smartphone)ಗಳನ್ನು ಬಿಡುಗಡೆ ಮಾಡುವ ನಿಖರ ದಿನಾಂಕವನ್ನು ಬಹಿರಂಗಪಡಿಸಿಲ್ಲ.
ವರದಿಗಳ ಪ್ರಕಾರ 2022ರ 2ನೇ ಕ್ವಾರ್ಟರ್(Q2 2022)ನಲ್ಲಿ 20 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಒನ್‌ಪ್ಲಸ್(OnePlus) ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಒನ್‌ಪ್ಲಸ್ ಬ್ರಾಂಡ್ ಒಪ್ಪೋ(Oppo)ದಲ್ಲಿ ವಿಲೀನಗೊಂಡ ಬಳಿಕ ಗ್ರಾಹಕರಿಗೆ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ನ ಬಿಡುಗಡೆ ಮಾಡಬಹುದು ಎಂಬ ಊಹಾಪೋಹಗಳು ಕೇಳಿಬಂದಿದೆ. ಈ ಎರಡೂ ಮೊಬೈಲ್ ಬ್ರಾಂಡ್‌ಗಳು ಚೀನಾ(China) ಮೂಲದ ಬಿಎಲ್‌ಕೆ ಎಲೆಕ್ಟ್ರಾನಿಕ್ಸ್ ಒಡೆತನದಲ್ಲಿವೆ.
ಇದನ್ನೂ ಓದಿ: Gold-Silver Price : ಈ ವಾರ ಚಿನ್ನದ ಬೆಲೆಯಲ್ಲಿ 9200 ರೂ.ಗಳಷ್ಟು ಇಳಿಕೆ : ಬೆಳ್ಳಿ ಕೂಡ 1100 ರೂ. ಅಗ್ಗ!
ಆಪರೇಟಿಂಗ್ ಸಿಸ್ಟಂಗಳನ್ನು ಪ್ರಮಾಣೀಕರಿಸುವಾಗ ಅವುಗಳ ದಕ್ಷತೆಯ ಮಟ್ಟವನ್ನು ಸುಧಾರಿಸಲು ಈ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಗಳು ತಮ್ಮ ಆಪರೇಟಿಂಗ್ ಸಿಸ್ಟಂಗಳನ್ನು OxygenOS and ColorOS ಅನ್ನು ವಿಲೀನಗೊಳಿಸುತ್ತಿವೆ.
Oppo has always been linked to OnePlus one way or the other. But now they are dictating the terms. OnePlus is going through a shift, and sub 20k phones for India are on the cards.
No defined timeline for now, could see them as early as next quarter or Q2'22— Yogesh Brar (@heyitsyogesh) September 8, 2021
ಮುಂಬರುವ ಕಡಿಮೆ ಬೆಲೆಯ ಒನ್‌ಪ್ಲಸ್ ಸ್ಮಾರ್ಟ್‌ಫೋನ್(OnePlus Smartphone)ಅನ್ನು OPPO ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಡೇಟಾ ಇಂಜಿನಿಯರ್ ಮತ್ತು ಫ್ರೀಲ್ಯಾನ್ಸ್ ಪತ್ರಕರ್ತ ಯೋಗೀಶ್ ಬ್ರಾರ್ ಪ್ರಕಾರ, ಒನ್‌ಪ್ಲಸ್ 20 ಸಾವಿರ ರೂ. ಗಿಂತಲೂ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಯೋಚಿಸುತ್ತಿದೆ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘OPPOದ ವಿಲೀನದ ನಿಯಮಗಳು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್(Smartphone)ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದೆ’ ಎಂದು ಹೇಳಿದ್ದಾರೆ. ‘ಅತ್ಯಂತ ಶೀಘ್ರವೇ OPPO ಸಯಭಾಗಿತ್ವದಲ್ಲಿ 20 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ OnePlus ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ 2022ರ 2ನೇ ಕ್ವಾರ್ಟರ್ ಮುಂಚಿತವಾಗಿಯೇ ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.