ನವದೆಹಲಿ : Amazon Great Indian Festival Sale 2021 : ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ಅಕ್ಟೋಬರ್ 3 ರಂದು ಆರಂಭವಾಗಲಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಅಗ್ಗದ ದರದಲ್ಲಿ ಸಿಗಲಿದೆ. ಈ ಸೇಲ್ ನಲ್ಲಿ ಸ್ಯಾಮ್‌ಸಂಗ್ (Samsung) ತನ್ನ ದುಬಾರಿ ಫೋನ್‌ಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ. ನೀವು ಕೂಡಾ ಸ್ಯಾಮ್‌ಸಂಗ್ ನ ಈ ಫೋನ್ ಖರೀದಿಸಬೇಕೆದಿದ್ದರೆ, ಈ ಸೇಲ್ ಉತ್ತಮ ಅವಕಾಶ ನೀಡುತ್ತದೆ. ಸ್ಯಾಮ್ಸಂಗ್ ಈ ಸೇಲ್ ನಲ್ಲಿ ಸಿಗುವ ಪ್ರಮುಖ ಡೀಲ್‌ಗಳನ್ನು ಬಹಿರಂಗಪಡಿಸಿದೆ. ಲೈವ್ ಪೇಜ್ ಪ್ರಕಾರ, Samsung Note 20 ಮತ್ತು Note 20 Ultra 5G ಮೇಲೆ ಭಾರೀ ರಿಯಾಯಿತಿಗಳನ್ನು ಪಡೆಯಬಹುದು.
ಅಗ್ಗದ ದರದಲ್ಲಿ ಸಿಗಲಿದೆ Samsung Note 20 :
ಅಮೆಜಾನ್ ಸೇಲ್ (Amazon sale) ನಲ್ಲಿ, Samsung Note 20 ರ 8GB RAM + 256GB ಸ್ಟೋರೇಜ್ ರೂಪಾಂತರವನ್ನು 30,399 ರೂ. ರಿಯಾಯಿತಿ ದರದಲ್ಲಿ ಖರೀದಿಸಬಹುದು. ಅಂದರೆ, ಈಗ 85,999 ರಿಂದ ರೂ. ಬದಲಿಗೆ 55,600 ರೂಪಾಯಿಗಳನ್ನು ಪಾವತಿಸಿ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇನ್ನು ವಿಶೇಷ ಆಫರ್ ಅಡಿಯಲ್ಲಿ ಈ ಫೋನ್ 44,999 ರೂ.ಗಳಿಗೆ ಸಿಗಲಿದೆ.
ಇದನ್ನೂ ಓದಿ : ಬಿಡುಗಡೆಯಾಯ್ತು Xiaomi 11 Lite NE 5G Smartphone, ಇದರ ವೈಶಿಷ್ಟ್ಯ ಮತ್ತು ಬೆಲೆ ತಿಳಿಯಿರಿ
Samsung Note 20 Ultra 5G ಮೇಲೆ 24 ಸಾವಿರ ರಿಯಾಯಿತಿ :
ಅಮೆಜಾನ್ ಸೇಲ್ ನಲ್ಲಿ, ಸ್ಯಾಮ್ಸಂಗ್ ನೋಟ್ 20 ಅಲ್ಟ್ರಾ 5G ಯ 12GB RAM + 256GB ಸ್ಟೋರೇಜ್ ರೂಪಾಂತರವನ್ನು 1,15,000 ಬದಲಿಗೆ 90,400 ರೂಪಾಯಿಗೆ ಸಿಗಲಿದೆ. ಸೇಲ್ ನಲ್ಲಿ ಇನ್ನೂ ಹಲವು ಕೊಡುಗೆಗಳು ಮತ್ತು ರಿಯಾಯಿತಿಗಳು (Discount) ಲಭ್ಯವಿರುತ್ತವೆ. ಎಲ್ಲಾ ರಿಯಾಯಿತಿ ಮತ್ತು ಆಫರ್ ನಂತರ ಈ ಫೋನ್ ಅನ್ನು 69,999 ರೂ. ಗಳಿಗೆ ಖರೀದಿಸಬಹುದು.
ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗಲಿದೆ ಉತ್ತಮ ಆಫರ್ :
ಅಮೆಜಾನ್ ಇಂಡಿಯಾ (Amazon India) ವೆಬ್‌ಸೈಟ್ ಪ್ರಕಾರ, 6.53-ಇಂಚಿನ ಡಿಸ್‌ಪ್ಲೇ, 5000mAh ಬ್ಯಾಟರಿ ಮತ್ತು ಹೆಲಿಯೊ G25 SoC ಹೊಂದಿರುವ Redmi 9A 6,799 ರೂ.ಗೆ ಲಭ್ಯವಿರಲಿದೆ. ವಿವೋ ವಿ 21 ಇ 5 ಜಿ 24,990 ರೂ.ಗಳಲ್ಲಿ ಲಭ್ಯವಿರುತ್ತದೆ. ವಿವೋ ವೈ 73 20,990 ರೂ. ಮತ್ತು ವಿವೋ ಎಕ್ಸ್ 60 34,990 ರೂ ಮತ್ತು ವಿವೋ ವೈ 20 ಜಿ 2021 13,990 ರೂ.ಗೆ ಮಾರಾಟವಾಗಲಿದೆ. ಎನ್ನು ಎಕ್ಸ್ಚೇಂಜ್ ಆಫರ್ ನಲ್ಲಿ, ವಿವೋ ಫೋನ್‌ಗಳ ಮೇಲೆ 3,000 ರೂಪಾಯಿವರೆಗೆ ಹೆಚ್ಚುವರಿ ರಿಯಾಯಿತಿ ಸಿಗಲಿದೆ.
ಇದನ್ನೂ ಓದಿ : Nokia Laptop: ಅಗ್ಗದ ಬೆಲೆಯಲ್ಲಿ ಜಬರ್ದಸ್ತ್ ಲ್ಯಾಪ್ ಟಾಪ್ ಬಿಡುಗಡೆ ಮಾಡಿದ ನೋಕಿಯಾ, ಬೆಲೆ-ವೈಶಿಷ್ಟ್ಯಗಳ ವಿವರ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.