Viral Video : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಅನ್ನುವಂತಾಗಿದೆ. ಇಂಟರ್ನೆಟ್ ಮೂಲಕ ಅನೇಕ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ. ನಾವು ದಿನದಿಂದ ದಿನಕ್ಕೆ ಹಲವಾರು ಕಷ್ಟಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತೇವೆ. ಈ ಗೋಜಲು ಜೀವನದಿಂದ ಸ್ವಲ್ಪ ಮಟ್ಟಿಗಾದರೂ ಪರಿಹಾರ ಸಿಗಬೇಕು ಎಂದು ಬಯಸುತ್ತೇವೆ. ಅಂತಹ ವಿಷಯಗಳಲ್ಲಿ ಸಾಮಾಜಿಕ ಮಾಧ್ಯಮವು ಪ್ರಮುಖ ಪಾತ್ರ ವಹಿಸುತ್ತದೆ.
ಇಂಟರ್ನೆಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ಹೆಚ್ಚಿನವರು ಪ್ರಾಣಿಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಅದೂ ಕೂಡ ನಾಯಿ, ಬೆಕ್ಕು, ಸಿಂಹ, ಹುಲಿ, ಮಂಗ, ಹಾವು ಮುಂತಾದ ಪ್ರಾಣಿಗಳಿಗೆ ಇಲ್ಲಿ ಅಭಿಮಾನಿ ಬಳಗ ದೊಡ್ಡದು. ಇನ್ನು ಕೋತಿಯ ವಿಡಿ ಯೋಗಳಿಗೆ ಸ್ವಲ್ಪ ಹೆಚ್ಚೇ ಅಭಿಮಾನಿಗಳಿದ್ದಾರೆ.
ಇದನ್ನೂ ಓದಿ : ವ್ಯಕ್ತಿಯ ಹೆಲ್ಮೆಟ್ ನಲ್ಲಿ ನಾಗರ ಹಾವು, ಹೆಡೆಬಿಚ್ಚಿ ದಾಳಿ, ದಂಗಾಗಿಸುವ ವಿಡಿಯೋ ಇಲ್ಲಿದೆ
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಶೇರ್ :
ಇತ್ತೀಚೆಗಷ್ಟೇ ಇಂತಹದೊಂದು ವಿಡಿಯೋವನ್ನು ಶೇರ್ ಮಾಡಲಾಗಿದೆ. ಇದರಲ್ಲಿ ಮಂಗದ ಜೊತೆಗೆ ನಾಯಿ, ಹುಂಜ ಕೂಡಾ ಕಾಣಸಿಗುತ್ತವೆ. ಮೂವರೂ ಒಟ್ಟಿಗೆ ವಿಶ್ರಾಂತಿ ಪಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಮೂವರನ್ನು ನೋಡಿದಾಗ ನಮಗೆ ಆಶ್ಚರ್ಯವಾಗದೇ ಇರದು. ಈ ಪ್ರಾಣಿಗಳ ನಡುವಿನ ಸ್ನೇಹವನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.
ಪ್ರಾಣಿಗಳ ಮಧ್ಯೆ ಅಪರೂಪದ ಸ್ನೇಹ :
ಮೂವರೂ ಯಾವುದೇ ಭಯವಿಲ್ಲದೆ ತಮ್ಮ ಸ್ನೇಹವನ್ನು ಆನಂದಿಸುತ್ತಿದ್ದಾರೆ. ವೀಡಿಯೊದ ಆರಂಭದಲ್ಲಿ ನಾಯಿಯೊಂದು ಮಲಗಿರುವುದನ್ನು ಕಾಣಬಹುದು. ನಾಯಿಯ ಮೇಲೆ ಕೋತಿ ಮಲಗಿದರೆ ಪಕ್ಕದಲ್ಲಿಯೇ ಕೋಳಿ ಕುಳಿತಿದೆ. ಸ್ವಲ್ಪ ಹೊತ್ತಿನ ನಂತರ ಕೋತಿ ಎದ್ದು ಕುಳಿತುಕೊಳ್ಳುತ್ತದೆ. ಮಾತ್ರವಲ್ಲ ಹುಂಜದ ತಲೆಯ ಮೇಲೆ ಹೇನು ಹುಡುಕಲು ಆರಂಭಿಸುತ್ತದೆ. ಮಂಗ, ನಾಯಿ, ಕೋತಿಯ ಈ ಸ್ನೇಹ ನೋಡುಗರನ್ನು ಬೆರಗಾಗಿಸುತ್ತದೆ.
ಇದನ್ನೂ ಓದಿ : ಬೆಕ್ಕುಗಳ ಮಧ್ಯೆ ಸಿಲುಕಿಬಿದ್ದ ಬಡಪಾಯಿ ಗುಬ್ಬಚ್ಚಿ, ಪ್ರಾಣ ರಕ್ಷಿಸಿಕೊಳ್ಳಲು ಮಾಡಿದ ಟ್ರಿಕ್ ಸಕ್ಕತ್ತಾಗಿದೆ... ವಿಡಿಯೋ ನೋಡಿ!
ಅದ್ಭುತ ವೀಡಿಯೊವನ್ನು ಇಲ್ಲಿ ವೀಕ್ಷಿಸಿ:
three best friends chillin pic.twitter.com/SbfUwo8kmS
— Nature is Amazing ☘️ (@AMAZlNGNATURE) November 29, 2023
ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ :
ನೇಚರ್ ಈಸ್ ಅಮೇಜಿಂಗ್ ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ . ಇದು ಸಾಕಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಈ ವಿಡಿಯೋ ಕಂಡು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ