Lubna Jaffery Viral Video: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಾರ್ವೆಯ ಸಾಂಸ್ಕೃತಿಕ ಸಚಿವೆ ತಮ್ಮ ಸ್ತನಗಳನ್ನು ಪ್ರದರ್ಶಿಸುವ ಮೂಲಕ ಭಾರೀ ವಿವಾದವನ್ನು ಸೃಷ್ಟಿಸಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಮತ್ತು ಸಾರ್ವಜನಿಕರ ಎದುರೇ ಸಚಿವೆ ಸ್ತನ ಪ್ರದರ್ಶಿಸಿದ್ದಾರೆ. ಈ ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಾರ್ವೆಯಲ್ಲಿ ನಡೆದ ಓಸ್ಲೋ ಪ್ರೈಡ್ ಇವೆಂಟ್ನಲ್ಲಿ ಸಾಂಸ್ಕೃತಿಕ ಮತ್ತು ಲಿಂಗ ಸಮಾನತೆ ಇಲಾಖೆ ಸಚಿವೆ ಲುಬ್ನಾ ಜ್ಯಾಫೆರಿ ತಾವು ಧರಿಸಿದ್ದ ಟಾಪ್ ಅನ್ನು ಎತ್ತಿ ತಮ್ಮ ಸ್ತನಗಳನ್ನು ತೋರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಸಚಿವೆಯ ಈ ವರ್ತನೆಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 11ನೇ ಮಗುವಿಗೆ ತಂದೆಯಾದ ವಿಶ್ವದ ನಂ. 1 ಶ್ರೀಮಂತ ಎಲಾನ್ ಮಸ್ಕ್..!
Ladies and gentlemen, I present to you the Norwegian Minister of Culture and Equality, Lubna Jaffer, at a Pride event in Oslo, Norway.
Lubna is flashing her titties (!?) at the Pride event «Queer Talk».
She has been named this year’s «fag hag», and during the talk show «Queer… pic.twitter.com/9ClCIr3BNM
— Hanne C. Ramberg 🎗️ (@hanneramberg) June 26, 2024
ಜೂನ್ನಲ್ಲಿ ಈ ಓಸ್ಲೋ ಪ್ರೈಡ್ ಇವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವೆ ಲುಬ್ನಾ ಜ್ಯಾಫೆರಿಗೆ ʼಫ್ಯಾಗ್ ಹ್ಯಾಗ್ 2024ʼ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ ಅವರು, ತಾವು ಧರಿಸಿದ್ದ ಟಾಪ್ ಎತ್ತಿ ತನ್ನ ಸ್ತನಗಳನ್ನು ಪ್ರದರ್ಶಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ. ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆ ತನ್ನಿ, ನಿಮ್ಮನ್ನು ನೀವು ಅಷ್ಟೋಂದು ಗಂಭೀರವಾಗಿ ಪರಿಗಣಿಸಬೇಡಿʼ ಅಂತಾ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಆರಂಧತಿ ರಾಯ್ ಗೆ 2024ರ PEN ಪಿಂಟರ್ ಪ್ರಶಸ್ತಿ
ಲುಬ್ನಾರ ಈ ವರ್ತನೆ ನೆರೆದಿದ್ದ ಪ್ರೇಕ್ಷಕರಿಗೆ ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದಿದೆ. ನಾರ್ವೆ ಪ್ರಧಾನಿ ಜೋನಸ್ ಗಹ್ರ್ ಸ್ಟೋರ್ ಅವರು ಲುಬ್ನಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲುಬ್ನಾ ಅವರು ಅತ್ಯಂತ ಆತ್ಮವಿಶ್ವಾಸ, ಮುಕ್ತ ಮತ್ತು ಅದ್ಭುತ ವ್ಯಕ್ತಿಯಾಗಿದ್ದಾರೆ. ದೇಶದಾದ್ಯಂತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರಿಗೆ ವಿಶೇಷ ಗೌರವ ನೀಡಲಾಗುತ್ತದೆʼ ಎಂದು ಹೇಳಿದ್ದಾರೆ.
ಈವೆಂಟ್ನ ಆಯೋಜಕ ಜೋಕಿಮ್ ಆಡ್ಲ್ಯಾಂಡ್ ಸಹ ಲುಬ್ನಾರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ʼಹಲವಾರು ವರ್ಷಗಳಲ್ಲಿ ನಡೆದ 'ಓಸ್ಲೋ ಪ್ರೈಡ್' ಕಾರ್ಯಕ್ರಮದಲ್ಲಿ ನಡೆದ ಅತ್ಯುತ್ತಮ ಸಂಗತಿ ಇದಾಗಿದೆ. ಈ ರೀತಿ ಮುಕ್ತವಾಗಿ ತಮ್ಮ ಅಭಿಪ್ರಾಯ, ವರ್ತನೆ ವ್ಯಕ್ತಪಡಿಸುವ ಸಚಿವೆಯನ್ನು ಹೊಂದಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಪ್ರೇಕ್ಷಕರೂ ಕೂಡ ಲುಬ್ನಾರನ್ನು ಮೆಚ್ಚಿಕೊಂಡಿದ್ದಾರೆ. ಇಷ್ಟು ವರ್ಷಗಳಲ್ಲಿ ಇದುವರೆಗೆ ಇಂತಹ ಪ್ರತಿಕ್ರಿಯೆ ಸಿಕ್ಕೇ ಇಲ್ಲ'ವೆಂದು ಹೇಳಿದ್ದಾರೆ. ಲುಬ್ನಾರ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅವರ ಈ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.