Snake Viral Video: ಹಾವುಗಳನ್ನು ಕಂಡರೆ ಪ್ರತಿಯೊಬ್ಬರೂ ಭಯ ಪಡುತ್ತಾರೆ. ವಿಷಕಾರಿ ಸರ್ಪಗಳನ್ನು ಕಂಡ ತಕ್ಷಣ ಭಯದಿಂದ ಓಡಿ ಹೋಗುತ್ತಾರೆ. ಪ್ರತಿದಿನ ಹಾವುಗಳ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಾವುಗಳ ಸರಸದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ಇತ್ತೀಚೆಗೆ ಹಳ್ಳಿಯೊಂದರ ಮನೆಯ ಮಲಗುವ ಕೋಣೆಯಲ್ಲಿ ಎರಡು ವಿಷಕಾರಿ ಹಾವುಗಳು ಒಂದಕ್ಕೊಂದು ಸುತ್ತಿಕೊಂಡು ಸರಸವಾಡಿವೆ. ಇದನ್ನು ಕಂಡು ಆ ಮನೆಯವರು ದಂಗಾಗಿದ್ದಾರೆ. ಈ ದೃಶ್ಯವನ್ನು IFS ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಿಗರುವ ಐಸ್‌ಕ್ರೀಮ್ ಅನ್ನು 12 ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದೇ? ಮೆದುಳು ಇದ್ದವರಿಗೆ ಮಾತ್ರ ಸಾಧ್ಯ!
ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೆಡ್‍ರೂಂನ ಹಾಸಿಗೆಯ ಕೆಳಗೆ ಹಾವುಗಳಿರುವುದನ್ನು ಕಾಣಬಹುದು. ಮನೆಯಲ್ಲಿ ಎರಡು ಹಾವುಗಳನ್ನು ಕಂಡ ಜನರು ಬೆಚ್ಚಿಬಿದ್ದಿದ್ದಾರೆ. ಸಹಾಯಕ್ಕಾಗಿ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಈ ವಿಚಾರ ತಿಳಿದ ಗ್ರಾಮಸ್ಥರು ಮನೆಯ ಹೊರಗೆ ಜಮಾಯಿಸಿ ಹಾವುಗಳ ಸರಸದಾಟವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
So one of our beat staff got SOS call in middle of night yesterday from a village. Imagine these highly venomous ‘Walls Krait’ doing duel in somebody bedroom. They were rescued & released safely later. pic.twitter.com/nnzOHjATte
— Parveen Kaswan, IFS (@ParveenKaswan) October 22, 2024
ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪರ್ವೀನ್ ಕಸ್ವಾನ್, ʼಅರಣ್ಯ ಬೀಟ್ ಸಿಬ್ಬಂದಿಯೊಬ್ಬರಿಗೆ ಮಧ್ಯರಾತ್ರಿ ತುರ್ತು SOS ಕರೆ ಬಂದಿದೆ. ಈ ಅತ್ಯಂತ ವಿಷಪೂರಿತ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾದ ಸ್ಥಳದಲ್ಲಿ ಬಿಡುಗಡೆ ಮಾಡಲಾಯಿತುʼ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ತಿಮಿಂಗಿಲ ಸತ್ತು 26 ವರ್ಷಗಳು ಕಳೆದರೂ ಅದರ ಅಸ್ಥಿಪಂಜರದಿಂದ ಸೋರುತ್ತಿದೆ ಎಣ್ಣೆ..!
ಸ್ಥಳೀಯರು ತಮ್ಮ ಫೋನಿನ ಫ್ಲ್ಯಾಶ್‌ಲೈಟ್‌ಅನ್ನು ಮಲಗುವ ಕೋಣೆಯ ಕಡೆಗೆ ಹಿಡಿದು ದೂರದಿಂದ ಹಾವುಗಳ ಸರಸದಾಟವನ್ನು ರೆಕಾರ್ಡ್ ಮಾಡಿದ್ದಾರೆ. ಎರಡು ಹಾವುಗಳು ಒಂದಕ್ಕೊಂದು ಸುತ್ತಿಕೊಂಡು ಸರಸವಾಡುತ್ತಿರುವ ಈ ದೃಶ್ಯವನ್ನು ನೋಡಿ ಕುಟುಂಬದವರು ಬೆಚ್ಚಿಬಿದ್ದಿದ್ದಾರೆ. ಈ ಹಾವುಗಳನ್ನು ರಕ್ಷಿಸಿ ಮನೆಯವರು ಮತ್ತು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ ಅರಣ್ಯ ಸಿಬ್ಬಂದಿಯ ಪ್ರಯತ್ನಕ್ಕೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.