ನವದೆಹಲಿ: ಗೂಗಲ್ ಇಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ, ಪ್ರಾಧ್ಯಾಪಕ ಮತ್ತು ಲೇಖಕ ಸರ್ ಡಬ್ಲ್ಯೂ ಆರ್ಥರ್ ಲೂಯಿಸ್ (Sir W Arthur Lewis) ಅವರಿಗೆ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. 1979 ರಲ್ಲಿ ಈ ದಿನ, ಡಿಸೆಂಬರ್ 10 ರಂದು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಪರಿಣಾಮ ಬೀರುವ ಆರ್ಥಿಕ ಶಕ್ತಿಗಳನ್ನು ರೂಪಿಸುವ ಕೆಲಸಕ್ಕಾಗಿ ಸರ್ ಡಬ್ಲ್ಯು ಆರ್ಥರ್ ಲೂಯಿಸ್ ಜಂಟಿಯಾಗಿ ಅರ್ಥಶಾಸ್ತ್ರದ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು (Nobel Prize) ಪಡೆದರು.
ಆಧುನಿಕ ಅಭಿವೃದ್ಧಿ ಅರ್ಥಶಾಸ್ತ್ರ ಕ್ಷೇತ್ರದ ಪ್ರವರ್ತಕರಲ್ಲಿ ಒಬ್ಬರಾದ ಸರ್ ಲೂಯಿಸ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮೊದಲ ಕಪ್ಪು ಅಧ್ಯಾಪಕ ಸದಸ್ಯರಾಗಿದ್ದರು, ಬ್ರಿಟಿಷ್ ವಿಶ್ವವಿದ್ಯಾಲಯದಲ್ಲಿ ಸದಸ್ಯರಾಗಿ ಸ್ಥಾನ ಪಡೆದ ಮೊದಲ ಕಪ್ಪು ವ್ಯಕ್ತಿ ಮತ್ತು ಪ್ರಿನ್ಸ್‌ಟನ್‌ನಲ್ಲಿ ಪೂರ್ಣ ಪ್ರಾಧ್ಯಾಪಕ ಹುದ್ದೆಯನ್ನು ಪಡೆದ ಮೊದಲ ಕಪ್ಪು ಬೋಧಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ರಾಷ್ಟ್ರಕವಿ ಕುವೆಂಪು ಜನ್ಮದಿನದ ಸ್ಮರಣಾರ್ಥ ಗೂಗಲ್ ಡೂಡಲ್ ನಮನ
ಸರ್ ಲೂಯಿಸ್ ಜನವರಿ 23, 1915 ರಂದು ಕೆರಿಬಿಯನ್ ದ್ವೀಪದ ಸೇಂಟ್ ಲೂಸಿಯಾದಲ್ಲಿ ಜನಿಸಿದರು. ಅವರ ಪೋಷಕರಿಬ್ಬರೂ ಶಾಲಾ ಶಿಕ್ಷಕರು. ಇಬ್ಬರೂ ಆಂಟಿಗುವಾದಿಂದ ವಲಸೆ ಬಂದವರು. ಅವರು ತಮ್ಮ 14ನೇ ವಯಸ್ಸಿನಲ್ಲಿ ಶಾಲಾ ಪಠ್ಯಕ್ರಮವನ್ನು ಪೂರ್ಣಗೊಳಿಸಿದರು ಮತ್ತು ನಾಗರಿಕ ಸೇವೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಹೋದರು. 1932 ರಲ್ಲಿ, ಅವರು ಸರ್ಕಾರಿ ವಿದ್ಯಾರ್ಥಿವೇತನವನ್ನು ಪಡೆದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ (Economics) ಅಧ್ಯಯನ ಮಾಡಿದರು. ಜನಾಂಗೀಯ ತಾರತಮ್ಯವನ್ನು ಎದುರಿಸುತ್ತಿದ್ದರೂ, ತನ್ನ 33 ನೇ ವಯಸ್ಸಿನಲ್ಲಿ, ಅವರು ಪೂರ್ಣ ಪ್ರಾಧ್ಯಾಪಕರಾದರು.
ವಿಜ್ಞಾನ ಸಾಧನೆಯ 'ವಿಕ್ರಮ' ಡಾ. ವಿಕ್ರಂ ಸಾರಾಭಾಯ್ 100ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ಸರ್ ಡಬ್ಲ್ಯು ಆರ್ಥರ್ ಲೂಯಿಸ್ ವಿಶ್ವಸಂಸ್ಥೆಗೆ ಅಪಾರ ಕೊಡುಗೆ ನೀಡಿದರು. ಆಫ್ರಿಕಾ, ಏಷ್ಯಾ ಮತ್ತು ಕೆರಿಬಿಯನ್ ಸರ್ಕಾರಗಳಿಗೆ ಸಲಹೆಗಾರರಾಗಿ ತಮ್ಮ ಪರಿಣತಿಯನ್ನು ಹಂಚಿಕೊಂಡರು. ಅವರು ಕೆರಿಬಿಯನ್ ಅಭಿವೃದ್ಧಿ ಬ್ಯಾಂಕಿನ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.