ಬಹು ನಿರೀಕ್ಷಿತ Google Pixel 4a ಬಿಡುಗಡೆ... ಇಲ್ಲಿದೆ ವೈಶಿಷ್ಟ್ಯ

ಗೂಗಲ್ ನ ಬಹುನಿರೀಕ್ಷಿತ ಈ ಫೋನ್ ಪಂಚ್ಹೋಲ್ ಡಿಸ್ಪ್ಲೇ, ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾಗಳನ್ನು ಹೊಂದಿದೆ. ಇದಲ್ಲದೆ, ಟೈಟಾನ್ ಎಂ ಸೆಕ್ಯುರಿಟಿ ಮಾಡ್ಯೂಲ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Last Updated : Aug 4, 2020, 09:56 AM IST
ಬಹು ನಿರೀಕ್ಷಿತ Google Pixel 4a ಬಿಡುಗಡೆ... ಇಲ್ಲಿದೆ ವೈಶಿಷ್ಟ್ಯ title=

ನವದೆಹಲಿ: ಗೂಗಲ್(Google) ಪಿಕ್ಸೆಲ್ 4 ಎ ಸ್ಮಾರ್ಟ್‌ಫೋನ್‌ನ ಬಿಡುಗಡೆಯ ನಿರೀಕ್ಷೆಗೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ. ಏಕೆಂದರೆ ಈ ಫೋನ್ ಜಾಗತಿಕವಾಗಿ ಬಿಡುಗಡೆಯಾಗಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಭಾರತೀಯರು ಇದೀಗ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಕಾಯಬೇಕಾಗಲಿದೆ. ಈ ವರ್ಷದ ಅಕ್ಟೋಬರ್ ವೇಳೆಗೆ ಈ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ . ಪಂಚ್‌ಹೋಲ್ ಡಿಸ್ಪ್ಲೇ, ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ, ಟೈಟಾನ್ ಎಂ ಸೆಕ್ಯುರಿಟಿ ಮಾಡ್ಯೂಲ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮುಂತಾದ ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದೆ.

ಬೆಲೆ ಎಷ್ಟು?
ಗೂಗಲ್ ಪಿಕ್ಸೆಲ್ 4 ಎ 6 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ವೇರಿಯಂಟ್ ನ ಬೆಲೆ 26,300 ರೂ. US ನಲ್ಲಿ ಈ ಫೋನ್ ಅನ್ನು ನೀವು ಮುಂಗಡವಾಗಿ ಕಾಯ್ದಿರಿಸಬಹುದು. ಇದನ್ನು ಗೂಗಲ್ ಸ್ಟೋರ್ ಮತ್ತು ಗೂಗಲ್ ಫೈ ಮೂಲಕ ಮುಂಗಡವಾಗಿ ಬುಕ್ ಮಾಡಬಹುದಾಗಿದೆ. ಆಗಸ್ಟ್ 20 ರಿಂದ Google Store, BestBuy.com, Amazonನಿಂದ ಈ ಫೋನ್ ಅನ್ನು ಖರೀದಿಸಬಹುದಾಗಿದೆ. ಭಾರತದಲ್ಲಿನ ಗೂಗಲ್ ಪಿಕ್ಸೆಲ್ 4 ಎ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಫೋನ್ ಸಿಂಗಲ್ ಜೆಟ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಬರಲಿದೆ. ಗೂಗಲ್ ಪಿಕ್ಸೆಲ್ 4 ಎ (5 ಜಿ) ಸ್ಮಾರ್ಟ್‌ಫೋನ್ ಅನ್ನು 499 ಡಾಲರ್ ಗೆ ಬಿಡುಗಡೆ ಮಾಡಲಾಗಿದೆ. ಅಂದರೆ ಸುಮಾರು 37,600 ರೂಪಾಯಿಗಳು, ಇದು ದೊಡ್ಡ ಡಿಸ್ಪ್ಲೇನೊಂದಿಗೆ ಬರಲಿದೆ. ಆದರೆ ಪಿಕ್ಸೆಲ್ 4 ಎ ಯ 5 ಜಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತಿಲ್ಲ.

ವೈಶಿಷ್ಟ್ಯಗಳು
ಗೂಗಲ್ ಪಿಕ್ಸೆಲ್ 4 ಎ ಸ್ಮಾರ್ಟ್‌ಫೋನ್ 5.81 ಇಂಚಿನ ಫುಲ್ HD ಪ್ಲಸ್ OLED ಡಿಸ್ಪ್ಲೇ ಹೊಂದಿದ್ದು, ಇದು 1080/2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುತ್ತದೆ. ಇದಲ್ಲದೆ, ಫೋನ್‌ನ ಆಕಾರ ಅನುಪಾತವು 19: 5: 9 ಮತ್ತು ಪಿಕ್ಸೆಲ್ ಸಾಂದ್ರತೆಯು 443 ಪಿಪಿಐ ಹೊಂದಿದೆ. ಫೋನ್ ನ ಅಲ್ವೆಜ್ ಆನ್ ಡಿಸ್ಪ್ಲೇ ಎಚ್‌ಡಿಆರ್ ಅನ್ನು ಬೆಂಬಲಿಸುತ್ತದೆ. ಫೋನ್ 6 ಜಿಬಿ RAM ಮತ್ತು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730 ಜಿ Socನೊಂದಿಗೆ  ಬರಲಿದೆ. ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಗೂಗಲ್ ಪಿಕ್ಸೆಲ್ 4 ಎ ಹಿಂಭಾಗದಲ್ಲಿ 12 ಎಂಪಿ ಕ್ಯಾಮೆರಾ ಸೆನ್ಸರ್ ಹೊಂದಿದ್ದು, ಇದು ಅಪರ್ಚರ್ ಎಫ್ / 1.7 ಅನ್ನು ಹೊಂದಿದೆ ಮತ್ತು ಇದು ಎಲ್ಇಡಿ ಫ್ಲ್ಯಾಷ್ ಮಾಡ್ಯೂಲ್ನೊಂದಿಗೆ ಬರಲಿದೆ.

ಹಿಂದಿನ ಕ್ಯಾಮೆರಾ HDR+ ವೈಶಿಷ್ಟ್ಯಗಳಾದ ಡ್ಯುಯಲ್ ಎಕ್ಸ್‌ಪೋಸರ್ ಕಂಟ್ರೋಲ್ ಮೋಡ್, ಟಾಪ್ ಶಾಟ್, ನೈಟ್ ಸೈಟ್‌ನೊಂದಿಗೆ ಬರಲಿದೆ. ಫೋನ್ ಸೆಲ್ಫಿಗಾಗಿ 8 ಎಂಪಿ ಕ್ಯಾಮೆರಾ ಸೆನ್ಸರ್ ಅನ್ನು ಬಳಸಲಾಗಿದೆ. ಇದು ಎಫ್ 2.0 ಅಪರ್ಚರ್ನೊಂದಿಗೆ ಬರುತ್ತದೆ. ಫೋನ್ 128 ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ ಹೊಂದಿದೆ, ಇದನ್ನು ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ ಹೆಚ್ಚಿಸಬಹುದು. ಗೂಗಲ್ ಪಿಕ್ಸೆಲ್ 4 ಎ ಸ್ಮಾರ್ಟ್‌ಫೋನ್ 3,140 ಎಮ್‌ಎಹೆಚ್ ಬ್ಯಾಟರಿಯನ್ನು ಹೊಂದಿದ್ದು, ಇದನ್ನು 18 W ಸಹಾಯದಿಂದ ವೇಗವಾಗಿ ಚಾರ್ಜ್ ಮಾಡಬಹುದು. ಫೋನ್‌ನ ಡೈಮೆನ್ಶನ್ 144 / 69.4 / 8.2 ಮಿಮೀ ಇದ್ದರೆ, ಇದರ ತೂಕ 143 ಗ್ರಾಂ ಇರಲಿದೆ.

Trending News