ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಬಳಿ ಅವಳಿ ಬಾಂಬ್ ದಾಳಿ ನಡೆದಿದೆ. (Kabul Airport blast) ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ. 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ.
ಅಫಘಾನ್ (Afghanistan) ಮಾಧ್ಯಮಗಳ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣದ Abbey Gate ಬಳಿ ಈ ಬಾಂಬ್ ಸ್ಪೋಟ ನಡೆದಿದೆ. ಘಟನೆಯನ್ನು ಯುಎಸ್ ರಕ್ಷಣಾ ಸಚಿವಾಲಯ ದೃಢಪಡಿಸಿದೆ. 'ಕಾಬೂಲ್ ವಿಮಾನ ನಿಲ್ದಾಣದ (Kabu airport) ಬಳಿಯ ಈ ಸ್ಫೋಟವನ್ನು ನಾವು ದೃಢಪಡಿಸುವುದಾಗಿ ಯುಎಸ್ ರಕ್ಷಣಾ ಸಚಿವಾಲಯ ಹೇಳಿದೆ. ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ. 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಮೆರಿಕದ ಮಾಧ್ಯಮಗಳ ಪ್ರಕಾರ, ಇದು ಆತ್ಮಾಹುತಿ ಬಾಂಬ್ ದಾಳಿ (Bomb blast) ಎನ್ನಲಾಗಿದೆ. ಬಾಂಬ್ ದಾಳಿಯ ಜೊತೆಗೆ ಅಬ್ಬೆ ಗೇಟ್ ಬಳಿ ಗುಂಡುಗಳನ್ನು ಕೂಡ ಹಾರಿಸಲಾಗಿದೆ.
ಕಳೆದ ಒಂದು ವಾರದಿಂದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಾವಿರಾರು ಅಫ್ಘಾನ್ ನಾಗರಿಕರನ್ನು ಜಮಾವಣೆಗೊಂಡಿದ್ದಾರೆ. ಆದರೆ ವೀಸಾ ಮತ್ತು ಪಾಸ್ಪೋರ್ಟ್ (Passport) ಕೊರತೆಯಿಂದಾಗಿ, ಅವರು ವಿಮಾನ ನಿಲ್ದಾಣದ ಒಳಗೆ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ. , ತಾಲಿಬಾನ್ (Taliban) ಕೂಡ ಯಾವುದೇ ಅಫ್ಘಾನ್ ಪ್ರಜೆಗಳಿಗೆ ದೇಶವನ್ನು ತೊರೆಯಲು ಅನುಮತಿ ನೀಡುತ್ತಿಲ್ಲ. ಅಲ್ಲದೆ, ಅಫ್ಘಾನ್ ಪ್ರಜೆಗಲು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವಂತೆ ಘೋಷಿಸಲಾಗಿತ್ತು.
ಇದನ್ನೂ ಓದಿ: Afghanistan: ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಾಟರ್ ಬಾಟಲಿಗೆ 3000 ರೂ., ಒಂದು ಪ್ಲೇಟ್ ಅನ್ನಕ್ಕೆ 7500 ರೂ.!
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಈ ಬಾಂಬ್ ಸ್ಫೋಟಕ್ಕೆ 24 ಗಂಟೆಗಳ ಮೊದಲು, ಭಯೋತ್ಪಾದಕ ದಾಳಿಯ (Terror attack) ಸಾಧ್ಯತೆಯನ್ನು ಅಮೆರಿಕ ವ್ಯಕ್ತಪಡಿಸಿತ್ತು. ಆಗಸ್ಟ್ 25 ರಂದು, ಯುಎಸ್ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಎಲ್ಲಾ ನಾಗರಿಕರನ್ನು ವಿಮಾನ ನಿಲ್ದಾಣದಿಂದ ಆದಷ್ಟು ಬೇಗ ಹೊರಹೋಗುವಂತೆ ಸೂಚಿಸಿತ್ತು ವಿಮಾನ ನಿಲ್ದಾಣದ ಹೊರಗೆ ಪ್ರಮುಖ ಭದ್ರತಾ ಬೆದರಿಕೆಗಳಿವೆ ಎಂದು ಯುಎಸ್ (US) ಎಚ್ಚರಿಸಿದೆ.
ಮತ್ತೊಂದೆಡೆ, ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಬಾಂಬ್ ಸ್ಫೋಟದ ನಂತರ, ಇನ್ನೂ ಹೆಚ್ಚು ಸ್ಫೋಟಗಳು ಸಂಭವಿಸಬಹುದು ಎಂದು ಫ್ರಾನ್ಸ್ ಎಚ್ಚರಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ