ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಜನ್ಮದಿನ ಶುಭಾಶಯವನ್ನು ಕೋರಲಿಲ್ಲ ಎನ್ನಲಾಗಿದೆ. ಭಾರತ-ಚೀನಾದ ಸಂಬಂಧಗಳು ಹದಗೆಟ್ಟಿರುವ ಸಂದರ್ಭದಲ್ಲಿ ಪ್ರಧಾನಿಯಿಂದ ಈ ನಡೆ ಬಂದಿದೆ.
2016 ರಿಂದ, ಮೋದಿ ಅವರ ಜನ್ಮದಿನದಂದು ಕ್ಸಿ ಅವರಿಗೆ ಶುಭಾಶಯ ಕೋರುವುದನ್ನು ದ್ವಿಪಕ್ಷೀಯ ವಿವಾದಗಳ ನಡುವೆಯೂ ಎಂದಿಗೂ ತಪ್ಪಿಸದೇ ಅದನ್ನು ಮುಂದುವರಿಸಿದ್ದರು.2016 ರಲ್ಲಿ, ಮೋದಿ ಅವರು ಟ್ವಿಟರ್ ರಂತೆ ಇರುವ ಸಾಮಾಜಿಕ ಮಾಧ್ಯಮವಾಗಿರುವ ಚೀನಾದ ವೈಬೊದಲ್ಲಿ ಕ್ಸಿಗೆ ಶುಭಾಶಯವನ್ನು ಕೋರಿದ್ದರು.
ಇದನ್ನೂ ಓದಿ: ಮಹಾಬಲಿಪುರ೦ನಲ್ಲಿ ಭಾರತ- ಚೀನಾ ಭಾಯಿ ಭಾಯಿ
ಭಾರತ, ಚೀನಾ ಮತ್ತು ಭೂತಾನ್ನ ತ್ರಿ-ಜಂಕ್ಷನ್ನಲ್ಲಿರುವ ಪ್ರಸ್ಥಭೂಮಿಯಾದ ಡೋಕ್ಲಾಮ್ನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ 73 ದಿನಗಳ ಮುಖಾಮುಖಿ ಪ್ರಾರಂಭವಾಗುವ ಒಂದು ದಿನದ ಮೊದಲು ಕ್ಸಿ ಅವರ ಜನ್ಮದಿನ ಇದ್ದಾಗಲೂ ಕೂಡ 2017ರಲ್ಲಿ ಪ್ರಧಾನಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.
ವಾಸ್ತವವಾಗಿ, ಅಣು ಸರಬರಾಜುದಾರರ ಗುಂಪಿನಲ್ಲಿ ಭಾರತದ ಪ್ರವೇಶವನ್ನು ಚೀನಾ ವಿರೋಧಿಸುತ್ತಿದ್ದ ಸಮಯದಲ್ಲಿ, ಮೋದಿಯವರ ಮೊದಲ ಹುಟ್ಟುಹಬ್ಬದ ಶುಭಾಶಯವನ್ನು 2016 ರಲ್ಲಿ ಕಳುಹಿಸಿದ್ದರು. ಮೋದಿ ಅವರು ತಮ್ಮ ಚೀನಾ ಭೇಟಿಯ ಸಮಯದಲ್ಲಿ ಹಿಂದಿನ ವರ್ಷ ತೆರೆದಿದ್ದ ತಮ್ಮ ವೀಬೊ ಖಾತೆಯನ್ನು ಕ್ಸಿಗೆ ಶುಭಾಶಯ ಕೋರಲು ಬಳಸಿದ್ದರು.
ನಂತರದ ವರ್ಷಗಳಲ್ಲಿ, ಕ್ಸಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ವೀಬೊ ಮೋದಿಯವರ ಆದ್ಯತೆಯ ವೇದಿಕೆಯಾಗಿತ್ತು, ಕಳೆದ ವರ್ಷ ಅವರು ಶಾಂಘೈ ಸಹಕಾರ ಸಂಘಟನೆಯ ಸಭೆಯ ಹೊರತಾಗಿ ಕಿರ್ಗಿಸ್ತಾನ್ನ ಬಿಶ್ಕೆಕ್ನಲ್ಲಿ ಚೀನಾದ ಅಧ್ಯಕ್ಷನಿಗೆ ವೈಯಕ್ತಿಕವಾಗಿ ಪ್ರಧಾನಿ ಮೋದಿ ಶುಭಕೋರಿದ್ದರು