ಕರಾಚಿ: ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದ ಸಿಬ್ಬಂದಿ, ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ 32 ವರ್ಷದ ಹಿಂದೂ ಮಹಿಳೆಯ (ತಾಯಿ) ಗರ್ಭದೊಳಗೆ ಬಿಟ್ಟಿದ್ದಾರೆ. ಈ ದುರಂತ ಘಟನೆಯ ಬಳಿಕ ಸಿಂಧ್ ಸರ್ಕಾರ ಅಪರಾಧಿಗಳನ್ನು ಪತ್ತೆಹಚ್ಚಲು ವೈದ್ಯಕೀಯ ತನಿಖಾ ಮಂಡಳಿಯನ್ನು ರಚಿಸಿದೆ.
ಇದನ್ನೂ ಓದಿ:
ಥಾರ್ಪಾರ್ಕರ್ ಜಿಲ್ಲೆಯ ದೂರದ ಗ್ರಾಮಕ್ಕೆ ಸೇರಿದ ಹಿಂದೂ ಮಹಿಳೆ ಮೊದಲು ತನ್ನ ಪ್ರದೇಶದ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ (RHC) ಹೋಗಿದ್ದರು. ಆದರೆ ಮಹಿಳಾ ಸ್ತ್ರೀರೋಗ ತಜ್ಞರು ಲಭ್ಯವಿಲ್ಲದ ಕಾರಣ ನುಭವಿ ಸಿಬ್ಬಂದಿ ಅವಳಿಗೆ ಹೆರಿಗೆ ಮಾಡಿಸಿದ್ದರು ಎಂದು ಪ್ರೊಫೆಸರ್ ರಹೀಲ್ ಸಿಕಂದರ್ ಹೇಳಿದ್ದಾರೆ. ಪ್ರೊಫೆಸರ್ ರಹೀಲ್ ಸಿಕಂದರ್ ಜಮ್ಶೊರೊದಲ್ಲಿರುವ ಲಿಯಾಕತ್ ಯೂನಿವರ್ಸಿಟಿ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್ (LUMHS) ನ ಸ್ತ್ರೀರೋಗ ಶಾಸ್ತ್ರ ಘಟಕದ ಮುಖ್ಯಸ್ಥರಾಗಿದ್ದಾರೆ.
ಗ್ರಾಮೀಣ ಆರೋಗ್ಯ ಕೇಂದ್ರದ ಸಿಬ್ಬಂದಿ ಭಾನುವಾರ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ತಾಯಿಯ ಗರ್ಭದಲ್ಲಿರುವ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ಅವಳೊಳಗೆ ಬಿಟ್ಟಿದ್ದಾರೆ ಎಂದು ಅವರು ಹೇಳಿದರು. ಶಿಶುವಿನ ತಲೆಯು ಗರ್ಭದಲ್ಲಿಯೇ ಉಳಿದ ಕಾರಣ ಮಹಿಳೆಯು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಳು. ಈ ವೇಳೆ LUMHS ಆಸ್ಪತ್ರೆಗೆ ಬಾಣಂತಿಯನ್ನು ಕುಟುಂಬದವರು ಕರೆದುಕೊಂಡು ಬಂದಿದ್ದಾರೆ. ನವಜಾತ ಶಿಶುವಿನ ಉಳಿದ ದೇಹವನ್ನು ತಾಯಿಯ ಗರ್ಭದಿಂದ ಹೊರತೆಗೆದು ಅವಳ ಜೀವವನ್ನು ವೈದ್ಯರು ಉಳಿಸಿದ್ದಾರೆ ಎಂದು ಅವರು ಹೇಳಿದರು.
ಈ ಪ್ರಮಾದವು ಸಿಂಧ್ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ಜುಮಾನ್ ಬಹೋಟೊ ಅವರನ್ನು ಪ್ರಕರಣದ ಪ್ರತ್ಯೇಕ ವಿಚಾರಣೆಗೆ ಆದೇಶಿಸುವಂತೆ ಪ್ರೇರೇಪಿಸಿತು.
ಇದನ್ನೂ ಓದಿ:
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.