ನವದೆಹಲಿ : ಎಲ್ಲಾ ಹುಟ್ಟಿಗೂ ಒಂದು ಅಂತ್ಯ ಇದ್ದೇ ಇದೆ. ಭೂಮಿ (Earth) ಸೃಷ್ಟಿಯಾಗಿದ್ದೇ ಹೌದಾದರೆ ಅದರ ನಾಶವೂ ಮುಂದಿದೆ. ಅದೇ ರೀತಿ ಭೂಮಿಯ ಮೇಲಿನ ಮಾನವ ಸಂತತಿಯ (End of human life) ಸರ್ವನಾಶಕ್ಕೂ ಒಂದು ಮುಹೂರ್ತ ಇದೆ. ಆ ದಿನ, ವರ್ಷ ಯಾವುದು ? ಹಾವರ್ಡ್ ವಿವಿಯ ಆ ವಿಜ್ಞಾನಿ ಹೇಳಿದ್ದು ಏನು..?
ಹಾವರ್ಡ್ ವಿವಿಯ (Harvard University) ಪ್ರೊಫೆಸರ್ ಮತ್ತು ವಿಜ್ಞಾನಿ ಅವಿ ಲಯೆಬ್ (Avi Loeb) ಅವರಲ್ಲಿ ಒಂದು ಪ್ರಶ್ನೆ ಕೇಳಲಾಗಿತ್ತು. ಅಷ್ಟಕ್ಕೂ ಈ ಭೂಮಿ ಈ ಭೂಮಿ ಮೇಲೆ ಮಾನವ ಸಂತತಿ ಯಾವತ್ತು ಸರ್ವನಾಶವಾಗಲಿದೆ..? ಇದೇ ಆ ಪ್ರಶ್ನೆ. ಅದಕ್ಕೆ ಪ್ರೊಫೆಸರ್ ಲಯೊಬಿ ಹೇಳಿದ ಉತ್ತರದ ಸಾರಾಂಶ ಇಲ್ಲಿದೆ.
ಭೂಮಿ ಮೇಲೆ ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಅವೆಂದರೆ
1. ಮೊದಲು ಎಲ್ಲರಿಗೂ ಪೌಷ್ಟಿಕ ಆಹಾರ ಸಿಗುವ ವಿಧಾನ ಆವಿಷ್ಕರಿಸಬೇಕಾಗಿದೆ
2. ಅಂತರಿಕ್ಷದಲ್ಲಿ (Space) ಅತಿ ದೊಡ್ಡ ಬಾಹ್ಯಾಕಾಶ ಕೇಂದ್ರ ನಿರ್ಮಿಸುವ ತಯಾರಿ ಆಗಬೇಕು.
3. ಏಲಿಯನ್ ಗಳನ್ನು (Alien) ಸಂಪರ್ಕಿಸುವ ಪ್ರಯತ್ನ ಆಗಬೇಕು
4. ಅಂತರಿಕ್ಷದಲ್ಲಿ ಸ್ಪರ್ಮ್ ಬ್ಯಾಂಕ್ ಸೃಷ್ಟಿಸುವ ವಿಜ್ಞಾನಿಗಳ ಪ್ರಯತ್ನ ಕೈಗೂಡಬೇಕು.
5. ಇದಕ್ಕಿಂತಲೂ ಮುಖ್ಯವಾಗಿ ಮಾನವರ ಆಯುಷ್ಯ ಹೆಚ್ಚಾಗಬೇಕು.
6. ಮನುಷ್ಯ ತಾಂತ್ರಿಕವಾಗಿ ಪ್ರಬುದ್ದತೆಗೆ ತಲುಪಬೇಕು
ಇದನ್ನೂ ಓದಿ : ಹೊಸ ಕೊರೊನಾ ತಳಿ ವಿರುದ್ಧ Oxford, Pfizer ಲಸಿಕೆ ಶೇ 80 ರಷ್ಟು ಪರಿಣಾಮಕಾರಿ
ಹಾವರ್ಡ್ ಪ್ರೊಫೆಸರ್ ಪ್ರಕಾರ ಭೂಮಿ (Earth) ಮೇಲೆ ಮಾನವ ಸಂತತಿಯ ಕೇವಲ ಅರ್ಧಾಯುಷ್ಯ ಮಾತ್ರ ಮುಗಿದಿದೆ. ಮಾನವ ಸಂತತಿ ನಷ್ಟವಾಗುವ ಮೊದಲು ಮೇಲೆ ಸೂಚಿಸಿರುವ 6 ವಿಚಾರಗಳಲ್ಲಿ ಯಶಸ್ಸು ಗಳಿಸಬೇಕು. ಯಾವ ದಿನ ಭೂಮಿಯ ಮೇಲಿನ ಮಾನವ ಸಂತತಿ ತಾಂತ್ರಿಕ ವಿಚಾರಗಳಲ್ಲಿ ಉನ್ನತಿ ಪಡೆದು ಇನ್ನು ಏನೂ ಮಾಡಲು ಉಳಿದಿಲ್ಲ ಅನ್ನುವ ಹಂತ ಮುಟ್ಟುತ್ತದೆ. ಅದು ಮನುಷ್ಯ ಸಂತತಿ ಸರ್ವನಾಶ ಆಗುವ ಹೊತ್ತು ಎಂದು ಪ್ರೊ.ಲಯೊಬ್ (Avi Loeb) ಹೇಳುತ್ತಾರೆ.
ಲಯೋಬ್ ಪ್ರಕಾರ ಮಾನವ ಸರ್ವನಾಶಕ್ಕೆ ಇವೆಲ್ಲಾ ಕಾರಣವಾಗಲಿದೆ.
1. ಮನುಷ್ಯನ ಸರ್ವ ನಾಶಕ್ಕೆ ಆತನ ತಾಂತ್ರಿಕ ಉನ್ನತಿಯೇ (Technological Catastrophe) ಮೊದಲ ಕಾರಣವಾಗುತ್ತದೆ.
2. ಧರೆಯ ನಾಶಕ್ಕೆ ಮನುಷ್ಯನ ದುರಾಸೆಯೇ ಕಾರಣವಾಗುತ್ತದೆ.
3. ಮನುಷ್ಯ ನಿರ್ಮಿತ ಮಹಾಮಾರಿ, ಮಹಾಯುದ್ಧ (War), ಹಿಮಶಿಖರಗಳ ಪತನ, ಸಮುದ್ರದ ಮಟ್ಟ ಹೆಚ್ಚಳ, ಜಲ ಪ್ರಳಯದಿಂದಲೂ ಮಾನವ ಸಂತತಿ ಮುಗಿಯಲಿದೆ.
4. ಭೂಮಿ ಮೇಲೆ ಆಮ್ಲಜನಕವೇ (Oxygen) ಮರೆಯಾಗುವುದು, ಜ್ವಾಲಾಮುಖಿ, ಮಹಾ ಅಗ್ನಿ ಪ್ರಳಯ ಮಾನವ ಸಂತತಿಯ ಸರ್ವನಾಶಕ್ಕೆ ಕಾರಣವಾಗಬಹುದು ಎಂದು ಲಯೊಬ್ ಹೇಳಿದ್ದಾರೆ.
ಇದನ್ನೂ ಓದಿ : Corona Death: ವರದಿಯಾಗಿರುವುದು ಕೆಲವೇ ಅಂಕಿ-ಅಂಶ, ವಾಸ್ತವಿಕ ಸಂಖ್ಯೆ ದ್ವಿಗುಣವಾಗಿರಬಹುದು- WHO
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.