ನವದೆಹಲಿ: ಸಾಮಾಜಿಕ ಮಾಧ್ಯಮ ಟ್ವಿಟರ್ನ ಭದ್ರತೆಯಲ್ಲಿ ಅತಿದೊಡ್ಡ ಲೋಪ ಪ್ರಸಿದ್ಧ ವ್ಯಕ್ತಿಗಳ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ಖುದ್ದು ಖ್ಯಾತನಾಮರೆ ಟ್ವಿಟ್ಟರ್ ಗೆ ದೂರಿದ್ದಾರೆ. ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಅಮೆಜಾನ್ ಸಿಇಓ ಜೆಫ್ ಬೆಜೋಸ್, ವಾರೆನ್ ಬಫೆಟ್, ಬಿಲ್ ಗೇಟ್ಸ್, ಎಲೋನ್ ಮಸ್ಕ್, ಜೋ ಬಿಡನ್ ಸೇರಿದಂತೆ ಅಳವರ ಟ್ವಿಟ್ಟರ್ ಖಾತೆಗಳನ್ನು ಹ್ಯಾಕರ್ ಗಳು ಬೇಟೆಯಾಡಿದ್ದಾರೆ. ಇದು ಟ್ವಿಟ್ಟರ್ ನ ಇತಿಹಾಸದಲ್ಲೇ ಅತಿ ದೊಡ್ಡ ಭದ್ರತಾ ಲೋಪ ಮತ್ತು ಉಲ್ಲಂಘನೆ ಎನ್ನಲಾಗುತ್ತಿದೆ.
ಟ್ವಿಟ್ಟರ್ ಖಾತೆಯ ಸುರಕ್ಷತೆಯಲ್ಲಿನ ಇದುವರೆಗಿನ ಅತಿ ದೊಡ್ಡ ಹ್ಯಾಕಿಂಗ್ ಇದಾಗಿದೆ
ಹ್ಯಾಕ್ ಗೆ ಒಳಗಾಗಿರುವ ಅಧಿಕೃತ ಖಾತೆಗಳಿಂದ ಬಿಟ್ ಕಾಯಿನ್ ಹೆಸರಿನಲ್ಲಿ ದಾನ ಕೇಳಲಾಗಿದೆ. ವಿಶ್ವದ ದಿಗ್ಗಜ ಕಂಪನಿಶಾಮೀಲಾಗಿರುವ ಉಬರ್ ಹಾಗೂ ಆಪಲ್ ಸಂಸ್ಥೆಗಳ ಟ್ವಿಟ್ಟರ್ ಖಾತೆಗಳನ್ನು ಕೂಡ ಹ್ಯಾಕ್ ಮಾಡಲಾಗಿದೆ. ಬಿಲ್ ಗೇಟ್ಸ್ ಅವರ ಹ್ಯಾಕ್ ಗೆ ಒಳಗಾಗ ಖಾತೆಯಿಂದ ಮಾಡಲಾಗಿರುವ ಒಂದು ಟ್ವೀಟ್ ಪ್ರಕಾರ, "ಪ್ರತಿಯೊಬ್ಬರೂ ನನಗೆ ಸಮಾಜಕ್ಕೆ ಹಿಂದಿರುಗಿಸಲು ಹೇಳುತ್ತಾರೆ. ಇದೀಗ ಆ ಸಮಯ ಬಂದಿದ್ದು, ನೀವು ನನಗೆ ಒಂದು ಸಾವಿರ ಡಾಲರ್ ನೀಡಿದರೆ ನಾನು ನಿಮಗೆ ಎರಡು ಸಾವಿರ ಡಾಲರ್ ಹಿಂದಿರುಗಿಸುವೆ" ಎಂದು ಬರೆಯಲಾಗಿದೆ. ಇತರ ಹಲವರೂ ಕೂಡ ಇಂತಹುದೇ ದೂರುಗಳನ್ನು ಮಾಡಿದ್ದಾರೆ.
Hackers just took control of the Twitter accounts of Bill Gates, Elon Musk, Jeff Bezos (& Apple), Kanye West and Mike Bloomberg. Shows you how even the world's richest & most powerful people are just as vulnerable as anyone else. It's like an episode of Mr. Robot. #Hacked pic.twitter.com/nzGXn2oMvg
— Jake Morphonios 🌎 www.blackstoneintel.com (@morphonios) July 15, 2020
ಬಿಟ್ ಕಾಯಿನ್ ಸ್ಕೈಪ್ ಹ್ಯಾಕಿಂಗ್ ಘಟನೆಯ ಬಳಿಕ ಕೋಲಾಹಲ
ಬಿಟ್ ಕಾಯಿನ್ ಸ್ಕೈಪ್ ಹ್ಯಾಕಿಂಗ್ ಘಟನೆ ಬೆಳಕಿಗೆ ಬಂದ ಬಳಿಕ ಸಾವಿರಾರು ಜನರು ಹ್ಯಾಕರ್ ಗಳ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲ ಅವರು ಒಂದು ಲಕ್ಷಕ್ಕೂ ಅಧಿಕ ಡಾಲರ್ ಮೊತ್ತದ ಹಣವನ್ನು ಕಳುಹಿಸಿದ್ದಾರೆ. ಖ್ಯಾತನಾಮರ ಟ್ವಿಟ್ಟರ್ ಖಾತೆ ಹ್ಯಾಕ್ ಗೊಂಡ ದೂರುಗಳ ಬಳಿಕ ಕಂಪನಿ ಈ ಕುರಿತು ಸ್ಪಷ್ಟೀಕರಣ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಮಾಡಿರುವ ಟ್ವಿಟ್ಟರ್ ಈ ಘಟನೆಯ ಕುರಿತು ಈಗಾಗಲೇ ಮಾಹಿತಿ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದಿದೆ ಹಾಗೂ ತನಿಖೆಗೆ ಸಂಬಂಧಿಸಿದಂತೆ ಶೀಘ್ರವೇ ಹೇಳಿಕೆ ಬಿಡುಗಡೆ ಮಾಡಲಾಗುವದು ಎಂದಿದೆ. ಜೊತೆಗೆ ತನಿಖೆ ಪೂರ್ಣಗೊಳ್ಳುವವರೆಗೆ ಪಾಸ್ವರ್ಡ್ ರಿಸೆಟ್ ಅಥವಾ ಟ್ವೀಟ್ ಗಳನ್ನು ಕೂಡ ಮಾಡಲಾಗುವುದಿಲ್ಲ ಎಂದಿದೆ.
We are aware of a security incident impacting accounts on Twitter. We are investigating and taking steps to fix it. We will update everyone shortly.
— Twitter Support (@TwitterSupport) July 15, 2020
ಇಲ್ಲಿ ವಿಶೇಷತೆ ಎಂದರೆ ಟ್ವಿಟ್ಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿರುವ ಕುರಿತು ವರದಿಗಳು ಪ್ರಕಟಗೊಳ್ಳುತ್ತಲೇ ಆ ಖಾತೆಗಳಿಂದ ಮಾಡಲಾಗಿರುವ ಟ್ವೀಟ್ ಗಳು ಖುದ್ದಾಗಿ ಡಿಲೀಟ್ ಆಗಿವೆ