Hydroxychloroquine ಔಷಧಿಯ ಹಿಂದೆ ಟ್ರಂಪ್ ಬಿದ್ದಿದ್ದಾದರು ಯಾಕೆ? ಇಲ್ಲಿದೆ ಒಂದು ವರದಿ

ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ವಿಶ್ವಾದ್ಯಂತ ಜನರು ತೊಂದರೆ ಅನುಭವ್ಹಿಸುತ್ತಿದ್ದು, ಚಿಕಿತ್ಸೆಯತ್ತ ಇದೀಗ ಎಲ್ಲ ದೇಶದ ಜನರು ಮುಖಮಾಡಿದ್ದಾರೆ.

Last Updated : Apr 7, 2020, 03:38 PM IST
Hydroxychloroquine ಔಷಧಿಯ ಹಿಂದೆ ಟ್ರಂಪ್ ಬಿದ್ದಿದ್ದಾದರು ಯಾಕೆ? ಇಲ್ಲಿದೆ ಒಂದು ವರದಿ title=

ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ವಿಶ್ವಾದ್ಯಂತ ಜನರು ತೊಂದರೆ ಅನುಭವ್ಹಿಸುತ್ತಿದ್ದು, ಚಿಕಿತ್ಸೆಯತ್ತ ಇದೀಗ ಎಲ್ಲ ದೇಶದ ಜನರು ಮುಖಮಾಡಿದ್ದಾರೆ. ಕರೋನಾದ ಭೀಕರತೆಯನ್ನು ಎದುರಿಸುತ್ತಿರುವ ಅಮೆರಿಕವು ಭಾರತದಿಂದ ಸಹಾಯವನ್ನು ಕೋರಿದೆ. ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಭಾರತದಿಂದ ಪಡೆಯಲು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬೆದರಿಕೆಯ ಭಾಷೆಯನ್ನೂ ಬಳಸಿದ್ದಾರೆ. ಆದರೆ ಅವರು ಈ ರೀತಿಯ ಬೆದರಿಕೆ ನೀಡುವುದರ ಹಿಂದೆ ಕಾರಣವೇನು? ಯಾವುದಾದರು ಅಂತಾರಾಷ್ಟ್ರೀಯ ಒತ್ತದವಿದೆಯೇ ಅಥವಾ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ಸ್ವಾರ್ಥ ಇದರಲ್ಲಡಗಿದೆಯೇ ಎಂಬ ಪ್ರಶ್ನೆಗಳು ಇದೀಗ ಮೂಡಲಾರಂಭಿಸಿವೆ.

ಭಾರತದಲ್ಲಿನ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಅಗತ್ಯತೆಗಳು ಮತ್ತು ದಾಸ್ತಾನುಗಳನ್ನು ಮೊದಲು ಪರಿಶೀಲಿಸಿದ ನಂತರವೇ ಈ ಔಷಧಿಯನ್ನು  ಕರೋನಾ ಪೀಡಿತ ದೇಶಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಔಷಧಿಯನ್ನು  ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಮಲೇರಿಯಾ ಚಿಕಿತ್ಸೆಗಾಗಿ ಬಳಸಲಾಗುವ ಈ ಔಷಧಿಯ  ಹಿಂದೆ ಡೊನಾಲ್ಡ್ ಟ್ರಂಪ್ ಏಕೆ ಬಿದ್ದಿದ್ದಾರೆ ಎಂಬುದಕ್ಕೆ ಯುಎಸ್ ಪತ್ರಿಕೆ ದಿ ನ್ಯೂಯಾರ್ಕ್ ಟೈಮ್ಸ್ ತನ್ನ ವೆಬ್‌ಸೈಟ್‌ನಲ್ಲಿ ವರದಿಯೊಂದನ್ನು ಪ್ರಕಟಿಸಿದೆ. ಹೀಗೆ ಮಾಡುವುದರಿಂದ ಡೊನಾಲ್ಡ್ ಟ್ರಂಪ್‌ಗೆ ವೈಯಕ್ತಿಕ ಲಾಭವಿದೆ ಎಂದು ಮಾಧ್ಯಮ ಸಂಸ್ಥೆ ಬಹಿರಂಗಪಡಿಸಿದೆ.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ವಿಶ್ವಾದ್ಯಂತ ಕರೋನಾಗೆ ಚಿಕಿತ್ಸೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್‌ ಬಳಕೆಗೆ ಅವಕಾಶ ಸಿಕ್ಕರೆ ಈ ಔಷಧಿಯನ್ನು ತಯಾರಿಸುವ ಕಂಪನಿಗಳು ಹೆಚ್ಚಿನ ಲಾಭವನ್ನು ಪಡೆಯಲಿವೆ. ಡೊನಾಲ್ಡ್ ಟ್ರಂಪ್ ಅಂತಹುದೇ ಒಂದು ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದಾರೆ. ಅಲ್ಲದೆ, ಡೊನಾಲ್ಡ್ ಟ್ರಂಪ್ ಆ ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವನ್ನೂ ಸಹ ಹೊಂದಿದ್ದಾರೆ ಎನ್ನಲಾಗಿದೆ.

ಫ್ರೆಂಚ್ ಔಷಧಿ ತಯಾರಕ ಕಂಪನಿ ಸನೋಫಿಯಿಂದ ಡೊನಾಲ್ಡ್ ಟ್ರಂಪ್‌ಗೆ ವೈಯಕ್ತಿಕ ಲಾಭವಿದೆ ಎಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಟ್ರಂಪ್ ಈ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದಾರೆ. ಈ ಕಂಪನಿಯು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಪ್ಲ್ಯಾಂಕನಿಲ್ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ.

ಮಲೇರಿಯಾದಂತಹ ಅಪಾಯಕಾರಿ ಕಾಯಿಲೆಗಳ ವಿರುದ್ಧ ಹೋರಾಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ. ಪ್ರತಿ ವರ್ಷ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮಲೇರಿಯಾ ರೋಗಕ್ಕೆ ಬಲಿಯಾಗುತ್ತಾರೆ. ಹೀಗಾಗಿ ಭಾರತದಲ್ಲಿನ ಔಷಧಿ ತಯಾರಕ ಕಂಪನಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಈ ಔಷಧಿಯನ್ನು ಉತ್ಪಾದಿಸುತ್ತವೆ.

ವಿಶೇಷವೆಂದರೆ, ಅಮೆರಿಕದಂತಹ ದೇಶಗಳಲ್ಲಿ, ಕರೋನಾ ವೈರಸ್ ಚಿಕಿತ್ಸೆಗಾಗಿ ಈ ಔಷಧಿಯನ್ನು ಬಳಸಲಾಗುತ್ತಿದೆ ಹಾಗೂ ಅಲ್ಲಿ ಇದು ಪರಿಣಾಮ ಬೀರುತ್ತಿದೆ ಎಂದೂ ಕೂಡ ಹೇಳಲಾಗುತ್ತಿದೆ. ಇದೆ  ಕಾರಣಕ್ಕಾಗಿ, ಅಮೇರಿಕಾದಲ್ಲಿ ಅದರ ಬೇಡಿಕೆ ಹೆಚ್ಚಾಗಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಈ ಔಷಧಿಯ ಉತ್ಪಾದನೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಅದರ ರಫ್ತು ಸಹ ನಿಲ್ಲಿಸಲಾಗಿದ್ದು, ಇದೀಗ ಮತ್ತೆ ಅದರ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ.

ಆದರೆ, ಈ ಔಷಧಿ ಮಲೇರಿಯಾ-ವಿರೋಧಿ ಔಷಧಿ ಕ್ಲೋರೊಕ್ವಿನ್‌ಗಿಂತ ಸ್ವಲ್ಪ ಭಿನ್ನವಾಗಿದೆ. ಇದು ರುಮಟಾಯ್ಡ್ ಸಂಧಿವಾತದಂತಹ ಸ್ವಯಂ ನಿರೋಧಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಮಾತ್ರೆಯಾಗಿದೆ. ಆದರೆ ಇದನ್ನು ಕರೋನಾ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಸಹ ಬಳಸಬಹುದು ಎಂಬ ಮಾಹಿತಿ ಇತ್ತೀಚೆಗಷ್ಟೇ ಬಹಿರಂಗಗೊಂಡಿದೆ.

ಈ ಔಷಧಿ SARS-COV-2 ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಕೋವಿಡ್ -2 ಗೆ ಕಾರಣವಾಗುವ ಅದೇ ವೈರಸ್ ಇದು. ಇದಕ್ಕಾಗಿಯೇ ಕರೋನಾ ವೈರಸ್ ಹೊಂದಿರುವ ರೋಗಿಗಳಿಗೆ ಹೈಡ್ರಾಕ್ಸಿ ಕ್ಲೋರೊಕ್ವಿನ್‌ನ ಮಾತ್ರೆಗಳನ್ನು ನೀಡಲಾಗುತ್ತಿದೆ.

Trending News