Mastering Banking Rules: ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಬ್ಯಾಂಕಿಂಗ್ ನಿಯಮಗಳ ಬಗ್ಗೆ ನಿಮಗೂ ತಿಳಿದಿರಲಿ!

Cheque Bounce Regulations: ಚೆಕ್ ಬೌನ್ಸ್ ಅನ್ನು ಭಾರತದಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 138 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ದಂಡ ವಿಧಿಸಬಹುದು, ಇಲ್ಲವೇ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು.

Written by - Yashaswini V | Last Updated : Feb 20, 2024, 11:23 AM IST
  • ಚೆಕ್ ಬೌನ್ಸ್ ಅನ್ನು ಭಾರತದಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 138 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ.
  • ಇದಕ್ಕಾಗಿ ದಂಡ ವಿಧಿಸಬಹುದು, ಇಲ್ಲವೇ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು.
  • ಇದನ್ನು ತಪ್ಪಿಸಲು ಚೆಕ್ ಬೌನ್ಸ್ ಆಗಲು ಕಾರಣಗಳೇನು? ಚೆಕ್ ಬೌನ್ಸ್ ಆದರೆ ಎಷ್ಟು ದಂಡ ವಿಧಿಸಲಾಗುತ್ತದೆ? ಎಂಬಿತ್ಯಾದಿ ಮಾಹಿತಿಗಳನ್ನು ತಿಳಿದಿರುವುದು ಅತ್ಯಗತ್ಯ.
Mastering Banking Rules: ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಬ್ಯಾಂಕಿಂಗ್ ನಿಯಮಗಳ ಬಗ್ಗೆ ನಿಮಗೂ ತಿಳಿದಿರಲಿ! title=

Understanding Cheque Bounce Laws: ಖಾತೆಯ ಮೂಲಕ ಹಣಸಂದಾಯ ಮಾಡಲು ಚೆಕ್ ಅನ್ನು ಸಹ ನೀಡಬಹುದು. ಆದರೆ, ನೀವು ಯಾರಿಗಾದರೂ ಚೆಕ್ ನೀಡಿ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿದ್ದಾಗ ಆ ಚೆಕ್ ಅನ್ನು ಹಿಂದಿರುಗಿಸಲಾಗುತ್ತದೆ. ಇದನ್ನು ಚೆಕ್ ಬೌನ್ಸ್ ಎಂದು ಕರೆಯಲಾಗುತ್ತದೆ. ಖಾತೆಯಲ್ಲಿ ಹಣವಿಲ್ಲದಿರುವುದರ ಜೊತೆಗೆ ಚೆಕ್ ಅವಧಿ ಮುಗಿದಿದ್ದರೆ ಅಥವಾ ಅದನ್ನು ನೀಡುವ ದಿನಾಂಕದಲ್ಲಿ ಸಮಸ್ಯೆ ಇದ್ದಲ್ಲಿ ಅಂತಹ ಚೆಕ್ ಕೂಡ ಬೌನ್ಸ್ ಆಗಬಹುದು. 

ಚೆಕ್ ಬೌನ್ಸ್ ಒಂದು ಅಪರಾಧ: 
ಚೆಕ್ ಬೌನ್ಸ್ ಅನ್ನು ಭಾರತದಲ್ಲಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 138 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ದಂಡ ವಿಧಿಸಬಹುದು, ಇಲ್ಲವೇ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು. ಇದನ್ನು ತಪ್ಪಿಸಲು  ಚೆಕ್ ಬೌನ್ಸ್ ಆಗಲು ಕಾರಣಗಳೇನು? ಚೆಕ್ ಬೌನ್ಸ್ ಆದರೆ ಎಷ್ಟು ದಂಡ ವಿಧಿಸಲಾಗುತ್ತದೆ? ಎಂಬಿತ್ಯಾದಿ ಮಾಹಿತಿಗಳನ್ನು ತಿಳಿದಿರುವುದು ಅತ್ಯಗತ್ಯ. 

ಚೆಕ್ ಬೌನ್ಸ್ ಆಗಲು ಕಾರಣವೇನು? 
ಚೆಕ್ ಬೌನ್ಸ್ ಆಗಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖ ಕಾರಣಗಳೆಂದರೆ...
ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿರುವುದು: 
ನೀವು ಯಾವ ಬ್ಯಾಂಕ್ ಖಾತೆಯ ಚೆಕ್ ನೀಡಿರುತ್ತಿರೋ ಆ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿದ್ದರೆ ಚೆಕ್ ಮೊತ್ತವನ್ನು ಪಾವತಿಸಲು ಸಾಕಷ್ಟು ಹಣವಿಲ್ಲ ಎಂದು ತಿಳಿಸುವ ಜ್ಞಾಪಕದೊಂದಿಗೆ ಚೆಕ್ ಅನ್ನು ಬ್ಯಾಂಕ್ ತಿರಸ್ಕರಿಸುತ್ತದೆ. 

ಇದನ್ನೂ ಓದಿ- Tax Saving Scheme : ಇಂದೇ ಬ್ಯಾಂಕ್‌ಗೆ ಹೋಗಿ ಈ ಕೆಲಸ ಮಾಡಿ ! ಒಂದು ರೂಪಾಯಿಯೂ ತೆರಿಗೆ ಕಡಿತವಾಗುವುದಿಲ್ಲ! 

ಚೆಕ್‌ನ ಅವಧಿ ಮುಗಿದ ಸಿಂಧುತ್ವ: 
ಯಾರಿಗಾದರೂ ಚೆಕ್ ನೀಡಿದಾಗ ಮೂರು ತಿಂಗಳೊಳಗೆ ಅದನ್ನು ಬ್ಯಾಂಕ್‌ಗೆ ಪ್ರಸ್ತುತಪಡಿಸಬೇಕು. ಮೂರು ತಿಂಗಳ ಬಳಿಕ ಎಂದರೆ ಅವಧಿ ಮುಗಿದ ಬಳಿಕ ಆ ಚೆಕ್ ಅನ್ನು ಬ್ಯಾಂಕ್‌ಗೆ ಪ್ರಸ್ತುತ ಪಡಿಸಿದರೆ ಅದು ಬೌನ್ಸ್ ಆಗುತ್ತದೆ. 

ಓವರ್‌ರೈಟಿಂಗ್: 
ಚೆಕ್‌ನಲ್ಲಿ ಓವರ್‌ರೈಟಿಂಗ್ ಎಂದರೆ ಏನನ್ನಾದರೂ ತಿದ್ದಿ ಬರೆಯಲಾಗಿದ್ದರೆ ಅದು ಕೂಡ ಚೆಕ್ ಬೌನ್ಸ್ ಆಗಲು ಕಾರಣವಾಗಬಹುದು. 

ಹಾನಿಗೊಳಗಾದ ಚೆಕ್: 
ನೀವು ನೀಡಿರುವ/ಪಡೆದಿರುವ ಚೆಕ್ ವಿರೂಪಗೊಂಡಿದ್ದರೆ ಅಥವಾ ಹಾನಿಗೊಳಗಾಗಿದ್ದರೆ, ಅದರಲ್ಲಿ ಉಲ್ಲೇಖಿಸಲಾಗಿರುವ ವಿವರಗಳು ಸರಿಯಾಗಿ ಗೋಚರಿಸದಿದ್ದರೆ ಅಂತಹ ಸಂದರ್ಭದಲ್ಲಿಯೂ ಚೆಕ್ ಬೌನ್ಸ್ ಆಗಬಹುದು. 

ಸಹಿ ಹೊಂದಿಕೆಯಾಗದಿರುವುದು: 
ನಿಮಗೆಲ್ಲರಿಗೂ ತಿಳಿದಿರುವಂತೆ ಚೆಕ್ ಕಾರ್ಯನಿರ್ವಹಿಸಲು ಸಹಿ ತುಂಬಾ ಅಗತ್ಯ. ಆದರೆ, ನೀವು ನೀಡಿರುವ ಚೆಕ್‌ನಲ್ಲಿ ಸಹಿ ಹೊಂದಾವಣಿಕೆಯಾಗದಿದರೆ ಅಂತಹ ಚೆಕ್ ಅನ್ನು ಕೂಡ ತಿರಸ್ಕರಿಸಲಾಗುವುದು. 

ಇವುಗಳಲ್ಲದೆ,  ಪದಗಳು ಮತ್ತು ಅಂಕಿಗಳಲ್ಲಿ ನಮೂದಿಸಲಾದ ಚೆಕ್ ಮೊತ್ತವು ಹೊಂದಾಣಿಕೆಯಾಗದಿದ್ದರೆ, ಖಾತೆ ಸಂಖ್ಯೆ ತಪ್ಪಾಗಿದ್ದರೆ,  ನಕಲಿ ಚೆಕ್‌ನ ಶಂಕೆ ಇತ್ಯಾದಿ ಕಾರಣಗಳಿಂದಲೂ ಚೆಕ್ ಬೌನ್ಸ್ ಆಗಬಹುದು. 

ಇದನ್ನೂ ಓದಿ- Salary Hike News :ಸರ್ಕಾರಿ ನೌಕರರ ನಿರೀಕ್ಷೆ ಅಂತ್ಯ! ವೇತನ ಹೆಚ್ಚಳದ ಬಗ್ಗೆ ಹೊರ ಬಿದ್ದಿದೆ ಬಿಗ್ ಅಪ್ಡೇಟ್  

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 138 ರ ಪ್ರಕಾರ, ಖಾತೆಯಲ್ಲಿ ಸಾಕಹ್ಸ್ತು ಹಣವಿಲ್ಲದೆ ಚೆಕ್ ಬೌನ್ಸ್ ಆದಾಗ ನೋಟೀಸ್ ನೀಡಲಾಗುತ್ತದೆ. ಇದರ ಹೊರತಾಗಿ ಇನ್ನಾವುದೇ ಕಾರಣದಿಂದಾಗಿ ಚೆಕ್ ಬೌನ್ಸ್ ಆಗಿದ್ದರೆ ನೋಟೀಸ್ ನೀಡಲಾಗುವುದಿಲ್ಲ. 

ಚೆಕ್ ಬೌನ್ಸ್ ಆದರೆ ಎಷ್ಟು ದಂಡ ವಿಧಿಸಬಹುದು? 
ಮೊದಲೇ ತಿಳಿಸಿದಂತೆ ಚೆಕ್ ಬೌನ್ಸ್ ಆದಲ್ಲಿ ಬ್ಯಾಂಕ್‌ಗಳು ದಂಡ ವಿಧಿಸುತ್ತವೆ. ದಂಡವನ್ನು ಚೆಕ್ ನೀಡಿದ ವ್ಯಕ್ತಿಯೇ ಪಾವತಿಸಬೇಕು. ಈ ದಂಡವು ಕಾರಣಗಳನ್ನು ಅವಲಂಬಿಸಿ ಬದಲಾಗಬಹುದು. ಸಾಮಾನ್ಯವಾಗಿ, ದಂಡವು 150 ರಿಂದ 750 ಅಥವಾ 800 ರೂ.ವರೆಗೆ ಇರಲಿದೆ. 

ಜೈಲು ಶಿಕ್ಷೆ: 
ಚೆಕ್ ಬೌನ್ಸ್ಡ್ ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, 1881 ರ ಪ್ರಕಾರ, ಚೆಕ್ ಬೌನ್ಸ್ ಸಂದರ್ಭದಲ್ಲಿ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೂಡ ಅವಕಾಶವಿದೆ. ಈ ಸಂದರ್ಭದಲ್ಲಿ ಆರೋಪಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಚೆಕ್‌ನ ದುಪ್ಪಟ್ಟು ದಂಡ ಅಥವಾ ಎರಡನ್ನೂ ವಿಧಿಸಬಹುದು. ಆದಾಗ್ಯೂ, ಚೆಕ್ ನೀಡುವವರು ಅವರ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿಲ್ಲದಿದ್ದರೆ ಮತ್ತು ಬ್ಯಾಂಕ್ ಚೆಕ್ ಅನ್ನು ಅವಮಾನಿಸಿದಾಗ ಮಾತ್ರ ಇದು ಸಂಭವಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News