ಯಾವ ದಾಖಲೆಯೂ ಇಲ್ಲದೆ Google Pay ನೀಡುತ್ತಿದೆ ಸಾಲ ! ನಿಮಿಷಗಳಲ್ಲಿ ಖಾತೆಗೆ ಬೀಳುವುದು ಹಣ

google pay loan : 8 ಹಂತಗಳಲ್ಲಿ ನೀವು Google Pay ಮೂಲಕ ವ್ಯಾಪಾರಕ್ಕಾಗಿ ಸಣ್ಣ ಸಾಲವನ್ನು ಹೇಗೆ ಪಡೆಯಬಹುದು.  

Written by - Ranjitha R K | Last Updated : Dec 7, 2023, 10:20 AM IST
  • Google Pay ಅಪ್ಲಿಕೇಶನ್ ಮೂಲಕ ಸಾಲ ಸೌಲಭ್ಯ
  • 15,000 ರೂ.ವರೆಗಿನ ಸಣ್ಣ ಸಾಲಗಳನ್ನು ನೀಡಲಾಗುತ್ತಿದೆ.
  • ಆನ್‌ಲೈನ್ ಮತ್ತು ಆಫ್‌ಲೈನ್ ವ್ಯಾಪಾರಿಗಳಿಂದ ಸರಕುಗಳ ಖರೀದಿ
ಯಾವ ದಾಖಲೆಯೂ  ಇಲ್ಲದೆ Google Pay ನೀಡುತ್ತಿದೆ ಸಾಲ ! ನಿಮಿಷಗಳಲ್ಲಿ ಖಾತೆಗೆ ಬೀಳುವುದು ಹಣ  title=

google pay loan : ಇತ್ತೀಚೆಗೆ, ಗೂಗಲ್ ಇಂಡಿಯಾ ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಲು Google Pay ಅಪ್ಲಿಕೇಶನ್ ಮೂಲಕ ಸಾಲ (GPay Loan) ನೀಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಭಾರತದಲ್ಲಿನ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಸಾಲಗಳು ಬೇಕಾಗುತ್ತವೆ ಎಂದು ಗೂಗಲ್ ಇಂಡಿಯಾ ಹೇಳಿದೆ. ಇದರ ಅಡಿಯಲ್ಲಿ, Google Pay ನಿಂದ ವ್ಯಾಪಾರಿಗಳಿಗೆ 15,000 ರೂ.ವರೆಗಿನ ಸಣ್ಣ ಸಾಲಗಳನ್ನು ನೀಡಲಾಗುತ್ತಿದೆ. ಈ ಸಾಲಕ್ಕೆ , ಮರುಪಾವತಿ ಮಾಡಬೇಕಾದ ಕನಿಷ್ಠ ಮೊತ್ತವು 111 ರೂ. ಆಗಿರುತ್ತದೆ. ಇದರ ಅಡಿಯಲ್ಲಿ, 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇದನ್ನು 7 ದಿನಗಳಿಂದ 12 ತಿಂಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದು. ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಲು Google Pay DMI Finance ಜೊತೆಗೆ ಪಾಲುದಾರಿಕೆ ಹೊಂದಿದೆ. ಇಷ್ಟೇ ಅಲ್ಲ, Google Pay ePayLater ಸಹಭಾಗಿತ್ವದಲ್ಲಿ ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್ ಅನ್ನು ಸಕ್ರಿಯಗೊಳಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ. ಇದನ್ನು ಬಳಸಿಕೊಂಡು, ವ್ಯಾಪಾರಿಗಳು ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯಾಪಾರಿಗಳಿಂದ ಸರಕುಗಳನ್ನು ಖರೀದಿಸಬಹುದಾಗಿದೆ. 

ಈ ಸಾಲ ಪಡೆಯುವುದು ಹೇಗೆ? :
Google Pay ನಿಂದ ವ್ಯಾಪಾರಕ್ಕಾಗಿ ಸಾಲ ಪಡೆಯಬೇಕಾದರೆ ಮೊದಲು  Google Pay for business ಅಪ್ಲಿಕೇಶನ್‌ನಲ್ಲಿ ಖಾತೆಯನ್ನು ಹೊಂದಿರಬೇಕು. 8 ಹಂತಗಳಲ್ಲಿ ನೀವು Google Pay ಮೂಲಕ ವ್ಯಾಪಾರಕ್ಕಾಗಿ ಸಣ್ಣ ಸಾಲವನ್ನು ಹೇಗೆ ಪಡೆಯಬಹುದು.  

ಇದನ್ನೂ ಓದಿ : Arecanut Price December 7: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ

- ಮೊದಲಿಗೆ ನಿಮ್ಮ Google Pay for Business ಅಪ್ಲಿಕೇಶನ್ ಅನ್ನು ತೆರೆಯಿರಿ.
- ಇದರ ನಂತರ ಲೋನ್ಸ್ ವಿಭಾಗಕ್ಕೆ ಹೋಗಿ ಮತ್ತು ಆಫರ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ಬೇಕಾದ ಸಾಲದ ಮೊತ್ತವನ್ನು ಆಯ್ಕೆ ಮಾಡಿ ಮತ್ತು ಗೆಟ್ ಸ್ಟಾರ್ಟ್ ಅನ್ನು ಕ್ಲಿಕ್ ಮಾಡಬೇಕು. ನೀವು ಕ್ಲಿಕ್ ಮಾಡಿದ ತಕ್ಷಣ, ನಿಮ್ಮನ್ನು ಸಾಲ ನೀಡುವ ಪಾಲುದಾರರ ವೆಬ್‌ಸೈಟ್‌ಗೆ  ರಿ ಡೈರೆಕ್ಟ್ ಮಾಡಲಾಗುತ್ತದೆ. 
- ಇದರ ನಂತರ ನಿಮ್ಮ Google ಖಾತೆಗೆ ಲಾಗಿನ್ ಮಾಡಿ. ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ. ಅಲ್ಲದೆ, ಸಾಲದ ಮೊತ್ತ ಮತ್ತು ಯಾವ ಅವಧಿಗೆ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.
- ಇದರ ನಂತರ ನೀವು ನಿಮ್ಮ  ಫೈನಲ್ ಲೋನ್ ಆಫರ್ ಅನ್ನು  ಪರಿಶೀಲಿಸಿ, ಲೋನ್ ಒಪ್ಪಂದಕ್ಕೆ ಇ-ಸೈನ್ ಮಾಡಬೇಕು.
- ಇಷ್ಟೆಲ್ಲಾ ಆದ ನಂತರ ಕೆಲವು KYC ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.  
- EMI ಪಾವತಿಗಾಗಿ Setup eMandate ಅಥವಾ Setup NACHಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
-ಮುಂದಿನ ಹಂತದಲ್ಲಿ ನೀವು ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿದರೆ ಸಾಲ ಪಡೆಯಬಹುದು. 
- ನಿಮ್ಮ ಅಪ್ಲಿಕೇಶನ್‌ನ  My Loan ವಿಭಾಗದಲ್ಲಿ ನಿಮ್ಮ ಸಾಲವನ್ನು ನೀವು ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ : ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣ ಮಾಡಬಹುದು ! ಜಾರಿಯಾಗಿದೆ ಹೊಸ ನಿಯಮ

ಕಳೆದ 12 ತಿಂಗಳಲ್ಲಿ ಯುಪಿಐ ಮೂಲಕ 167 ಲಕ್ಷ ಕೋಟಿ ರೂ. ವರೆಗಿನ ಸಾಲ ನೀಡಲಾಗಿದೆ. ಇಲ್ಲಿಯವರೆಗೆ, ಗೂಗಲ್ ಪೇ ನೀಡುವ ಅರ್ಧದಷ್ಟು ಸಾಲವನ್ನು ಮಾಸಿಕ ಆದಾಯ 30 ಸಾವಿರಕ್ಕಿಂತ ಕಡಿಮೆ ಇರುವವರಿಗೆ ನೀಡಲಾಗಿದೆ ಎಂದು ಗೂಗಲ್ ಪೇ ವೈಸ್ ಪ್ರೆಸಿಡೆಂಟ್ ಅಂಬರೀಶ್ ಕೆಂಗೇ ತಿಳಿಸಿದ್ದಾರೆ.   

ಗೂಗಲ್ ಇಂಡಿಯಾ ಭಾರತದಲ್ಲಿ ಸಣ್ಣ ವ್ಯಾಪಾರಿಗಳಿಗಾಗಿ ಇನ್ನೂ ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಿದೆ. AI ಸಹಾಯದಿಂದ ಗೂಗಲ್ ಮರ್ಚೆಂಟ್ ಸೆಂಟರ್ ನೆಕ್ಸ್ಟ್ ತನ್ನ ವೆಬ್‌ಸೈಟ್‌ನಿಂದ ವ್ಯಾಪಾರಿಯ ಪ್ರಾಡಕ್ಟ್  ಫೀಡ್ ಅನ್ನು ಪತ್ತೆ ಹಚ್ಚುವ ಮೂಲಕ ಸ್ವಯಂಚಾಲಿತವಾಗಿ ಜನಪ್ರಿಯಗೊಳಿಸುತ್ತದೆ ಎಂದು ಗೂಗಲ್ ಇಂಡಿಯಾ ಹೇಳಿದೆ. ತಮ್ಮ ಫೀಡ್‌ನಲ್ಲಿ ಏನನ್ನು ಸೇರಿಸಬೇಕು ಏನನ್ನು ಕೈ ಬಿಡಬೇಕು ಎನ್ನುವ ಸಂಪೂರ್ಣ ನಿಯಂತ್ರಣ ವ್ಯಾಪಾರಿ ಬಳಿ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News