ಬೆಂಗಳೂರು: ಬೆಂಗಳೂರು ಮೂಲದ ಉದ್ಯಮಿಗೆ ಹನಿಟ್ರಾಪ್ ಮಾಡಿದ್ದ ಉದಯೋನ್ಮುಖ ನಟ ಅರೆಸ್ಟ್ ಆಗಿದ್ದಾನೆ. ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿ.
‘ಮಿಸ್ಟರ್ ಭೀಮರಾವ್’ ಎಂಬ ಸಿನಿಮಾಕ್ಕೆ ನಾಯಕನಾಗಿದ್ದ ಅರೋಪಿ ಯುವ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ. ಉದ್ಯಮಿಗೆ ಇತ್ತೀಚೆಗೆ ಪರಿಚಯವಾಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದನೆಂದು ತಿಳಿದುಬಂದಿದೆ. ಉದ್ಯಮಿಗೆ ಭೇಟಿಯಾಗಿದ್ದ ಆತ ತಾವು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿದ್ದ. ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ ಎಂದು ಸಹ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: Salman Rushdie Attacked: ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ
ಈ ಕೇಸ್ ಕ್ಲೋಸ್ ಮಾಡಬೇಕೆಂದರೆ ನೀವು ನನಗೆ ಹಣ ನೀಡಬೇಕೆಂದು ಕೇಳಿದ್ದ. ಅದರಂತೆ ಮೊದಲಿಗೆ 50 ಸಾವಿರ, ನಂತರ ಬ್ಯಾಂಕ್ನಲ್ಲಿ 3 ಲಕ್ಷ ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು 14 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಉದ್ಯಮಿ ಬಳಿ ವಸೂಲಿ ಮಾಡಿದ್ದ.
ಹಲಸೂರು ಗೇಟ್ ಬಳಿ ಸಹ ಒಮ್ಮೆ ಹಣ ಪಡೆದಿದ್ದು, ಉದ್ಯಮಿಗೆ ಡೌಟ್ ಬಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಆರೋಪಿ ನಟನನ್ನು ಬಂಧಿಸಿರುವ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಗಾಂಜಾ ಘಾಟು; ಪಾನ್-ಬೀಡಾ ಅಂಗಡಿಗಳಲ್ಲಿ ಗಾಂಜಾ ಜಾಕಲೇಟ್ ಮಾರಾಟ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.