ಯಾದಗಿರಿ: ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸುವರ್ಣ(20) ಮತ್ತು ಈಶಪ್ಪ(22) ಮೃತ ಪ್ರೇಮಿಗಳು. ಶನಿವಾರ ಬೆಳಗಿನ ಜಾವ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಶಹಾಪುರದ ಉರುಸಗುಂಡಗಿ ಗ್ರಾಮದವರು.
ಇದನ್ನೂ ಓದಿ: Haveri : ಎರಡು ಗುಂಪುಗಳ ನಡುವೆ ಮಾರಾಮಾರಿ : ಯವಕನಿಂದ ಚಾಕು ಇರಿತ 8 ಕ್ಕೂ ಹೆಚ್ಚು ಜನ ಗಾಯ!
ಕಳೆದ ಐದಾರು ವರ್ಷಗಳಿಂದ ಸುವರ್ಣ-ಈಶಪ್ಪ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ 2 ವರ್ಷದ ಹಿಂದೆ ಪ್ರಿಯತಮೆ ಸುವರ್ಣ ಮದುವೆಯಾಗಿದ್ದಳು. ಬೆಂಗಳೂರಿನಲ್ಲಿ ಸುವರ್ಣ ಗಂಡನ ಜೊತೆ ವಾಸವಿದ್ದಳು.
ಶನಿವಾರ ಗಂಡನಿಗೆ ಹೇಳದೇ ಬೆಂಗಳೂರಿನಿಂದ ಉರುಸಗುಂಡಗಿ ಗ್ರಾಮಕ್ಕೆ ಸುವರ್ಣ ಬಂದಿದ್ದಳು. ಈಡೀ ರಾತ್ರಿ ಸುವರ್ಣ-ಈಶಪ್ಪ ಒಂದೆಡೆ ಕಳೆದಿದ್ದರು. ಬೆಳಗ್ಗೆ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡದ್ದಾರೆ. ಭೀಮರಾಯನ ಗುಡಿ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: CM Bommai:ʼಸುರ್ಜೇವಾಲ ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿʼ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.