ಬೆಂಗಳೂರು: ಅನುಪಮಾ ಗೌಡ.. ‘ಅಕ್ಕ’ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದವರು. ನಂತರ ಬಿಗ್ಬಾಸ್ ಮನೆಗೆ ಭರ್ಜರಿ ಎಂಟ್ರಿ ಕೊಟ್ಟರು. ಬಿಗ್ಬಾಸ್ ಬಳಿಕ ಒಂದಿಷ್ಟು ಸಿನಿಮಾಗಳನ್ನೂ ಮಾಡಿದ್ರು ಅನುಪಮಾ. ಸದ್ಯ ಹೋಸ್ಟ್ ಆಗಿ ಜನರ ಮನಸ್ಸಿಗೆ ಹತ್ತಿರವಾಗಿರುವ ಮಲ್ಟಿ ಟ್ಯಾಲೆಂಟೆಡ್ ಹುಡುಗಿ..
‘ರಾಜ ರಾಣಿ’ ಶೋ ಬಳಿಕ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಮಕ್ಕಳ ಮುದ್ದಿನ ಅಕ್ಕನಾಗಿ, ಪುಟ್ಟ ಕಂದಮ್ಮಗಳ ಜೊತೆ ಅನುಮಪಾ ಕೂಡ ಮುಗುವಿನಂತೆ ಕಾಲ ಕಳೆದು ಸದ್ಯ ಶೋ ಮುಗಿಸಿ ಕೊಂಚ ರೆಸ್ಟ್ನಲ್ಲಿದ್ದಾರೆ.. ‘ನನ್ನಮ್ಮ ಸೂಪರ್ ಸ್ಟಾರ್’ ಶೋ ಮುಗಿದ ಮೇಲೆ ಅನುಪಮಾ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಆದರೆ, ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇದೀಗ ಅನುಪಮಾ ಬಗ್ಗೆ ಹೇಳೋಕೆ ಮತ್ತೊಂದು ಮುಖ್ಯ ವಿಚಾರವಿದೆ.. ಏನಪ್ಪಾ ಆ ವಿಚಾರ ಅಂದ್ರೆ ಮಹಾನ್ ಕೆಲಸವೊಂದನ್ನು ಮಾಡಿ ಅನುಪಮಾ ಸಾರ್ಥಕತೆ ಮೆರೆದಿದ್ದಾರೆ.
ಇದನ್ನೂ ಓದಿ: ಆಲಿಯಾ-ರಣ್ಬೀರ್ ಮದುವೆಗೆ ಕೇವಲ 28 ಅತಿಥಿಗಳಿಗೆ ಮಾತ್ರ ಆಹ್ವಾನ!?
ಹೆಣ್ಣು ಮಕ್ಕಳಿಗೆ ತಲೆ ಕೂದಲು ತುಂಬಾನೆ ಮುಖ್ಯ. ಅದರಲ್ಲೂ ತೆರೆಮೇಲೆ ಕಾಣಿಸಿಕೊಳ್ಳುವವರಿಗೆ ಹೇರ್ ಇನ್ನೂ ಮುಖ್ಯ. ಕಾಸ್ಟ್ಯೂಮ್ಗೆ ತಕ್ಕಂತೆ ಅವರು ಹೇರ್ ಸ್ಟೈಲ್ ಮಾಡಿಸಿಕೊಳ್ಬೇಕಾಗುತ್ತೆ. ಆದರೆ, ಕೆಲವರು ಮಾತ್ರ ತಮ್ಮ ಪಾತ್ರಕ್ಕಾಗಿ ಮೇಕ್ ಓವರ್ ಮಾಡಿಸ್ತಾರೆ. ಆದ್ರೆ ಇದೀಗ ಅನುಪಮಾ ಕೂಡ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮಾ ಗೌಡ ಹೇರ್ ಟ್ರಿಮ್ ಮಾಡಿಸಿದ್ದಾರೆ.. ಅದು ಫ್ಯಾಶನ್ಗಾಗಿ ಅಲ್ಲ ಅನ್ನೋದೇ ವಿಶೇಷ. ಅದರ ಹಿಂದೆ ಒಂದು ಮುಖ್ಯ ಕಾರಣ ಕೂಡ ಇದೆ.. ಅದೇನಪ್ಪಾ ಅಂದ್ರೆ ಅನುಪಮಾ ಕ್ಯಾನ್ಸರ್ ಪೇಷೆಂಟ್ಗಳಿಗೆ ತಮ್ಮ ಕೂದಲನ್ನು ಡೊನೇಟ್ ಮಾಡಿದ್ದಾರೆ.. ಆ ಉದ್ದ ಕೂಲದನ್ನು ಕಟ್ ಮಾಡಿಸಿರುವ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವುದರ ಜೊತೆಗೆ ಈ ನನ್ನ ಕಾರ್ಯಕ್ಕೆ ಸಂತೋಷವಾಗಿದೆ ಅಂತಾ ಬರೆದುಕೊಂಡಿದ್ದಾರೆ.
ಅನುಪಮಾ ಅವರ ಈ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಶಂಸೆಯ ಸುರಿ ಮಳೆಯೇ ಹರಿದು ಬರ್ತಿದೆ. ಅನುಪಮಾ ಅವ್ರ ಈ ಕೆಲಸ ಎಷ್ಟೋ ಜನರಿಗೆ ಪ್ರೇರಣೆ ಕೂಡ ಆಗಿದೆ.
ಇದನ್ನೂ ಓದಿ: KGF 2 ಹವಾ: 20 ಕೋಟಿ ದಾಟಿದ ಮುಂಗಡ ಬುಕ್ಕಿಂಗ್ ಮೊತ್ತ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.