BBK 10: ಸ್ನೇಹಿತ್ ಲೋಟದಲ್ಲಿಯೇ ಕಾಫಿ ಕುಡಿಯುವ ನಮ್ರತಾ!

Bigg Boss Kannada 10: ಬಿಗ್‌ಬಾಸ್‌ ಮನೆಯಲ್ಲಿ 9ನೇ ವಾರ ಸ್ನೇಹಿತ್ ಮನೆಯಿಂದ ಎಲಿಮಿನೇಟ್ ಆದಾಗಿನಿಂದ ನಮ್ರತಾ ಸ್ನೇಹಿತ್‌ನ ಮಿಸ್ ಮಾಡಿಕೊಳ್ಳುತ್ತಿದ್ದಾರಾ..? ಎಂಬ ಪ್ರಶ್ನೆಗೆ ದೊಡ್ಮನೆ ಮಂದಿ ಏನು ಹೇಳಿದ್ದಾರೆ ಅಂತ ತಿಳಿಯೋಣ. ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Dec 18, 2023, 11:05 AM IST
  • ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿ ಬಗ್ಗೆ ಒಂದಷ್ಟು ನಿರೀಕ್ಷೆಗಳು ಖಂಡಿತ ಇರುತ್ತಿದ್ದು, ವಾರಪೂರ್ತಿ ನಡೆಯುವ ಘಟನೆಗಳ ಮೇಲೆ ಸುದೀಪ್ ಕಣ್ಣು ಹಾಯಿಸುತ್ತಾರೆ.
  • ಬಿಗ್‌ಬಾಸ್ ಮನೆಯಲ್ಲಿ ತನಿಷಾ ಹಾಗೂ ವರ್ತೂರು ಸಂತೋಷ್ ನಡುವೆ ಹೊಸದೊಂದು ಸ್ನೇಹ ಅರಳಿದ್ದು, ಅದು ಮನೆಯವರಿಗೆಲ್ಲರಿಗೂ ತಿಳಿದಿತ್ತು.
  • ನಮ್ರತಾ ಸ್ನೇಹಿತ್‌ನ ಮಿಸ್ ಮಾಡಿಕೊಳ್ಳುತ್ತಿದ್ದಾರಾ..? ಎಂಬ ಪ್ರಶ್ನೆ ಮನೆಯವರಿಗೆ ಕೇಳಿದಾಗ, ಎಲ್ಲರೂ ಹೌದು ಎಂದಿದ್ದಾರೆ.
BBK 10: ಸ್ನೇಹಿತ್ ಲೋಟದಲ್ಲಿಯೇ ಕಾಫಿ ಕುಡಿಯುವ ನಮ್ರತಾ! title=

Bigg  Boss Super Sunday: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ರ ಶೋದಲ್ಲಿ ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿ ಬಗ್ಗೆ ಒಂದಷ್ಟು ನಿರೀಕ್ಷೆಗಳು ಖಂಡಿತ ಇರುತ್ತಿದ್ದು, ವಾರಪೂರ್ತಿ ನಡೆಯುವ ಘಟನೆಗಳ ಮೇಲೆ ಸುದೀಪ್ ಕಣ್ಣು ಹಾಯಿಸುತ್ತಾರೆ. ತಪ್ಪುಗಳನ್ನು ತಿದ್ದುತ್ತಾರೆ. ಮನೆಯವರನ್ನು ನಕ್ಕಿ ನಗಿಸುತ್ತಾರೆ. ವಾರವಿಡಿ ತಮಗೆ ಬೇಕಾದಂತೆ ಜೀವಿಸಿ, ಬಿಗ್‌ಬಾಸ್ ನೀಡಿದ ಟಾಸ್ಕ್‌ಗಳನ್ನು ಆಡಿ, ಕಿಚ್ಚನಿಗಾಗಿ ಸದಸ್ಯರು ಕೂಡ ಕಾಯುತ್ತಾ ಇರುತ್ತಾರೆ. ಸುದೀಪ್‌ರಿಂದ ನ್ಯಾಯ ಸಿಗುತ್ತೆ ಎಂಬುದು ಮನೆಯವರ ನಂಬಿಕೆ. ಎಷ್ಟೇ ಮನಸ್ತಾಪಗಳು, ಭಿನ್ನಾಭಿಪ್ರಾಯಗಳು ಮೂಡಿದರು ಅದನ್ನು ಸುದೀಪ್ ಅವರಿಗೆ ತಿಳಿಸಬೇಕು ಎಂಬ ಕುತೂಹಲದಿಂದ ಕಾಯುತ್ತಾ ಇರುತ್ತಾರೆ. ಅದರಲ್ಲೂ ವಾರವಿಡಿ ಆಡಿದ ಆಟದಲ್ಲಿ ಒಂದಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆಲ್ಲಾ ಕಿಚ್ಚನ ಪಂಚಾಯ್ತಿಯಲ್ಲಿ Yes/No ಮೂಲಕ ಉತ್ತರ ಸಿಗಲಿದೆ. 

ಬಿಗ್‌ಬಾಸ್ ಮನೆಯಲ್ಲಿ ತನಿಷಾ ಹಾಗೂ ವರ್ತೂರು ಸಂತೋಷ್ ನಡುವೆ ಹೊಸದೊಂದು ಸ್ನೇಹ ಅರಳಿದ್ದು, ಅದು ಮನೆಯವರಿಗೆಲ್ಲರಿಗೂ ತಿಳಿದಿತ್ತು. ಆದರೆ ಇತ್ತೀಚೆಗೆ ಅದು ಕಡಿಮೆಯಾಗಿ, ಇದು ಸುದೀಪ್ ಗಮನಕ್ಕೂ ಬಂದಿದ್ದು, ಇವತ್ತಿನ ಪಂಚಾಯ್ತಿಯಲ್ಲಿ ಅದೇ ಪ್ರಶ್ನೆ ಕೇಳಿದ್ದಾರೆ. ತನಿಷಾ ಹಾಗೂ ವರ್ತೂರು ಸಂತೋಷ್ ಅವರದ್ದು ಟೈಂ ಪಾಸ್ ಫ್ರೆಂಡ್ಶಿಪ್ ಅಂತ ಕೇಳಿದಕ್ಕೆ, ಎಲ್ಲರು ಹೌದು ಎಂದರು. ತನಿಷಾ ಹಾಗೂ ವರ್ತೂರು ಅದನ್ನು ಒಪ್ಪಿಲ್ಲ. ಬದಲಿಗೆ ಲಾಂಗ್ ಟೈಂ ಬಂಧನ ಅಂತ, ನಾಚಿ ನೀರಾಗಿದ್ದಾರೆ. 

ಇದನ್ನೂ ಓದಿ: BBK 10: ಕಿಚನ್ ಏರಿಯಾದಲ್ಲಿ ಕಾರ್ತಿಕ್-ಸಂಗೀತಾ ಮಧ್ಯೆ ಮತ್ತೆ ಕಿರಿಕ್‌! ದೊಡ್ಮನೆಯಲ್ಲಿ ನಡೆದಿದ್ದೇನು?

ಬಿಗ್‌ಬಾಸ್ ಮನೆಯ ಜರ್ನಿಯನ್ನು ಸ್ನೇಹಿತ್ ಕಳೆದ ವಾರ ಮುಗಿಸಿದ್ದು, ಮನೆಯಲ್ಲಿ ಇದ್ದಾಗ ನಮ್ರತಾ ಹಿಂದೆ ಹಿಂದೆ ಬಿದ್ದು ಕಿರಿಕಿರಿ ಮಾಡುತ್ತಾ ಇದ್ದರು. ಇದನ್ನೂ ಗಮನಿಸಿದ ಸುದೀಪ್‌ ನಮ್ರತಾ ಸ್ನೇಹಿತ್‌ನ ಮಿಸ್ ಮಾಡಿಕೊಳ್ಳುತ್ತಿದ್ದಾರಾ..? ಎಂಬ ಪ್ರಶ್ನೆ ಮನೆಯವರಿಗೆ ಕೇಳಿದಾಗ, ಎಲ್ಲರೂ ಹೌದು ಎಂದಿದ್ದಾರೆ. ಮಿಸ್ ಮಾಡಿಕೊಳ್ಳುತ್ತಾ ಇರುವುದಕ್ಕೇನೆ, ಸ್ನೇಹಿತ್ ಬಳಸುತ್ತಿದ್ದ ಗ್ಲಾಸ್ ಹಾಗೂ ಪ್ಲೇಟ್ ಬಳಸುತ್ತಿದ್ದಾರಂತೆ. 

ಮೈಕಲ್ ಇರುವುದೇ ಒಂಥರ ಸೋಂಬೇರಿಯ ರೀತಿ. ಆದರೆ ಇತ್ತೀಚೆಗೆ ಆಟಗಳಲ್ಲಿ ಗೆಲುವು, ಹೊಗಳಿಕೆ ಎಲ್ಲವೂ ಸೇರಿ ಅಹಂಕಾರ ಹೆಚ್ಚಾಗಿದೆ ಎಂಬುದು ಮನೆಯವರಿಗೂ ತಿಳಿದಂತೆ ಕಾಣುತ್ತಿದೆ. ಅದನ್ನೇ ಸುದೀಪ್ ಮೈಕಲ್‌ ಹಿಂಗ್ಯಾಕೆ ಆಡುತ್ತಿದ್ದಾರೆಂಬ ಎಂದು ಪ್ರಶ್ನಿಸಿದಕ್ಕೆ, ಮೈಕಲ್‌ ನಾನು ಇರುವುದೇ ಹೀಗೆ ಸರ್. ಈಗಾಗಲೇ ಎಲ್ಲರಿಗೂ ನನ್ನ ಬಗ್ಗೆ ಗೊತ್ತು. ಹಾಗೇ ಇದ್ದೀನಿ ಎಂದು ಉತ್ತರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News