ಬೆಂಗಳೂರು: ರಿಯಲ್ ಸ್ಟಾರ್ ಸಿನಿಮಾ ನಟನೆ ಮಾತ್ರವಲ್ಲದೇ ಅವರ ನಿರ್ದೇಶನ ಗತ್ತು ಗಮ್ಮತ್ತು ತಿಳಿದಿದೆ. ಅದಕ್ಕೆ ಉದಾಹರಣೆಯಾಗಿ ಕಣ್ಣಾ ಮುಂದಿರುವ ಡಾ. ಶಿವರಾಜಕುಮಾರ್ ನಟನೆಯ ಓಂ ಸಿನಿಮಾ ಬಿಡುಗಡೆ ಆಗಿ ಹಲವು ವರ್ಷಗಳೇ ಕಳೆದಿದ್ದರೂ, ಆ ಸಿನಿಮಾದ ಗಮಲೂ ಮಾಥ್ರ ಹಾಗೆ ಎಲ್ಲರ ಮನದಲ್ಲಿ ಉಳಿದಿದೆ.
ಅವರ ನಟನೆಯ ಸಿನಿಮಾಗಳ ಬಗ್ಗೆ ಚರ್ಚಿಸುವಂತಿಲ್ಲ. ಅಷ್ಟರ ಮಟ್ಟಿಗೆ ನಟನೆ ಮಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಇದೀಗ ಕೆಲವು ವರ್ಷಗಳ ನಂತರ ಮತ್ತೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಉಪ್ಪಿ ತಯಾರಾಗಿದ್ದಾರೆ. ಇದರ ನಡುವೆ ಮುಂಬರುವ ಚುನಾವಣೆಯಲ್ಲೂ ಬ್ಯೂಸಿಯಾಗಿದ್ದಾರೆ. ಪ್ರಜಾಕೀಯ ಪಕ್ಷ ಸ್ಥಾಪಿಸಿ ಜನ ಸಾಮಾನ್ಯರನ್ನು ಹೀರೋ ಮಾಡಲು ಮುಂದಾಗಿದ್ದಾರೆ. ಇದರ ನಡುವೆ ಇದೀಗ ಹೊಸ ಸಿನಿಮಾದಲ್ಲಿ ಕಾರ್ಮಿಕರನ್ನು ಹೀರೋ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಚಂದ್ರುರವರ ಕಥೆ ಹೇಗಿತ್ತು.. ಸಿಹಿಯೋ ಕಹಿಯೋ?
ಸದ್ಯ ಉಪ್ಪಿ UI ಎಂಬ ಹೊಸ ಸಿನಿಮಾದ ನಿರ್ಮಾಣದ ಜೊತೆಗೆ ಆ ಸಿನಿಮಾದಲ್ಲಿ ನಟಿಸಲಿದ್ದಾರೆ. ಸದ್ಯ ಈ ಸಿನಿಮಾ ಮೇಕಿಂಗ್ ವಿಡಿಯೋ ಹೊರ ಬಿದ್ದಿದೆ.UI ಸಿನಿಮಾದ ಹಿಂದೆ ಸಾಕಷ್ಟು ಕಾರ್ಮಿಕರು ಜೀಪ್ ತಳ್ಳೋದು, ಟೆಂಪೋ ತಳ್ಳೋದು ಹೀಗೆ ಅನೇಕ ಕೆಲಸಗಳನ್ನ ಮಾಡ್ತಾನೇ ಬಂದಿದ್ದಾರೆ. ಆ ಶ್ರಮವನ್ನು UI ಟೀಮ್ ಕ್ಯಾಪ್ಚರ್ ಮಾಡಿದೆ.
ಈ ವಿಡಿಯೋವನ್ನ ನೋಡುತ್ತಿದ್ದರೆ ಕಾರ್ಮಿಕನೇ ಹೀರೋ ಎಂದು ಕೂತುಹಲ ಮೂಡಿಸಿದೆ. ಅಷ್ಟೇ ಅಲ್ಲದೇ ಕಾರ್ಮಿಕರ ದಿನದಂದು UI ಸಿನಿಮಾ ಮೇಕಿಂಗ್ ರಿವೀಲ್ ಮಾಡಿರೋದು ನೋಡುತ್ತಿದ್ದರೇ ಕಾರ್ಮಿಕನಿಗೂ ಉಪ್ಪಿಗೂ ನಂಟು ಇದೆ ಎಂಬುವುದು ಹೊರ ಬಿದ್ದಿದೆ. ಈ ಸಿನಿಮಾ ಮೇಕಿಂಗ್ ಸಖತ್ ಆಗಿ ಇದೆ. ಮೇಕಿಂಗ್ ನೋಡುತ್ತಿದ್ದರೆ ಸಾಮಾನ್ಯ ಮನುಷ್ಯ ಹೀರೋ ಆಗುವ ಲಕ್ಷಣ ಎದ್ದು ಕಾಣುತ್ತಿದೆ.
ಇದನ್ನೂ ಓದಿ: Bhairati Rangal : ಕಬ್ಜ ಯಶಸ್ಸಿನ ಬೆನ್ನಲ್ಲೇ ಭೈರತಿ ರಣಗಲ್ ಗೆ ಸಜ್ಜಾದ ಶಿವಣ್ಣ: ಮುಂದಿನ ಚಿತ್ರದ ಸುಳಿವು ನೀಡಿದ ಮುತ್ತಣ್ಣ!
ಮೇಕಿಂಗ್ ಹೇಳುತ್ತಿದೆ ಒಬ್ಬ ಕಾರ್ಮಿಕನ ಕಷ್ಟ ಸುಖ ಅವನ ದುಖಃ ನೋವು ನಲಿವು ಎದ್ದು ಕಾಣುವಂತ್ತಿದೆ. ಫೈಟಿಂಗ್ ಸೀನ್ ಬದಲಾಗಿ ಜನ ಸಾಮನ್ಯನ ನೋವಿನ ಕಥೆ ಹೇಳುವಂತಿದೆ. ಅದೇನೆ ಇರಲಿ ಉಪ್ಪಿ ಅಂದರೆ ಸ್ಪೇಷಲ್ ಅದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ನಟನೆ ಸಿನಿಮಾ, ನಿರ್ಮಾಣದ ಜಲಕ್ ನ್ನು ಈಗಾಗಲೇ ಕರುನಾಡ ಜನ ಮೆಚ್ಚಿದ್ದಾರೆ. ಅವರ ಸಿನಿಮಾ ಡೈಲಾಗ್ ಗಳ ಬಗ್ಗೆ ಕೇಳುವಂತ್ತಿಲ್ಲ ನಮ್ಮ ಜೀವನದಲ್ಲಿ ಹೀಗೊಂದು ಅನುಭವ ಆಗಿದೇಯೇ ಎಂದು ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಜನರ ಮನದಲ್ಲಿ ಅಚ್ಚುಳಿದಿದ್ದಾರೆ.
ಉಪ್ಪಿ ನಿರ್ದೇಶನದ ಹೊಸ ಸಿನಿಮಾ ಜಲಕ್ ಹೇಗಿದೆ ನೋಡಿ..
It is only through these hard workers nd their hard work v achieve great things Happy labour's day#UI The Movie pic.twitter.com/Wn4aBVyAqE
— Sreekanth KP (@kp_sreekanth) May 1, 2023
ಮೇ1ರಂದು ಕಾರ್ಮಿಕ ದಿನದ ಅಂಗವಾಗಿ UI ಸಿನಿಮಾ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ಹಗಲು ರಾತ್ರಿ ಎನ್ನದೇ ಶ್ರಮಿಸುವ ಕಾರ್ಮಿಕರಿಗೆ ಈ ಮೂಲಕ ವಿಶಸ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.