ನರಗುಂದದ ಅಪ್ಪು ಅಭಿಮಾನಿಯ ಆಸೆ ಪೂರೈಸಿದ ರಾಜ್ ಕುಟುಂಬ

ನರಗುಂದ ಪಟ್ಟಣದ ಅಪ್ಪು ಅಂತಾನೇ ಫೇಮಸ್ ಆಗಿರೋ ರಾಜರತ್ನನ ಅಪ್ಪಟ ಅಭಿಮಾನಿ ಮಾರುತಿ ಬೆಣವಣಕಿ ಅವರ ಮಗುವಿಗೆ "ಪುನೀತ್ ರಾಜಕುಮಾರ್" ಅಂತಾ ನಾಮಕರಣದ ಕುರಿತು ಇದೇ ವಿಷಯವನ್ನು ನಟ ರಾಘವೇಂದ್ರ ರಾಜಕುಮಾರ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಸಂತಸ ಪಟ್ಟಿದ್ದಾರೆ.

Written by - Zee Kannada News Desk | Last Updated : Aug 30, 2022, 03:34 PM IST
  • ಅನಾರೋಗ್ಯದ ಮಧ್ಯೆಯೂ ಮಾರುತಿ ಕುಟುಂಬವನ್ನ ಭೇಟಿಯಾದ ರಾಘಣ್ಣ, ಹೆಸರಿಟ್ಟು ಮಗುವಿಗೆ ಶುಭಹಾರೈಸಿದ್ದಾರೆ.
  • ಅಪ್ಪು ಅಭಿಮಾನಿ ಮಾರುತಿ ಆಸೆಯಂತೆ ಬೆಂಗಳೂರಿನ ಸದಾಶಿವ ನಗರದಲ್ಲಿರೋ ತಮ್ಮ ನಿವಾಸಕ್ಕೆ ಕರೆಸಿಕೊಂಡ ರಾಘವೇಂದ್ರ ರಾಜಕುಮಾರ್ ಅವರು ತಾವೇ ಹೆಸರಿಟ್ಟು ಹರಿಸಿದ್ದಾರೆ.
ನರಗುಂದದ ಅಪ್ಪು ಅಭಿಮಾನಿಯ ಆಸೆ ಪೂರೈಸಿದ ರಾಜ್ ಕುಟುಂಬ  title=
Photo Courtsey: Twitter

ಗದಗ : ನರಗುಂದ ಪಟ್ಟಣದ ಅಪ್ಪು ಅಂತಾನೇ ಫೇಮಸ್ ಆಗಿರೋ ರಾಜರತ್ನನ ಅಪ್ಪಟ ಅಭಿಮಾನಿ ಮಾರುತಿ ಬೆಣವಣಕಿ ಅವರ ಮಗುವಿಗೆ "ಪುನೀತ್ ರಾಜಕುಮಾರ್" ಅಂತಾ ನಾಮಕರಣದ ಕುರಿತು ಇದೇ ವಿಷಯವನ್ನು ನಟ ರಾಘವೇಂದ್ರ ರಾಜಕುಮಾರ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಸಂತಸ ಪಟ್ಟಿದ್ದಾರೆ.

ಅಪ್ಪು ಅಭಿಮಾನಿ ಮಾರುತಿ ಆಸೆಯಂತೆ ಬೆಂಗಳೂರಿನ ಸದಾಶಿವ ನಗರದಲ್ಲಿರೋ ತಮ್ಮ ನಿವಾಸಕ್ಕೆ ಕರೆಸಿಕೊಂಡ ರಾಘವೇಂದ್ರ ರಾಜಕುಮಾರ್ ಅವರು ತಾವೇ ಹೆಸರಿಟ್ಟು ಹರಿಸಿದ್ದಾರೆ. 'ಅಪ್ಪು ಕುಟುಂಬಸ್ಥರೇ ನನ್ನ ಮಗುವಿಗೆ ಹೆಸರಿಡಬೇಕು ಅಂತಾ ಮಾರುತಿ ತಮ್ಮ ಬಯಕೆಯನ್ನ ಹೇಳಿಕೊಂಡಿದ್ರು..ಇದೇ 18ಕ್ಕೆ ಅಪ್ಪು ಅಭಿಮಾನಿಯ ವಿಶಿಷ್ಟ ಬಯಕೆಯ ಬಗ್ಗೆ ವರದಿ ಪ್ರಕಟವಾಗಿತ್ತು.. ಈ ಸುದ್ದಿ ಗಮನಿಸಿದ್ದ ರಾಜಕುಮಾರ್ ಅಭಿಮಾನಿ ಸಂಘದ ಸದಸ್ಯರಾದ ರಾಮು ಬಳ್ಳಾರಿ, ರೇಖಾ ಬಂಗಾರಶೆಟ್ಟರ್, ಮಂಜು ಕೊಟ್ಟೂರು, ಚಂದ್ರಶೇಖರಗೌಡ ರಾಜ್ ಕುಟುಂಬದ ಗಮನಕ್ಕೆ ತಂದಿದಾರೆ. ಅಲ್ದೆ, ರಾಘಣ್ಣ ಅವರ ಗಮನಕ್ಕೆ ತಂದು ಆಗಸ್ಟ್ 29 ಕ್ಕೆ ಸದಾಶಿವ ನಗರದ ರಾಘಣ್ಣ ನಿವಾಸದಲ್ಲಿ ನಾಮಾಮಕರಣ ಕಾರ್ಯಕ್ರಮ ಫಿಕ್ಸ್ ಮಾಡ್ಸಿದ್ದಾರೆ.

ನರಗುಂದದಿಂದ ಚಂದ್ರಶೇಖರಗೌಡ ಪಾಟೀಲ ವಾಹನ ವ್ಯವಸ್ಥೆ ಮಾಡಿದ್ರು.. ಸದಾಶಿವ ನಗರದ ರಾಘವೇಂದ್ರ ರಾಜಕುಮಾರ್ ನಿವಾಸದಲ್ಲೇ  ಕುಟುಂಬಸ್ಥರ ಸಮ್ಮುಖದಲ್ಲೆ ರಾಘಣ್ಣ ಮಗುವಿಗೆ ಅಪ್ಪು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: ಮಗುವಿಗೆ ಅಪ್ಪು ಹೆಸರಿಡಲು ದೊಡ್ಮನೆಗೆ ಕೋರಿದ ಅಭಿಮಾನಿ

ಅಪ್ಪು ಬದುಕಿದ್ದಾಗಲೇ ಮೊದಲ ಮಗುವಿಗೆ ಪುನೀತ್ ರಾಜಕುಮಾರ್ ಅಂತಾ ಹೆಸರಿಡ್ಬೇಕು ಎಂದು ಮಾರುತಿ ಅನ್ಕೊಂಡಿದ್ರು.. ಮೊದಲ ಮಗು ಹೆಣ್ಣು ಮಗು ಆಗಿದ್ರಿಂದ ಪುನೀತ್ ಹೆಸರು ಇಡೋದಕ್ಕೆ ಆಗಿರಲಿಲ್ಲ.. ಎರಡನೇ ಮಗುವಿಗೆ ಅಪ್ಪು ಅವರಿಂದಲೇ ಪುನಿತ್ ರಾಜಕುಮಾರ್ ಹೆಸರಿಡಿಸ್ಬೇಕು ಅಂತಾ ಮೂರು ವರ್ಷದ ಹಿಂದೆಯೇ ಮಾರುತಿ ಅನ್ಕೊಂಡಿದ್ರು. ಅಪ್ಪು ಅಕಾಲಿಕ ನಿಧನದಿಂದ ಮಾರುತಿಗೆ ತೀವ್ರ ನೋವಾಗಿತ್ತು.. ಪುನೀತ್ ತೀರಿಹೋದಾಗಲೇ ಮಾರುತಿ ಅವರ ಪತ್ನಿ ಗರ್ಭಿಣಿಯಾಗಿರೋದು ಗೊತ್ತಾಗುತ್ತೆ.. ಈ ಬಾರಿ ಗಂಡು ಮಗು ಹುಟ್ಟಿದ್ರೆ ಪುನೀತ್ ಕುಟುಂಬಸ್ಥರ ಸಮ್ಮುಖದಲ್ಲಿ ಅಪ್ಪು ಹೆಸರಿಡೋಣ ಅಂತಾ ಅನ್ಕೊಂಡಿದ್ರಂತೆ.. ಮಾರುತಿ ಆಸೆಯಂತೆ ಈಗ ರಾಘವೇಂದ್ರ ರಾಜಕುಮಾರ್ ಅವರೇ ಮಗುವಿಗೆ ಹೆಸರಿಟ್ಡಿದ್ದಾರೆ..

ಅನಾರೋಗ್ಯದ ಮಧ್ಯೆಯೂ ಮಾರುತಿ ಕುಟುಂಬವನ್ನ ಭೇಟಿಯಾದ ರಾಘಣ್ಣ, ಹೆಸರಿಟ್ಟು ಮಗುವಿಗೆ ಶುಭಹಾರೈಸಿದ್ದಾರೆ.. ರಾಘಣ್ಣ ಆಗಮನಕ್ಕೂ ಮುಂಚೆ ಯುವರಾಜಕುಮಾರ್ ಆಗಮಿಸಿ ಮಗುವನ್ನ ಎತ್ತಿಕೊಂಡು ಮುದ್ದಾಡಿದ್ರಂತೆ. ಪುನೀತ್ ರಾಜಕುಮಾರ್ ಅವರ ಮೇಲಿರೋ ಅಭಿಮಾನ ಕಂಡು ಯುವರಾಜಕುಮಾರ್ ಭಾವುಕರಾಗಿದ್ರಂತೆ.. ಯುವರಾಜಕುಮಾರ್ ಅವರಲ್ಲೇ ಅಪ್ಪುವಿನ ರೂಪ ಕಂಡು ಮಾರುತಿ ಸಂತಸ ಪಟ್ಟಿದ್ದಾರೆ.. ನಂತ್ರ ಯುವರತ್ನನ ಸ್ಮರಣೆಯೊಂದಿಗೆ ನಾಮಕರಣ ಕಾರ್ಯಕ್ರಮ ನಡೆದಿದೆ.

ಅಭಿಮಾನಿಯ ಆಸೆ ತೀರಿಸಿದ ಸಂತೃಪ್ತಿ ರಾಜ್ ಅಭಿಮಾನಿ ಸಂಘದ ಚಂದ್ರಶೇಖರಗೌಡ ಅವರಿಗಿದೆ.. ದೊಡ್ಮನೆ ಕುಟುಂಬಸ್ಥರನ್ನ ಭೇಯಾಗೋದಕ್ಕೆ ಹೊನ್ನೆಗೌಡ, ಖಾದರ್ ಪಾಷಾ, ಉಮೇಶ್ ಕುರಿ ಅವರೂ ಸ್ಪಂದಿಸಿದ್ರಂತೆ.. ಜೊತೆಗೆ ಸುದ್ದಿ ಮಾಡಿ ಅಭಿಮಾನಿಯ ಮನದಾಳದ ಆಸೆ ರಾಜಕುಟುಂಬಕ್ಕೆ ತಲುಪಿಸುವ ಕೆಲಸ ಮಾಡಿದ್ದ ಜೀ ಕನ್ನಡ ನ್ಯೂಸ್ ನ ಮಾರುತಿ ಹಾಗೂ ಚಂದ್ರಶೇಖರ್ ಗೌಡಗೆ ಧನ್ಯವಾದ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News