ಏರ್ ಇಂಡಿಯಾಗೆ ತಾನು ಅನಧಿಕೃತ ರಾಯಭಾರಿ ಎಂದ ಶಾರುಖ್!

ಬಾಲಿವುಡ್ ಬಾದಷಾ ಈಗ ಏರ್ ಇಂಡಿಯಾದ ಅನಧಿಕೃತ ರಾಯಭಾರಿ ಎಂದು ಘೋಷಿಸಿಕೊಂಡಿದ್ದಾರೆ.ಅದೇಗೆ ಅಂತೀರಾ? ಹಾಗಾದರೆ ಈ ಸ್ಟೋರಿ ನೋಡಿ. 

Last Updated : Nov 18, 2018, 06:16 PM IST
ಏರ್ ಇಂಡಿಯಾಗೆ ತಾನು ಅನಧಿಕೃತ ರಾಯಭಾರಿ ಎಂದ ಶಾರುಖ್!    title=

ನವದೆಹಲಿ: ಬಾಲಿವುಡ್ ಬಾದಷಾ ಈಗ ಏರ್ ಇಂಡಿಯಾದ ಅನಧಿಕೃತ ರಾಯಭಾರಿ ಎಂದು ಘೋಷಿಸಿಕೊಂಡಿದ್ದಾರೆ. ಅದೇಗೆ ಅಂತೀರಾ? ಹಾಗಾದರೆ ಈ ಸ್ಟೋರಿ ನೋಡಿ. 

ಈ ಹಿಂದೆ ಆಗಾಗ ಶಾರುಖ್ ಖಾನ್ ತಾವು ವಿಮಾನಯಾನ ಮಾಡುವಾಗ ಏಕಾಂಗಿಯಾಗಿರಬೇಕು ಮತ್ತು ಶಾಂತತೆಯಿಂದ ಕೂಡಿರಬೇಕು ಎಂದು ಹೇಳಿಕೊಂಡಿದ್ದರು. ಆದರೆ ಈಗ ಅವರು ಒಂದು ಸ್ಟೆಪ್ ಮುಂದೆ ಹೋಗಿ ಏರ್ ಇಂಡಿಯಾದ ಆತಿಥ್ಯಕ್ಕೆ ಮನ ಸೋತು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ.ಅಲ್ಲದೆ ತಮ್ಮನ್ನು ದೇಶಿಯ ಏರ್ ಇಂಡಿಯಾದ ರಾಯಭಾರಿ ಎಂದು ಘೋಷಿಸಿಕೊಂಡಿದ್ದಾರೆ.

ಈಗ ಈ ಆತಿಥ್ಯದ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಕಿಂಗ್ ಖಾನ್ " ಅನಧಿಕೃತವಾಗಿ ಮತ್ತು ಯಾವುದೇ ಸಂಕೋಚವಿಲ್ಲದೆ ನಾನು ಏರ್ ಇಂಡಿಯಾದ ರಾಯಭಾರಿ ಎಂದು ಘೋಷಿಸಿಕೊಳ್ಳುತ್ತೇನೆ.ಏರ್ ಇಂಡಿಯಾದ ಸಿಬ್ಬಂದಿಗೂ ಮತ್ತು ಪೈಲಟ್ ಗಳಿಗೂ ಉತ್ತಮ ಪ್ರಯಾಣಕ್ಕಾಗಿ ಧನ್ಯವಾದಗಳು.. ಮಹಾರಾಜ ಯಾವತ್ತೋ ಮಹಾರಾಜ ನಾಗಿರುತ್ತಾನೆ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ತಕ್ಷಣ ಬಾಲಿವುಡ್ ಶೈಲಿಯಲ್ಲಿಯೇ ಉತ್ತರಿಸಿರುವ ಏರ್ ಇಂಡಿಯಾ "ಮಹಾರಾಜ ಯಾವಾಗಲು ಕಿಂಗ್ ಖಾನ್ ಗೆ ಸೇವೆ ಒದಗಿಸಲು ಸಂತಸವಾಗುತ್ತದೆ. ನಿಮ್ಮ ಮೆಚ್ಚುಗೆ ನುಡಿಗಳು ಏರ್ ಇಂಡಿಯಾ ಕುಟುಂಬಕ್ಕೆ ಸೂರ್ತಿಯನ್ನು ತಂದಿದೆ. ಕಿಂಗ್ ಖಾನ್ ಮಹಾರಾಜ್ ನಿಗೆ ರಾಯಭಾರಿಯಾಗುವುದು ನಿಜಕ್ಕೂ ಗೌರವದ ಸಂಗತಿ" ಎಂದು ಏರ್ ಇಂಡಿಯಾ ಪ್ರತಿಕ್ರಿಯಿಸಿದೆ. 

 

Trending News