ರಾಜಕೀಯ ಜ್ಞಾನವಿಲ್ಲ ಎಂದ ಶಾರುಖ್ ಗೆ ಚುನಾವಣೆ ಚಿನ್ಹೆ ಯಾವುದು ಗೊತ್ತೇ?

ಶಾರುಖ್ ಖಾನ್ ಬೆಳ್ಳಿ ತೆರೆಯ ಮೇಲೆ ಕೋಟ್ಯಾಂತರ  ಅಭಿಮಾನಿಗಳಿಗೆ  ತಮ್ಮ ಅಭಿನಯದಿಂದಲೇ ಮೋಡಿ ಮಾಡಿದ್ದಾರೆ.ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಕೇಳಿದಾಗ ತಮಗೆ ಅಷ್ಟು ರಾಜಕೀಯ ಜ್ಞಾನವಿಲ್ಲ ಅದಕ್ಕೆ ವಿಶೇಷ ಜ್ಞಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.

Last Updated : Aug 27, 2018, 05:19 PM IST
ರಾಜಕೀಯ ಜ್ಞಾನವಿಲ್ಲ ಎಂದ ಶಾರುಖ್ ಗೆ ಚುನಾವಣೆ ಚಿನ್ಹೆ ಯಾವುದು ಗೊತ್ತೇ? title=

ಮುಂಬೈ: ಶಾರುಖ್ ಖಾನ್ ಬೆಳ್ಳಿ ತೆರೆಯ ಮೇಲೆ ಕೋಟ್ಯಾಂತರ  ಅಭಿಮಾನಿಗಳಿಗೆ  ತಮ್ಮ ಅಭಿನಯದಿಂದಲೇ ಮೋಡಿ ಮಾಡಿದ್ದಾರೆ.ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಕೇಳಿದಾಗ ತಮಗೆ ಅಷ್ಟು ರಾಜಕೀಯ ಜ್ಞಾನವಿಲ್ಲ ಅದಕ್ಕೆ ವಿಶೇಷ ಜ್ಞಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.

"ನಾನು ಒಬ್ಬ ಕಲಾವಿದನಾಗಿ ದೇಶಕ್ಕೆ ಮಾಡಬೇಕಾದ ಕೆಲಸವನ್ನು ಮಾಡಲು ಇಚ್ಚಿಸುತ್ತೇನೆ.ಆದರೆ ರಾಜಕೀಯ ಎನ್ನುವುದು ವಿಶೇಷ ಕ್ಷೇತ್ರ,ಆದರೆ ನನಗೆ ರಾಜಕೀಯದ ಭಾಗವಾಗಲು ಅಷ್ಟು ಜ್ಞಾನವಿಲ್ಲ ಎಂದು ಶಾರುಖ್ ತಿಳಿಸಿದರು.ಇನ್ನು ಮುಂದುವರೆದು "ಅದಕ್ಕೆ  ಪರಿಣಿತಿಯ ಅಗತ್ಯತೆ ಇದೆ. ಅಲ್ಲದೆ ಸ್ವಾರ್ಥರಹಿತ,ಜನರಿಗೊಸ್ಕರವಾಗಿ ಅರ್ಪಣಾ ಮನೋಭಾವದಿಂದ ಕೆಲಸಮಾಡುವ ಅಗತ್ಯವಿದೆ "ಎಂದರು.

ಇದೇ ಸಂದರ್ಭದಲ್ಲಿ ಒಂದು ವೇಳೆ ತಾವು ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾರೆ ತಮ್ಮ ಚಿನ್ಹೆ ಯಾವುದೆಂದು ಕೇಳಿದಾಗ ತೆರೆದ ಕೈಗಳು(ಸಿನಿಮಾದಲ್ಲಿ ಕೈಗಳನ್ನು ಅಗಲ ಮಾಡಿ ನೃತ್ಯ ಮಾಡುವುದು) ಎಂದು ಹೇಳಿ ಎಲ್ಲರನ್ನು ಹಾಸ್ಯದಲ್ಲಿ ತೇಲಿಸಿದರು. 

Trending News