ಲೀಲಾವತಿ ನುಡಿನಮನ; ₹55 ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬರೋಬ್ಬರಿ 55 ಲಕ್ಷ ರೂ. ವೆಚ್ಚದಲ್ಲಿ ತಾಯಿ ಲೀಲಾವತಿ ಅವರಿಗೆ ಸ್ಮಾರಕ‌ ನಿರ್ಮಾಣ ಮಾಡಲು ನಟ ವಿನೋದ್ ರಾಜ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಪತ್ನಿ ಹಾಗೂ ಮಗ ಭಾಗಿಯಾಗಿದ್ದು, ಸಚಿವ ಕೆ.ಹೆಚ್ ಮುನಿಯಪ್ಪ ಸಾಥ್ ನೀಡಿದ್ದು ವಿಶೇಷ.

Written by - Zee Kannada News Desk | Last Updated : Jan 19, 2024, 06:39 PM IST
  • ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರ ನುಡಿನಮನ
  • ತಾಯಿಗೆ ನುಡಿನಮನ ಕಾರ್ಯಕ್ರಮ ಮಾಡಿದ ನಟ ವಿನೋದ್ ರಾಜ್
  • 55 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಲೀಲಾವತಿ ನುಡಿನಮನ; ₹55 ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ title=
ಲೀಲಾವತಿ ನುಡಿನಮನ

ನೆಲಮಂಗಲ: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರು ನಮ್ಮನ್ನು ಅಗಲಿ ತಿಂಗಳುಗಳೇ ಕಳೆದರೂ, ಅವರ ನನೆಪಿನ ಕಾರ್ಯಕ್ರಮಗಳು ಮಾತ್ರ ಮುಂದುವರೆಯುತ್ತಲೇ ಇವೆ. ಕಳೆದ ವಾರ ಲೀಲಾವತಿ ಅಮ್ಮನವರ ಸ್ಮಾರಕದ ಉದ್ಘಾಟನೆ ಮಾಡಿದ ಪುತ್ರ ವಿನೋದ್​ ರಾಜ್ ಶುಕ್ರವಾರ(ಜ.19) ತಮ್ಮ ತಾಯಿಗೆ ನುಡಿನಮನ ಕಾರ್ಯಕ್ರಮ ಆಯೋಜಿಸುವ ಮೂಲಕ ಅವರ ನೆನಪನ್ನು ಮತ್ತಷ್ಟು ಹೆಚ್ಚಿಸಿದರು. ಲೀಲಾವತಿ ನುಡಿನಮನ ಕಾರ್ಯಕ್ರಮಕ್ಕೆ ಯಾರೆಲ್ಲಾ ಆಗಮಿಸಿದ್ರು..? ಏನೆಲ್ಲಾ ವಿಶೇಷತೆ ಇತ್ತು ಅಂತೀರಾ..? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.  

ಹಿರಿಯ ನಟಿ ಲೀಲಾವತಿಗೆ ನುಡಿನಮನ..!

ನಾಡು ಕಂಡ ಶ್ರೇಷ್ಠ ನಟಿ ಅಂದರೆ ಲೀಲಾವತಿ.. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆಯೇ ಸಾರ್ಥಕವೆಂದು ಬಾಳಿದವರು. ಇಂತಹ ಸಾರ್ಥಕ ಜೀವಿಗೆ ಇಂದು ನುಡಿನಮನ ಕಾರ್ಯಕ್ರಮದ ಮೂಲಕ ಈ ಅದ್ಭುತ ಜೀವವನ್ನು ಮತ್ತೆ ನೆನೆಯುವಂತಾಯ್ತು..

ಇದನ್ನೂ ಓದಿ: ಥಿಯೇಟರ್‌ನಲ್ಲಿ ನೋಡಿದ್ದು ಜಸ್ಟ್‌ ಸ್ಯಾಂಪಲ್‌..! ಓಟಿಟಿ ʼಅನಿಮಲ್‌ʼನಲ್ಲಿವೆ ರಶ್ಮಿಕಾ ಅನ್‌ಸೀನ್‌ ಹಾಟ್‌ ಸೀನ್ಸ್‌

ಹೌದು.. ನೆಲಮಂಗಲದ ಹರ್ಷಾ ಸಭಾಂಗಣದಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಹಲವಾರು ಹಿರಿಯ ಸಿನಿ ತಾರೆಯರು ಭಾಗವಹಿಸಿದ್ದರು. ಪ್ರಮುಖವಾಗಿ ನಟಿ ಭವ್ಯ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಲೀಲಾವತಿ ಅಮ್ಮನವರನ್ನು ನೆನೆದು ನಟಿ ಭವ್ಯ ಭಾವುಕರಾಗಿದ್ದಲ್ಲದೇ, ಅವರ ಸಾಮಾಜಿಕ ಸೇವಾ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ಸಾಮಾಜಿಕ ಸೇವಾ ಕೆಲಸಗಳನ್ನು ಮಾಡಬೇಕಿರುವುದು ಸರ್ಕಾರ. ಆದರೆ ಲೀಲಾವತಿ ಹಾಗೂ ಪುತ್ರ ವಿನೋದ್​ ರಾಜ್​ ಯಾರಿಂದಲೂ ಯಾವುದೇ ಅಪೇಕ್ಷೆ ಪಟ್ಟವರಲ್ಲ. ಹೀಗಾಗಿಯೇ ತಮ್ಮ ತಾಯಿಯ ನಿಸ್ವಾರ್ಥ ಸೇವೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವನ್ನು ವಿನೋದ್ ಮಾಡುತ್ತಿದ್ದಾರೆ. ಅವರ ಜೊತೆ ಸ್ಥಳೀಯ ಕೆಲ ನಾಯಕರೂ ಕೈ ಜೋಡಿಸಿರುವುದು ಖುಷಿಯ ವಿಚಾರ. ಆದಷ್ಟು ಬೇಗ ಲೀಲಾವತಿ ಅಮ್ಮನವರ ಸ್ಮಾರಕ ಕಾಮಗಾರಿ ಮುಗಿದು, ವಿನೋದ್​ ಆಸೆಯಂತೆಯೇ ದೇವಸ್ಥಾನವಾಗಿ ಮಾರ್ಪಾಡಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

ಇದನ್ನೂ ಓದಿ: 'ಒಂದು ಸರಳ ಪ್ರೇಮಕಥೆ'ಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್..! 

₹55 ಲಕ್ಷ ವೆಚ್ಚದಲ್ಲಿ ಲೀಲಾವತಿ ಅಮ್ಮನ ಸ್ಮಾರಕ

ಬರೋಬ್ಬರಿ 55 ಲಕ್ಷ ರೂ. ವೆಚ್ಚದಲ್ಲಿ ತಾಯಿ ಲೀಲಾವತಿ ಅವರಿಗೆ ಸ್ಮಾರಕ‌ ನಿರ್ಮಾಣ ಮಾಡಲು ನಟ ವಿನೋದ್ ರಾಜ್ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಪತ್ನಿ ಹಾಗೂ ಮಗ ಭಾಗಿಯಾಗಿದ್ದು, ಸಚಿವ ಕೆ.ಹೆಚ್ ಮುನಿಯಪ್ಪ ಸಾಥ್ ನೀಡಿದ್ದು ವಿಶೇಷ. ಸೋಲದೇವನಹಳ್ಳಿಯ ತಮ್ಮ ತೋಟದಲ್ಲಿಯೇ ಹಿರಿಯ ನಟಿ ಲೀಲಾವತಿ ಅವರ ಪುಣ್ಯಭೂಮಿ ಇದ್ದು, ಅಲ್ಲಿಯೇ ನಟ ವಿನೋದ್ ರಾಜ್ ಭವ್ಯ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News