ನವದೆಹಲಿ: Anger Management Therapy - ಕೆಲವರು ಪ್ರತಿ ಸಣ್ಣ ಪುಟ್ಟ ವಿಷಯಕ್ಕೂ ಕೂಡ ಕೋಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವರ ಕೋಪದ ಕಾರಣವೂ ಅವರಿಗೆ ತಿಳಿದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರು ಹೆಚ್ಚು ಅಸಮಾಧಾನಗೊಳ್ಳಲು ಪ್ರಾರಂಭಿಸುತ್ತಾರೆ ಮತ್ತು ಪ್ರತಿಯೊಬ್ಬರ ಮೇಲೆ ತಮ್ಮ ಕಿರಿಕಿರಿಯನ್ನು ಹೊರಹಾಕುತ್ತಾರೆ. ನಿಮಗೂ ಕೂಡ ಈ ಸಮಸ್ಯೆ ಇದ್ದಾರೆ, ನಿಮ್ಮನ್ನು ಶಾಂತವಾಗಿರಿಸಿಕೊಳ್ಳುವ ಮಾರ್ಗಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ (Anger Management Therapy). ಏಕೆಂದರೆ ಕೋಪವು ನಿಮ್ಮ ಆರೋಗ್ಯ ಮತ್ತು ಜೀವನಶೈಲಿಯನ್ನು (Lifestyle) ಹೆಚ್ಚು ಪ್ರಭಾವಿತಗೊಳಿಸುತ್ತದೆ.
ಕೋಪದಿಂದ ನಿಮ್ಮನ್ನು ನೀವು ದೂರವಿಡುವುದು ಬಹಳ ಮುಖ್ಯ
University of Wisconsin ನಲ್ಲಿ ನಡೆಸಲಾಗಿರುವ ಒಂದು ಸಂಶೋಧನೆಯೊಂದರಲ್ಲಿ, ವಿಜ್ಞಾನಿಗಳು ಕೋಪದ ಸಮಯದಲ್ಲಿ ಮೆದುಳಿನ ಮಾದರಿಯನ್ನು (Brain Pattern) ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೆಲವು ಸೆಕೆಂಡುಗಳ ಕಾಲವೂ ಕೋಪದ ಸಮಸ್ಯೆಯಿಂದ ಮನಸ್ಸನ್ನು ತೆಗೆದುಹಾಕುವಂತಹ ಕೆಲಸವನ್ನು ನಾವು ಪ್ರಾರಂಭಿಸಿದರೆ, ಮನುಷ್ಯ ನೆಮ್ಮದಿಯಿಂದ ಬದುಕಬಹುದು ಏನು ತಿಳಿದುಬಂದಿದೆ. ಹಾಗಾದರೆ ಬನ್ನಿ ಕೋಪ ನಿರ್ವಹಣೆಯ (Anger Management Tips). ಕುರಿತು ಕೆಲ ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ.
ದೀರ್ಘ ಶ್ವಾಸ ತೆಗೆದುಕೊಳ್ಳಿ
ಕೋಪವನ್ನು ನಿಯಂತ್ರಿಸಲು ಇದು ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ (Anger Self Control Tips). ನೀವು ಕೋಪಗೊಂಡರೆ ದೇಹವು ಉದ್ವೇಗಕ್ಕೆ ಒಳಗಾಗುತ್ತದೆ. ಈ ಸಮಯದಲ್ಲಿ ದೀರ್ಘ ಶ್ವಾಸ ತೆಗೆದುಕೊಳ್ಳುವುದು ಉತ್ತಮ, ಇದು ಆಂತರಿಕ ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಸಹ ಸುಧಾರಿಸುತ್ತದೆ.
ಮನಸ್ಸನ್ನು ನಿಯಂತ್ರಿಸಲು ಕಲಿತುಕೊಳ್ಳಿ
ಒಂದು ವೇಳೆ ನಿಮಗೆ ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದಿದ್ದರೆ, ಅದು ತುಂಬಾ ತಪ್ಪು ವಿಷಯ. ಇಂತಹ ಪರಿಸ್ಥಿತಿಯಲ್ಲಿ, ನೀವು ಇತರರ ಮುಂದೆ ತಪ್ಪು ಎಂದು ಸಾಬೀತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಪ್ಪು ಯಾರದೇ ಇರಲಿ, ಒಂದು ವೇಳೆ ಕೋಪದ ಮೇಲೆ ನೀವು ನಿಮ್ಮ ಹಿಡಿತವನ್ನು ತಪ್ಪಿದರೆ, ಜನರು ನಿಮ್ಮನ್ನೇ ತಪ್ಪಾಗಿ ಪರಿಗಣಿಸುತ್ತಾರೆ. ಇಂತಹ ಸಮಯದಲ್ಲಿ, ನಿಮ್ಮನ್ನು ನೀವು ಯಾವುದೇ ರೀತಿಯಲ್ಲಿ ಶಾಂತವಾಗಿರಿಸಿಕೊಳ್ಳಿ.
ಇದನ್ನೂ ಓದಿ- ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ನೆನೆಸಿದ ನೀರನ್ನು ಕುಡಿಯಿರಿ: ನಂತ್ರ ಅದರ ಪ್ರಯೋಜನ ನೋಡಿ!
ವಾಕಿಂಗ್ ನಿಂದ ಆರಾಮ ಸಿಗುತ್ತದೆ
ಒಂದು ವೇಳೆ ನಿಮಗೆ ಅತಿಯಾದ ಕೋಪ ಬಂದಿದ್ದರೆ 5 ನಿಮಿಷಗಳ ಕಾಲ ಅಲ್ಲಿಯೇ ಅಕ್ಕ-ಪಕ್ಕದಲ್ಲಿ ವಾಕ್ ಮಾಡಿ ಅಥವಾ ಅದೇ ರೀತಿಯ ಯಾವುದಾದರೊಂದು ಕೆಲಸ ಮಾಡಿ. ಇದರಿಂದ ನಿಮಗೆ ಆರಾಮ ಸಿಗಲಿದೆ. ಈ ಅವಧಿಯಲ್ಲಿ ನೀವು ಯೋಗ ಕೂಡ ಮಾಡಬಹುದು. ಆದರೆ, ಪ್ರತಿ ಬಾರಿ ಯೋಗ ಮಾಡಲೇ ಬೇಕು ಎಂಬ ನಿಯಮವಿಲ್ಲ. ಒಟ್ಟಾರೆ ನಿಮ್ಮೊಳಗಿನ ಸಿಟ್ಟು ಹೊರಬರಬೇಕು ಅಷ್ಟೇ. ಇದಕ್ಕಾಗಿ ನೀವು ಜೋರಾಗಿ ಹಾಡು ಹೇಳಿ ಅಥವಾ ಕುಣಿದು ಕುಪ್ಪಳಿಸಿ. ಮಾನಸಿಕವಾಗಿ ನೀವು ಆ ಸ್ಥಿತಿಯಿಂದ ಹೊರಬರುವ ಪ್ರಯತ್ನ ನಿಮ್ಮದಾಗಿರಲಿ.
ಸಿಟ್ಟಿನ ಕಾರಣ ತಿಳಿದು ಸಮಾಧಾನ ಸಿಗಲಿದೆ (Health Tips)
ಖಾಲಿ ಇರುವ ಸಮಯದಲ್ಲಿ ನೀವು ನಿಮ್ಮ ಸಮಸ್ಯೆಗಳನ್ನು ಗುರುತಿಸಿ. ಕೆಲವರು ದೊಡ್ಡ ಧ್ವನಿಯಲ್ಲಿ ಕೋಪಗೊಳ್ಳುತ್ತಾರೆ, ಕೆಲವರು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅಸಮಾಧಾನಗೊಳ್ಳುತ್ತಾರೆ, ಕೂದಲು ಉದುರುವಿಕೆಯ ಸಮಸ್ಯೆಯಿಂದ ಕೆಲವರು ಕೋಪಿಸಿಕೊಳ್ಳುತ್ತಾರೆ, ಮತ್ತೆ ಕೆಲವರು ಎದುರಿಗಿರುವ ವ್ಯಕ್ತಿ ಮಾಡುವ ತಪ್ಪಿನ ಕಾರಣ ಕೋಪಿಸಿಕೊಳ್ಳುತ್ತಾರೆ. ನಿಮ್ಮಲ್ಲಿರುವ ಸಮಸ್ಯೆಯನ್ನು ಅರಿಯಲು ಪ್ರಯತ್ನಿಸಿ. ಯಾವ ವಿಷಯದ ಮೇಲೆ ನಿಮಗೆ ಅತಿ ಹೆಚ್ಚು ಸಿಟ್ಟು ಬರುತ್ತಿದೆ ಎಂಬುದರ ಅಧ್ಯಯನ ನಡೆಸಿ. ಒಂದು ವೇಳೆ ಇದು ನಿಮಗೆ ಅರ್ಥವಾಗುತ್ತಿಲ್ಲ ಎಂದಾದರೆ ಇದಕ್ಕಾಗಿ ನೀವು ನಿಮ್ಮ ಆಪ್ತ ಸ್ನೇಹಿತರ ನೆರವು ಕೂಡ ಪಡೆಯಬಹುದು.
ಇದನ್ನೂ ಓದಿ- Sugarcane Juice: ಕಬ್ಬಿನ ಹಾಲಿನಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು: ಇಲ್ಲಿದೆ ಅದರ ಪ್ರಯೋಜನಗಳು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.