Banana Benefits: ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಗಳು ಸಮೃದ್ಧವಾಗಿದ್ದು ಇದು ನಮ್ಮನ್ನು ಹಲವು ರೀತಿಯ ಕಾಯಿಲೆಗಳಿಂದ ದೂರ ಇರಿಸುವಲ್ಲಿ ಪರಿಣಾಮಕಾರಿ ಆಗಿದೆ. ಆದಾಗ್ಯೂ, ನೀವು ಇದರ ಸಂಪೂರ್ಣ ಲಾಭವನ್ನು ಪಡೆಯಲು ಬಯಸಿದರೆ ಬಾಳೆಹಣ್ಣನ್ನು ಯಾವ ಸಮಯದಲ್ಲಿ ತಿನ್ನಬೇಕು ಎಂಬ ಬಗ್ಗೆಯೂ ತಿಳಿದಿರುವುದು ಅವಶ್ಯಕವಾಗಿದೆ.
ಬಾಳೆಹಣ್ಣು ಮಧುರರಸವನ್ನು ಹೊಂದಿದ್ದು, ಇದು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿ ಆಗಿದೆ. ಹಾಗಾಗಿ, ಸಣ್ಣಗಿರುವವರು ದಪ್ಪ ಆಗಲು ಬಯಸಿದರೆ ನಿತ್ಯ ಒಂದು ಬಾಳೆಹಣ್ಣನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.
ಜಿಂಕ್ ಮತ್ತು ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಿರುವವರು, ಮೂಲವ್ಯಾಧಿ ಸಮಸ್ಯೆ, ಜೀರ್ಣಕಾರಿ ಸಮಸ್ಯೆ ಇರುವವರು ನಿತ್ಯ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ಪರಿಹಾರ ಪಡೆಯಬಹುದು. ಮಲಬದ್ದತೆ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಬಾಳೆಹಣ್ಣು ದಿವ್ಯೌಷಧವಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ- Heart Attack: ಎದೆಯಲ್ಲ.. ನಿಮ್ಮ ಮುಖದ ಈ ಭಾಗದಲ್ಲಿ ಪದೇ ಪದೇ ನೋವು ಕಾಣಿಸಿಕೊಂಡರೆ ಇದು ತೀವ್ರ ಹೃದಯಾಘಾತದ ಮುನ್ಸೂಚನೆ!
ಈ ಸಮಸ್ಯೆ ಇರುವವರು ಬಾಳೆಹಣ್ಣಿನಿಂದ ದೂರವಿದ್ದರೆ ಒಳಿತು:
ಕಫದ ಸಮಸ್ಯೆ ಇರುವವರು, ಸ್ಥೂಲಕಾಯತೆ, ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಬಾಳೆಹಣ್ಣನ್ನು ತಿನ್ನಲೇಬಾರದು.
ಬಾಳೆಹಣ್ಣನ್ನು ತಿನ್ನಲು ಅತ್ಯುತ್ತಮ ಸಮಯ:
ಬಾಳೆಹಣ್ಣನ್ನು ತಿನ್ನಲೂ ಕೂಡ ಒಂದು ಸಮಯವಿದೆ. ಆಯುರ್ವೇದದ ಪ್ರಕಾರ, ರಾತ್ರಿ ಭೋಜನದ ಬಳಿಕ ಒಂದು ಬಾಳೆಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ಇದನ್ನೂ ಓದಿ- ಪಥ್ಯ ಮಾಡುವುದೆಲ್ಲ ಬೇಡ.. ಈ ಹಣ್ಣು ತಿಂದರೇ ಸಾಕು ಎಷ್ಟೇ ಇದ್ದರೂ ನಾರ್ಮಲ್ ಆಗುತ್ತ ಬ್ಲಡ್ ಶುಗರ್!
ಬಾಳೆಹಣ್ಣಿನ ಸಿಪ್ಪೆಯೂ ಲಾಭದಾಯಕ:
ಬಾಳೆಹಣ್ಣಿನಂತೆ ಅದರ ಸಿಪ್ಪೆಯೂ ಕೂಡ ಲಾಭದಾಯಕವಾಗಿದೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಜಿಂಕ್ ಎಂಬ ಅಂಶವಿದ್ದು ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಮಾಡಿ ಒಂದು ಗಂಟೆ ಬಳಿಕ ಫೇಸ್ ವಾಶ್ ಮಾಡಿದ್ರೆ ಅಷ್ಟೇ ಸಾಕು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.