ತಾಜಾ ಹಣ್ಣುಗಳನ್ನು ತಿನ್ನುವುದು ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಹಣ್ಣುಗಳನ್ನು ತಿಂದ ನಂತರವೂ, ಇಂದಿನ ದಿನಗಳಲ್ಲಿ ನಾವು ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಹಣ್ಣುಗಳನ್ನು ತಿನ್ನಲು ನಮಗೆ ಸರಿಯಾದ ಮಾರ್ಗ ತಿಳಿದಿಲ್ಲ. ಹೌದು, ಪೌಷ್ಟಿಕತಜ್ಞ ರುಜುತಾ ದಿವಾಕರ್ ಅವರ ಪ್ರಕಾರ, ಹಣ್ಣುಗಳನ್ನು ತಿನ್ನುವುದರ ಪ್ರಯೋಜನಗಳನ್ನು ಪಡೆಯಲು, ನಾವು ಅವುಗಳನ್ನು ಸರಿಯಾಗಿ ತಿನ್ನುವ ಕ್ರಮಗಳ ಬಗ್ಗೆ ತಿಳಿದಿರಬೇಕು. ಹಣ್ಣುಗಳನ್ನು ತಿನ್ನುವುದರಿಂದ ಆಗುವ ಲಾಭಗಳು ಮತ್ತು ಸರಿಯಾದ ಮಾರ್ಗಗಳ ಬಗ್ಗೆ ಇಂದು ನಾವು ನಿಮಗಾಗಿ ತಂದಿದ್ದೇವೆ.
ಹಣ್ಣುಗಳನ್ನು ಸೇವಿಸುವುದರಂದ ಆಗುವ ಪ್ರಯೋಜನಗಳು
ಯುಎಸ್ಡಿಎ ಪ್ರಕಾರ, ತಾಜಾ ಹಣ್ಣು(Fresh Fruits)ಗಳನ್ನು ತಿನ್ನುವುದು ನಮಗೆ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವ ಜನರು ದೀರ್ಘಕಾಲದ ಕಾಯಿಲೆಯ ಅಪಾಯ ಕಡಿಮೆ. ಹಣ್ಣುಗಳು ನಮ್ಮ ದೇಹಕ್ಕೆ ಬೇಕಾದ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ, ಇದು ಆರೋಗ್ಯಕ್ಕೆ ಮತ್ತು ದೇಹದ ನಿರ್ವಹಣೆಗೆ ಮುಖ್ಯವಾಗಿದೆ.
ಇದನ್ನೂ ಓದಿ : Weight Loss Tips: ರಾತ್ರಿ ಮಲಗುವ ಮುನ್ನ ಈ 3 ವಸ್ತುಗಳನ್ನು ಸೇವಿಸಿ, ತೂಕ ಇಳಿಸಿ
1. ಹೆಚ್ಚಿನ ಹಣ್ಣುಗಳಲ್ಲಿ(Fruits) ಕಡಿಮೆ ಕೊಬ್ಬು, ಸೋಡಿಯಂ ಮತ್ತು ಕ್ಯಾಲೋರಿಗಳಿವೆ. ಅವುಗಳನ್ನ ಬಿಟ್ಟರೆ, ಉಳಿದ ಯಾವುದೇ ಹಣ್ಣಿನ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಿಸುವುದಿಲ್ಲ.
2. ಪೌಷ್ಟಿಕಾಂಶಗಳನ್ನು ಪಡೆಯಲು ಹಣ್ಣುಗಳ ಸೇವನೆ ತುಂಬಾ ಮುಖ್ಯವಾಗಿದೆ. ಉದಾಹರಣೆಗೆ ವಿಟಮಿನ್ ಸಿ, ಆಹಾರದ ಫೈಬರ್ ಮತ್ತು ಫೋಲೇಟ್ ಇರುತ್ತವೆ.
3. ಬಾಳೆಹಣ್ಣು, ಕಿತ್ತಳೆ, ಪೇರಲ, ಕಿವಿ ಹಣ್ಣು ಹೀಗೆ ಮುಂತಾದ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಪೊಟ್ಯಾಸಿಯಮ್ ಅನ್ನು ಸಾಮಾನ್ಯ ಆಹಾರದಿಂದ ಪಡೆಯುವುದು ಕಷ್ಟ, ಈ ಕಾರಣದಿಂದಾಗಿ ರಕ್ತದೊತ್ತಡದಲ್ಲಿ ಸಮಸ್ಯೆಗಳಿಗೆ ಇವು ಸಹಾಯಕವಾಗಿವೆ.
4. ಡೈರಿ ಫೈಬರ್ ಹೊಂದಿರುವ ಹಣ್ಣುಗಳು ರಕ್ತ(Blood)ದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೃದಯ ಕಾಯಿಲೆಯ ಅಪಾಯ ಮತ್ತು ಜೀರ್ಣಕಾರಿ ತೊಂದರೆಗಳು ನಿವಾರಣೆ ಮಾಡುತ್ತವೆ.
5. ವಿಟಮಿನ್-ಸಿ ಹಣ್ಣುಗಳಲ್ಲಿ ಹೇರಳವಾಗಿದೆ. ಇದು ರೋಗನಿರೋಧಕ ವ್ಯವಸ್ಥೆ, ಚರ್ಮ ಇತ್ಯಾದಿಗಳಿಗೆ ಬಹಳ ಮುಖ್ಯವಾಗಿದೆ. ಇದರೊಂದಿಗೆ, ಇದು ದೇಹದಲ್ಲಿ ಕಬ್ಬಿಣದ ಬಳಕೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Benefits of Dry Ginger : ಒಣ ಶುಂಠಿ ಅನೇಕ ರೋಗಗಳಿಗೆ ಮನೆ ಮದ್ದು : ಇಲ್ಲಿದೆ ನೋಡಿ ಅದ್ಭುತ ಪ್ರಯೋಜನಗಳು
ನಿಯಮ 1- ಯಾವುದೇ ಹಣ್ಣನ್ನು ಒಂದೇ ಸೇವಿಸಿ. ಇತರ ಹಣ್ಣುಗಳನ್ನು ಇದರೊಂದಿಗೆ ಬೆರೆಸಿ ಸೇವಿಸಿಬೇಡಿ.
ನಿಯಮ 2- ಹಣ್ಣು ತಿನ್ನಲು ಸರಿಯಾದ ಸಮಯ ಬೆಳಿಗ್ಗೆ, ವ್ಯಾಯಾಮ(Gym)ದ ನಂತರ ಅಥವಾ ಸಂಜೆ.
ನಿಯಮ 3- ನೀವು ಹಣ್ಣನ್ನು ತಿಂದಾಗಲೆಲ್ಲ ಅದನ್ನು ಚೆನ್ನಾಗಿ ಅಗಿದು ತಿನ್ನಿ. ಆದ್ರೆ ಅದರ ರಸ ಹೊರತೆಗೆದು ಸೇವಿಸಬೇಡಿ.
ಇದನ್ನೂ ಓದಿ : Cracked Heels Home Remedy: ಒಡೆದ ಹಿಮ್ಮಡಿಗಳನ್ನು ಬೇಗನೆ ಗುಣಪಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಇದರ ಹೊರತಾಗಿ, ಹಣ್ಣುಗಳನ್ನು ತಿನ್ನುವಾಗ, ಹಣ್ಣನ್ನು ಪೂರ್ತಿ ತಿನ್ನಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರೊಂದಿಗೆ, ಕಾಲೋಚಿತ ಹಣ್ಣುಗಳನ್ನು ಸೇರಿಸಬೇಕು ಮತ್ತು ಹಣ್ಣುಗಳನ್ನು ನೇರವಾಗಿ ಕೈಗಳಿಂದ ತಿನ್ನಬೇಕು, ಯಾವುದೇ ಚಮಚ ಅಥವಾ ಫೋರ್ಕ್ನಿಂದ ಅಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ