Farmers Protest : ಬಗೆಹರಿಯುತ್ತಾ ಬಿಕ್ಕಟ್ಟು? ; ಇಂದು ರೈತರೊಂದಿಗೆ ಸರ್ಕಾರದ ಮಹತ್ವದ ಮಾತುಕತೆ

ಮಧ್ಯಾಹ್ನ ವಿಜ್ಞಾನ ಭವನದಲ್ಲಿ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.  2 ಗಂಟೆಗೆ ಈ ಮಾತುಕತೆ ಆರಂಭವಾಗಲಿದೆ. 

Written by - Zee Kannada News Desk | Last Updated : Dec 30, 2020, 11:13 AM IST
  • 35 ನೇ ದಿನಕ್ಕೆ ಕಾಲಿರಿಸಿದ ಅನ್ನದಾತರ ಆಂದೋಲನ
  • ವಿಜ್ಞಾನ ಭವನದಲ್ಲಿ ರೈತರೊಂದಿಗೆ ಸರ್ಕಾರದ ಮಾತುಕತೆ
  • ನಾಳೆ ದೆಹಲಿಯಲ್ಲಿ ರೈತರಿಂದ ಟ್ರ್ಯಾಕ್ಟರ್ ಜಾಥಾ
Farmers Protest : ಬಗೆಹರಿಯುತ್ತಾ ಬಿಕ್ಕಟ್ಟು? ; ಇಂದು ರೈತರೊಂದಿಗೆ ಸರ್ಕಾರದ ಮಹತ್ವದ ಮಾತುಕತೆ  title=
ಇಂದು ಸರ್ಕಾರ ಮತ್ತು ರೈತರ ನಡುವೆ ಮಾತುಕತೆ ನಡೆಯಲಿದೆ (file photoe)

ನವದೆಹಲಿ : ಅನ್ನದಾತರ  ಆಂದೋಲನ (Farmer Protest) ಇಂದು 35 ನೇ ದಿನಕ್ಕೆ ಕಾಲಿರಿಸಿದೆ.  ನಡುಗುವ ಚಳಿಯಲ್ಲಿ ದೆಹಲಿಯ ಗಡಿ ಭಾಗಗಳಲ್ಲಿ ರೈತರ ಆಂದೋಲನ ಮುಂದುವರಿದಿದೆ.  ಈ ನಡುವೆ ಬಿಕ್ಕಟ್ಟು ಶಮನದ ಆಶಾಕಿರಣವೊಂದು ಗೋಚರಿಸಿದೆ. ಮಧ್ಯಾಹ್ನ ವಿಜ್ಞಾನ ಭವನದಲ್ಲಿ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.  2 ಗಂಟೆಗೆ ಈ ಮಾತುಕತೆ ಆರಂಭವಾಗಲಿದೆ. 

ಕೇಂದ್ರ ಸರ್ಕಾರದ ಮಾತುಕತೆ ಪ್ರಸ್ತಾವ  ಒಪ್ಪುವ ಮುನ್ನ ರೈತರ (Farmers) ಸಂಘಟನೆಗಳು  ಕೆಲವು ಷರತ್ತುಗಳನ್ನು ವಿಧಿಸಿವೆ. ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸುವ ವಿಧಿವಿಧಾನಗಳನ್ನು ಚರ್ಚಿಸಬೇಕು. ಕನಿಷ್ಠ ಬೆಂಬಲ ಬೆಲೆ ಎಂಎಸ್ ಪಿಗೆ ಕಾನೂನು ರೂಪ ನೀಡಬೇಕು ಎನ್ನುವುದು ರೈತ ಸಂಘಟನೆಗಳ ಪ್ರಧಾನ ಬೇಡಿಕೆ.

ALSO READ :  Farmers Protest: ನಾವು ಸಹ ರೈತರೊಂದಿಗೆ ಇದ್ದೇವೆ, ರೈತರನ್ನು ಬೆಂಬಲಿಸಿದ ಟ್ಯಾಕ್ಸಿ ಯೂನಿಯನ್​​

ಸಚಿವರ ಸಭೆ ನಡೆಸಿದ ಸರ್ಕಾರ : 
 ಈ ನಡುವೆ, ಮಂಗಳವಾರ ಗೃಹ ಸಚಿವ ಅಮಿತ್ ಶಾ, (Amith  Shah) ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್,  (Narendra Singh Tomar) ವಾಣಿಜ್ಯ ಸಚಿವ ಪಿಯೂಶ್ ಗೋಯಲ್  (Piyush Goyal) ನಡುವೆ ಮಾತುಕತೆ ನಡೆಯಿತು.  ರೈತರೊಂದಿಗಿನ ಸಭೆಯಲ್ಲಿ ಸರ್ಕಾರದ ಕಾರ್ಯತಂತ್ರದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು. ಸುಮಾರು ಒಂದೂವರೆ ಗಂಟೆ  ಈ ಸಭೆ ನಡೆದಿತ್ತು. 

ಇಂದಿನ ಸಭೆ ಅತ್ಯಂತ ಮಹತ್ವ ಪಡೆದಿದೆ. ಬಿಕ್ಕಟ್ಟು ಬಗೆಹರಿಸುವ  ಕೈಬಿಡುವ ವಿಶ್ವಾಸವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ. ಜೊತೆಗೆ, ದಿಲ್ಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ಜಾಥಾವನ್ನು  (Tractor Rally)  ಒಂದು ದಿನದ ಮಟ್ಟಿಗೆ ರೈತ ಸಂಘಟನೆಗಳು ಮುಂದೂಡಿವೆ. ಟ್ರ್ಯಾಕ್ಟರ್  ಜಾಥಾ ನಾಳೆ ನಡೆಯಲಿದೆ.

ALSO READ : Farmers Protest: ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ

ಈ ನಡುವೆ, ದೆಹಲಿಯ ಸಿಂಘು, ಟೇಕ್ರಿ, ಘಾಜಿಯಾಬಾದ್, ಚಿಲ್ಲಾ ಗಡಿಗಳಲ್ಲಿ ರೈತರ ಆಂದೋಲನ (Farmer Protest) ಮುಂದುವರಿದಿದೆ.  ನಡುಗುವ ಚಳಿಯಲ್ಲೂ ರೈತರೂ ತಮ್ಮ ಆಂದೋಲನ ಮುಂದುವರಿಸಿದ್ದಾರೆ.  ಈ ನಡುವೆ, ಹೇಳಿಕೆ ನೀಡಿರುವ ರೈತ ನಾಯಕ ರಾಕೇಶ್ ಟಿಕಾಯತ್, ಮಸೂದೆಗೆ ತಿದ್ದುಪಡಿ ತರುವ ಯಾವುದೇ ಪ್ರಸ್ತಾಪವನ್ನು ರೈತರು ಒಪ್ಪುವುದಿಲ್ಲ. ಸಂಪೂರ್ಣ ಮಸೂದೆಯನ್ನೇ ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News