ನವದೆಹಲಿ : ರಾಜಧಾನಿ ದೆಹಲಿಯಲ್ಲಿ ಕರೋನಾ (Coronavirus) ಅಟ್ಟಹಾಸ ಮೆರೆಯುತ್ತಿದೆ. ಮೆಡಿಕಲ್ ಮೂಲಸೌಕರ್ಯ ವ್ಯವಸ್ಥೆಗಳು ಕುಸಿದು ಬೀಳುವ ಹಂತದಲ್ಲಿದೆ. ಆಸ್ಪತ್ರೆಗಳಲ್ಲಿ ಬೆಡ್, ಅಕ್ಸಿಜನ್ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಆಕ್ಸಿಜನ್, ಬೆಡ್ ಗಳಿಲ್ಲದೆ ದೊಡ್ಡ ದೊಡ್ಡ ಆಸ್ಪತ್ರೆಗಳೇ ಕೈಚೆಲ್ಲಿ ಕುಳಿತಿವೆ. ಕರೋನಾ ಕೇಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಲಾಕ್ ಡೌನ್ ಮತ್ತೊಂದು ವಾರ ವಿಸ್ತರಣೆ :
ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಆರು ದಿನಗಳವರೆಗೆ ಲಾಕ್ ಡೌನ್ (Lockdown) ವಿಸ್ತರಿಸಲಾಗಿದೆ. ಮುಂದಿನ ಸೋಮವಾರ ಬೆಳಿಗ್ಗೆ 5 ಗಂಟೆವೆರೆಗೆ ರಾಜ್ಯದಲ್ಲಿ ಲಾಕ್ ಡೌನ್ ಇರಲಿದೆ. ಇದಕ್ಕೂ ಮುನ್ನ ಒಂದು ವಾರಗಳವರೆಗೆ , ರಾಜ್ಯದಲ್ಲಿ ಲಾಕ್ ಡೌನ್ ಹೇರಲಾಗಿತ್ತು. ಲಾಕ್ ಡೌನ್ ಜಾರಿಯಲ್ಲಿದ್ದರೂ, ಕರೋನಾ (Coronavirus) ಪ್ರಕರಣದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಕೇಸ್ ಗಳು ನಿಧಾನಗತಿಯಲ್ಲಿ ಏರುತ್ತಲೇ ಇವೆ.
We had imposed a 6-day lockdown in Delhi. The lockdown is being extended to next Monday till 5 am: Delhi CM Arvind Kejriwal #COVID19 pic.twitter.com/s1eHgZmaHN
— ANI (@ANI) April 25, 2021
ಇದನ್ನೂ ಓದಿ : Oxygen Supply ತಡೆ ಹಿಡಿಯುವವರನ್ನು ಗಲ್ಲಿಗೇರಿಸಲಾಗುವುದು: ಹೈಕೋರ್ಟ್
ದೆಹಲಿಯ ವರ್ತಕರ ಸಂಘಟನೆಯು ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಪರವಾಗಿತ್ತು. ದೆಹಲಿಯ (Delhi) ನಾಗರಿಕರಲ್ಲೂ ಈ ವಿಷಯದಲ್ಲಿ ಅಷ್ಟೊಂದು ವಿರೋಧ ಇಲ್ಲ. ಈ ಹಿನ್ನೆಲೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಲಾಕ್ ಡೌನ್ ವಿಸ್ತರಣೆಗೆ ಈಗಾಗಲೇ ಶಿಫಾರಸು ಮಾಡಿತ್ತು. ಕೇಜ್ರಿವಾಲ್ ಸರ್ಕಾರ (Kejriwal government) ಸಂಬಂಧಿತರೊಂದಿಗೆ ಚರ್ಚೆ ನಡೆಸಿ ಲಾಕ್ ಡೌನ್ ವಿಸ್ತರಣೆಯ ಘೋಷಣೆ ಮಾಡಿದೆ. ದೆಹಲಿ ಲಾಕ್ ಡೌನ್ ನಲ್ಲಿ (Delhi Lockdown) ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ಇದೆ. ಉಳಿದಂತೆ ಎಲ್ಲಾ ವ್ಯವಹಾರಗಳು ಬಂದ್ ಆಗಲಿವೆ.
ಇದನ್ನೂ ಓದಿ : Oxygen Tanker: ಸಿಂಗಾಪುರ ಮತ್ತೆ UAE ಯಿಂದ ಭಾರತಕ್ಕೆ ಆಕ್ಸಿಜನ್ ಆಮದಿಗೆ ಸರ್ಕಾರ ಸಿದ್ಧತೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.